Saturday , October 20 2018
ಕೇಳ್ರಪ್ಪೋ ಕೇಳಿ
Home / Mumbai Mail / ಕರುಣೆಯೇ ಇಲ್ಲದ ಟ್ಯೂಷನ್ ಟೀಚರ್…!: ಅಯ್ಯೋ ಕಂದ…

ಕರುಣೆಯೇ ಇಲ್ಲದ ಟ್ಯೂಷನ್ ಟೀಚರ್…!: ಅಯ್ಯೋ ಕಂದ…

ಪುಣೆ : ಮಕ್ಕಳ ಮೇಲೆ ಈಗೀಗ ದೌರ್ಜನ್ಯ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲೆಗಳಲ್ಲಿಯೇ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ. ಮೊನ್ನೆಯಷ್ಟೇ ಗುರುಗ್ರಾಮ್‍ನ ರ್ಯಾನ್ ಶಾಲೆಯಲ್ಲಿ ವಿದ್ಯಾರ್ಥಿಯ ಕೊಲೆ ನಡೆದಿತ್ತು. ಈ ಘಟನೆ ಹಸಿರಾಗಿರುವಾಗಲೇ ಮಗುವಿನ ಮೇಲಿನ ದೌರ್ಜನ್ಯದ ಇನ್ನೊಂದು ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ.

ಟ್ಯೂಷನ್ ಟೀಚರ್‍ವೊಬ್ಬರು ಚಿಕ್ಕ ಮಗುವಿನ ಮೇಲೆ ಕ್ರೌರ್ಯ ತೋರಿದ್ದಾರೆ. ಈ ಟೀಚರ್ ಅದೆಷ್ಟು ಜೋರಾಗಿ ಈ ಕಂದನಿಗೆ ಹೊಡೆದಿದ್ದಾರೆ ಎಂದರೆ ಮೂರು ದಿನವಾದರೂ ಮಗುವಿನ ಮುಖದ ಮೇಲಿನ ಊತ ಇನ್ನೂ ಕಡಿಮೆ ಆಗಿಲ್ಲ. ಇಲ್ಲಿನ ಪಿಂಪಲ್ ಸೌದಾಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 11 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಬುಧವಾರ ರಾತ್ರಿಯಷ್ಟೇ ಈ ಟ್ಯೂಷನ್ ಟೀಚರ್ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಮಗುವಿನ ಹೆತ್ತವರು ನೀಡಿದ ದೂರಿನ ಅನ್ವಯ ಪೊಲೀಸರು ಈ ಟೀಚರ್ ಅನ್ನು ಬಂಧಿಸಿದ್ದಾರೆ. ಬಂಧಿತ ಶಿಕ್ಷಕಿಯನ್ನು ಭಾಗ್ಯಶ್ರೀ ಪಿಳ್ಳೈ ಎಂದು ಗುರುತಿಸಲಾಗಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!