Tuesday , August 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಕಿಕ್​ 2 ಚಿತ್ರದಲ್ಲಿ ಸಲ್ಮಾನ್ ಜೊತೆ ದೀಪಿಕಾ ರೊಮ್ಯಾನ್ಸ್​…?

ಕಿಕ್​ 2 ಚಿತ್ರದಲ್ಲಿ ಸಲ್ಮಾನ್ ಜೊತೆ ದೀಪಿಕಾ ರೊಮ್ಯಾನ್ಸ್​…?

ಮುಂಬೈ : ಸಲ್ಮಾನ್ ಖಾನ್​ ಈಗ ತಮ್ಮ ಕಿಕ್​​ 2 ಚಿತ್ರದ ಸಿದ್ಧತೆಯಲ್ಲಿದ್ದಾರೆ. ಆದರೆ, ಕಿಕ್​​2 ಚಿತ್ರದಲ್ಲಿ ಸಲ್ಲೂ ಜೊತೆ ರೊಮ್ಯಾನ್ಸ್ ಮಾಡುವ ನಾಯಕಿ ಯಾರು? ಹೀಗಂತ ತುಂಬಾ ದಿನದಿಂದ ಪ್ರಶ್ನೆಗಳು ಎದ್ದಿದ್ದವು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ… ದೀಪಿಕಾ ಪಡುಕೋಣೆ ಸಲ್ಮಾನ್​​​​ಗೆ ಕಿಕ್​2ನಲ್ಲಿ ಜೊತೆಯಾಗಿದ್ದಾರೆ..

ಕಿಕ್​… 2014ರಲ್ಲಿ ಬಾಲಿವುಡ್​ನಲ್ಲಿ ಸಾಕಷ್ಟು ಸಕ್ಸಸ್ ಗಳಿಸಿದ ಚಿತ್ರ. ಈ ಚಿತ್ರದ ಮೂಲಕ ಸಲ್ಮಾನ್ ಖಾನ್ ಮತ್ತು ಜಾಕ್ಲಿನ್ ಫರ್ನಾಂಡೀಸ್ ಸೂಪರ್​ ಸಕ್ಸಸ್ ಜೋಡಿಯಾಗಿ ಹೊರಹೊಮ್ಮಿದ್ದರು… ಇದೀಗ ಸಲ್ಲೂ ಕಿಕ್​ 2 ಚಿತ್ರದ ಸಿದ್ಧತೆಯಲ್ಲಿದ್ದಾರೆ. ಹೀಗಾಗಿ, ಕಿಕ್​ ಸೀಕ್ವೆಲ್​ನಲ್ಲೂ ಹಳೆಯ ಜೋಡಿಯೇ ಮೋಡಿ ಮಾಡಬಹುದು ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಜೋರಾಗಿತ್ತು. ತೀರಾ ಇತ್ತೀಚಿನ ವರೆಗೆ ಸಲ್ಲೂಗೆ ಜಾಕ್ಲಿನ್ ಅವರೇ ಜೊತೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಕಿಕ್​2 ನಿಂದ ಜಾಕ್ಲಿನ್ ಕಿಕೌಟ್ ಆಗಿದ್ದಾರೆ…! ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಕಿಕ್​ 2ನಲ್ಲಿ ಓರಿಜಿನಲ್​ ಜೋಡಿ ಇರುವುದಿಲ್ಲ. ಬದಲಾಗಿ ಜಾಕ್ಲಿನ್​ ಜಾಗಕ್ಕೆ ಬೆಡಗಿ ದೀಪಿಕಾ ಪಡುಕೋಣೆ ಬಂದಿದ್ದಾರೆ…

ಚಿತ್ರ ನಿರ್ಮಾತೃಗಳಿಗೆ ಸಲ್ಮಾನ್ ಖಾನ್ ಜೊತೆ ಇದುವರೆಗೆ ಸ್ಕ್ರೀನ್ ಶೇರ್ ಮಾಡದೇ ಇರುವ ನಾಯಕಿಯರು ಈ ಚಿತ್ರಕ್ಕೆ ಬೇಕಿತ್ತು. ಹೀಗೆ, ಯಾರಾಗಬಹುದು ನಾಯಕಿಯರು ಎಂದು ಹುಡುಕಾಟದಲ್ಲಿ ಇರುವಾಗ ಇವರಿಗೆ ದೀಪಿಕಾ ಕಣ್ಣಿಗೆ ಬಿದ್ದಿದ್ದಾರೆ. ಹೀಗಾಗಿ, ದೀಪಿಕಾರೇ ಬೆಟರ್​ ಚಾಯಿಸ್​​​ ಎಂದು ಅರಿತ ನಿರ್ಮಾತೃಗಳು ಜಾಕ್ಲಿನ್ ಜಾಗಕ್ಕೆ ದೀಪಿಕಾರನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ದೀಪಿಕಾ ಮತ್ತು ಸಲ್ಮಾನ್ ಈ ಹಿಂದೆಯೇ ಒಟ್ಟಾಗಿ ಅಭಿನಯಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಸಲ್ಮಾನ್ ನಿರೂಪಣೆಯ ಬಿಗ್​ಬಾಸ್​ ಸೆಟ್​ಗೂ ಬಂದಿದ್ದ ದೀಪಿಕಾ ಇದೇ ಮಾತನ್ನು ಆಡಿದ್ದರು. ಆದರೆ, ಇದುವರೆಗೆ ಅದು ಸಾಧ್ಯವಾಗಿರಲಿಲ್ಲ. ಈಗ ಈ ಎಲ್ಲದಕ್ಕೂ ಕಾಲ ಕೂಡಿ ಬಂದಿದೆ. ಸದ್ಯ ದೀಪಿಕಾ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿದ್ದು ಮುಂದಿನ ವರ್ಷದ ಇದೇ ಅವಧಿಗೆ ಚಿತ್ರೀಕರಣದಲ್ಲಿ ಡಿಪ್ಸ್ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು, ಸದ್ಯ ಸಲ್ಮಾನ್ ಮತ್ತು ಜಾಕ್ಲಿನ್ ರೇಸ್​ 3 ಚಿತ್ರದ ಶೂಟಿಂಗ್​ನಲ್ಲಿ ಶೀಘ್ರ ತೊಡಗಿಕೊಳ್ಳಲಿದ್ದು, ಪ್ರೇಕ್ಷಕರಿಗೆ ಫ್ರೆಶ್​ ಪೇರಿಂಗ್​ನ ಫೀಲ್​​​​ ಸಿಗಲಿದೆ. ಸಲ್ಲೂ ಕೂಡಾ ಈಗ ತಮ್ಮ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ… ಎಲ್ಲಾ ಅಂದುಕೊಂಡಂತೆ ಆದರೆ 2019ರ ಕ್ರಿಸ್​ಮಸ್​​ ವೇಳೆಗೆ ಈ ಚಿತ್ರ ರಿಲೀಸ್​ ಮಾಡಲು ನಿರ್ಮಾತೃಗಳು ನಿರ್ಧರಿಸಿದ್ದಾರೆ.

 

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!