Monday , February 18 2019
ಕೇಳ್ರಪ್ಪೋ ಕೇಳಿ
Home / Film News / Kollywood / ನಾನು ರಾಜಕೀಯದಲ್ಲಿ ಬದಲಾವಣೆ ತರುತ್ತೇನೆ : ಹೊಸ ಪಕ್ಷದ ಸುಳಿವು ನೀಡಿದ ಕಮಲ್ ಹಾಸನ್

ನಾನು ರಾಜಕೀಯದಲ್ಲಿ ಬದಲಾವಣೆ ತರುತ್ತೇನೆ : ಹೊಸ ಪಕ್ಷದ ಸುಳಿವು ನೀಡಿದ ಕಮಲ್ ಹಾಸನ್

ಚೆನ್ನೈ : ಸೂಪರ್​ಸ್ಟಾರ್​ ರಜನಿಕಾಂತ್ ಹೊಸ ಪಕ್ಷ ರಚನೆ ವಿಚಾರ ಜೋರಾಗಿರುವಾಗಲೇ ಮತ್ತೋರ್ವ ಸೂಪರ್​ ಸ್ಟಾರ್ ಕಮಲ್ ಹಾಸನ್ ಕೂಡಾ ರಾಜಕೀಯ ಪಕ್ಷ ಸ್ಥಾಪನೆಯ ಸುಳಿವು ನೀಡಿದ್ದಾರೆ. ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ತಮಿಳುನಾಡು ರಾಜಕೀಯದಲ್ಲಿ ‘ಬದಲಾವಣೆ’ ತರುವ ಭರವಸೆ ನೀಡಿದ್ದಾರೆ. ಈ ಮೂಲಕ ಕಮಲ್ ಹಾಸನ್ ರಾಜಕೀಯ ಪ್ರವೇಶದ ಬಗೆಗೆ ಎದ್ದಿದ್ದ ಊಹಾಪೋಹಗಳಿಗೆ ಉಲಗನಾಯಕ ತೆರೆ ಎಳೆದಿದ್ದಾರೆ.

ರಾಜಕೀಯದಲ್ಲಿರುವ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಕಮಲ್​ ಹಾಸನ್ ಈ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ನನ್ನ ಸಿದ್ಧಾಂತಕ್ಕೆ ಒಪ್ಪುವ ರಾಜಕೀಯ ಪಕ್ಷಗಳು ಇಲ್ಲ. ರಾಜಕೀಯದಲ್ಲಿ ನನ್ನ ಗುರಿ ಮುಟ್ಟಲು ಈ ಪಕ್ಷಗಳು ಸಹಕಾರಿಯಾಗುತ್ತದೆ ಎಂಬ ನಂಬಿಕೆ ನನಗಿಲ್ಲ ಎಂದು ಹೇಳುವ ಮೂಲಕ ಕಮಲ್ ಹೊಸ ಪಕ್ಷದ ಸುಳಿವು ಕೂಡಾ ನೀಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!