Friday , April 20 2018
Home / Interval / ಆನೆ ಸತ್ತಿದ್ದಕ್ಕೆ ಎರಡು ವಾರ ತಾಯಿಯೊಂದಿಗೆ ಕೋಪದಲ್ಲಿ ಮಾತು ಬಿಟ್ಟಿದ್ದರು ಕಾಜೋಲ್…!

ಆನೆ ಸತ್ತಿದ್ದಕ್ಕೆ ಎರಡು ವಾರ ತಾಯಿಯೊಂದಿಗೆ ಕೋಪದಲ್ಲಿ ಮಾತು ಬಿಟ್ಟಿದ್ದರು ಕಾಜೋಲ್…!

ಆಗ ನಟಿ ಕಾಜೋಲ್‍ಗೆ ಆರು ವರ್ಷ. ಕಾಜೋಲ್ ತಾಯಿ ಆ ಸಂದರ್ಭದಲ್ಲಿ ಬಾಲಿವುಡ್‍ನ ದೊಡ್ಡ ನಟಿ. ಅವರ ಹೆಸರು ತನುಜಾ. ಅದು ರಾಜೇಶ್ ಖನ್ನಾ ಜೊತೆಗಿನ `ಹಾತಿ ಮೇರಿ ಸಾತಿ’ ಚಿತ್ರ ತೆರೆಗೆ ಬಂದಂತಹ ಸಂದರ್ಭ. ನಟಿ ತನುಜಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಆ ಸಿನೆಮಾ ತೋರಿಸಲು ಹೋಗಿದ್ದರು. ಈ ಚಿತ್ರ ನೋಡಿ ಮನೆಗೆ ಬಂದ ಕಾಜೋಲ್ ತಾಯಿಯನ್ನು ಕಂಡು ಸಿಟ್ಟಾಗಿದ್ದರು. ಕೋಪದಿಂದ ಮನೆಯ ಕೋಣೆಯೊಳಗೆ ಹೋಗಿ ಕುಳಿತಿದ್ದರು…! ತನುಜಾಗೂ ಕನ್‍ಫ್ಯೂಷನ್. ಮಗಳು ಯಾಕೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದು. ಕೊನೆಗೆ ಗೊತ್ತಾಯ್ತು. ಅದೇನೆಂದರೆ, ಹಾತಿ ಮೇರಿ ಸಾತಿ ಚಿತ್ರದಲ್ಲಿ ಆನೆ ಸಾಯುವ ದೃಶ್ಯವಿದೆ. ಈ ಆನೆಯ ಸಾವಿಗೆ ತನ್ನ ತಾಯಿಯೇ ಕಾರಣ ಎಂಬ ಕೋಪ ಕಾಜೋಲ್‍ರದ್ದು…! ಎಷ್ಟು ಸಮಾಧಾನ ಮಾಡಿದರೂ ಕಾಜೋಲ್ ಸರಿ ಆಗಲಿಲ್ಲ. ಹೀಗೆಯೇ ಎರಡು ವಾರ ಕಳೆಯಿತು. ಪುಟಾಣಿ ಕಾಜೋಲ್ ಕೋಪ ಇನ್ನೂ ತಣಿದಿರಲಿಲ್ಲ. ಬಳಿಕ ಸ್ವಲ್ಪ ದಿನ ಆದ್ಮೇಲೆ ಕಾಜೋಲ್‍ಗೂ ಇದು ಮರೆತು ಹೋಗಿತ್ತು…

ಒಂದಷ್ಟು ವರ್ಷಗಳ ಬಳಿಕ ಅಲ್ಲಿಗೆ ಸರ್ಕಸ್ ಕಂಪೆನಿಯೊಂದು ಬಂದಿತ್ತು. ತನುಜಾ ಅವರು ಕೂಡಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಆ ಸರ್ಕಸ್‍ಗೆ ಹೋಗಿದ್ದರು. ಅಲ್ಲಿ ಆನೆಯೊಂದು ತನುಜಾ ಪಕ್ಕದಲ್ಲಿ ಬಂದು ಅವರನ್ನು ಎಳೆಯುತ್ತಿತ್ತು. ತನುಜಾ ಒಮ್ಮೆ ಹೆದರಿದರು. ಆಗ ಸರ್ಕಸ್‍ನವರು ಬಂದು, ಈ ಆನೆಯ ಗುರುತು ಸಿಗಲಿಲ್ಲವೇ ಎಂದು ಕೇಳಿದರು. ತನುಜಾ ಇಲ್ಲ ಎಂದರು. ನಿಮ್ಮ ಹಾತಿ ಮೇರಿ ಸಾತಿ ಚಿತ್ರದಲ್ಲಿ ನಿಮ್ಮೊಂದಿಗೆ ಇದ್ದ ಆನೆ ಇದೇ ಎಂದರು ಅವರು. ತನುಜಾಗೆ ಹೃದಯವೇ ತುಂಬಿ ಬಂದಂತಹ ಅನುಭವ. ಆನೆ ತನುಜಾರನ್ನು ಗುರುತು ಹಿಡಿದಿತ್ತು. ತನುಜಾಗೆ ಖುಷಿಯೋ ಖುಷಿ. ಕಾಜೋಲ್‍ಗೂ ಅಷ್ಟೇ ಸಿನೆಮಾದಲ್ಲಿ ಆನೆ ಸತ್ತಿಲ್ಲ ಎಂಬ ಸಮಾಧಾನ…!

About sudina

Check Also

‘ಅಮರ್ ಅಕ್ಬರ್ ಅಂಥೋನಿ’ ಚಿತ್ರದ ಕತೆ ಹುಟ್ಟಿದ್ದು ಹೇಗೆ ಗೊತ್ತಾ…?

ಅದು 70ರ ದಶಕ. ನಿರ್ದೇಶಕ ಮನ್ಮೋಹನ್ ದೇಸಾಯಿ ಬೆಳಗ್ಗೆ ಪೇಪರ್ ಓದುತ್ತಿದ್ದರು. ಈ ವೇಳೆ. ಒಂದು ಸುದ್ದಿ ದೇಸಾಯಿ ಅವರನ್ನು …

Leave a Reply

Your email address will not be published. Required fields are marked *

error: Content is protected !!