ಬೆಂಗಳೂರು : ಪ್ರೀತಿ ಎಂಬುದು ಮಾಯೆ. ಅದರಲ್ಲೂ ಹದಿಹರೆಯದ ಪ್ರೀತಿ ಇದೆಯಲ್ವಾ ಅದು ತುಂಬಾ ಡೇಂಜರ್. ಈಗಿನ ಸುದ್ದಿ ಕೂಡಾ ಅಂತಹದ್ದೇ… ವಾಟ್ಸ್ ಆಪ್ ಮೂಲಕ ತನ್ನ ಪ್ರಿಯತಮನಿಗೆ ಅಂದು ನಗ್ನ ಫೋಟೋ ಕಳುಹಿಸಿದ್ದ ಯುವತಿಗೆ ಈಗ ಮದುವೆ ಬಳಿಕವೂ ಕಷ್ಟ ತಪ್ಪಿಲ್ಲ…!
ಸದ್ಯ ಈ ಯುವತಿಗೆ 20 ವರ್ಷ. ಬೆಂಗಳೂರಿನಲ್ಲಿ ಡೆಂಟಲ್ ಸೈನ್ಸ್ ಓದುತ್ತಿದ್ದಳು. ಆದರೆ, ಸುಮಾರು 18 ವರ್ಷ ಇರುವಾಗ ಈಕೆ ಪ್ರೀತಿಗೆ ಬಿದ್ದಿದ್ದಳು. ಹೀಗೆ ಪ್ರೀತಿಗೆ ಬಿದ್ದ ಈಕೆ ಪ್ರಿಯತಮ ಕೇಳಿದನೆಂದು ವಾಟ್ಸ್ಆಪ್ನಲ್ಲಿ ನಗ್ನ ಫೋಟೋ ಕಳುಹಿಸಿದ್ದಳು. ಅಂದು ಈಕೆ ತನ್ನ ಪ್ರಿಯತಮನನ್ನು ಕುರುಡಾಗಿ ನಂಬಿದ್ದಳು. ಆದರೆ, ಆತ ಮಾತ್ರ ಸಿಕ್ಕಿದ್ದೇ ಚಾನ್ಸ್ ಎಂದು ಈ ಫೋಟೋಗಳನ್ನೆಲ್ಲಾ ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಇಲ್ಲಿಂದ ಶುರುವಾಗಿತ್ತು ಸಮಸ್ಯೆ. ಈತನಿಂದ ಫೋಟೋ ಪಡೆದ ವ್ಯಕ್ತಿಯೊಬ್ಬ ಈಕೆಯೊಂದಿಗೆ ದೈಹಿಕ ಸಂಪರ್ಕಕ್ಕೆ ಬೆದರಿಕೆಯೊಡ್ಡಲು ಆರಂಭಿಸಿದ್ದ. ಇನ್ನೂ ಕೆಲವರಿಂದ ಈಕೆಗೆ ಕಾಟ ಶುರುವಾಗಿತ್ತು.
ಈ ಸಂದರ್ಭದಲ್ಲಿ ಹತ್ತನೇ ಕ್ಲಾಸ್ ಡ್ರಾಪ್ ಔಟ್ ಯುವಕನೊಬ್ಬ ಈ ಯುವತಿಯ ರಕ್ಷಣೆಗೆ ಬಂದವನಂತೆ ಬಂದ. ಈಕೆಯ ಫೋಟೋ ವಾಟ್ಸ್ ಆಪ್ಗಳಲ್ಲಿ ಹರಿದಾಡುತ್ತಿರುವ ವಿಷಯವನ್ನೂ ಯುವತಿಗೆ ತಿಳಿಸಿದ. ಅಲ್ಲದೆ, ಯುವತಿಗೆ ಕಾಟ ಕೊಡುವ ಎಲ್ಲರಿಗೂ ಹೊಡೆದ ಫೋಟೋವನ್ನು ಡಿಲೀಟ್ ಮಾಡಿಸಿದ. ಹೀಗೆ ಯುವತಿ ಮುಂದೆ ಹೀರೋ ಆದ ಈತ ಬಳಿಕ ಆಕೆಯೊಂದಿಗೆ ತನ್ನ ಪ್ರೇಮವನ್ನು ನಿವೇದಿಸಿಕೊಂಡ. ಆಕೆ ಕೂಡಾ ಪ್ರೀತಿಯನ್ನು ಒಪ್ಪಿಕೊಂಡಳು. ಮದುವೆಯವರ ವಿರೋಧದ ನಡುವೆಯೂ 2016ರ ಮಧ್ಯಭಾಗದಲ್ಲಿ ಇವರು ಮದುವೆ ಆದರು. ಇದಾದ ಬಳಿಕವೇ ಶುರುವಾಗಿದ್ದು ಹೊಸ ಸಮಸ್ಯೆ…!
ಮದುವೆ ಬಳಿಕ ಇವರಿಬ್ಬರು ಯಶವಂತಪುರದಲ್ಲಿ ನೆಲೆಸಿದರು. ಈಕೆ ತನ್ನ ಶಿಕ್ಷಣವನ್ನೂ ಮುಂದುವರಿಸಿದಳು. ಆದರೆ, ಕೆಲವು ದಿನಗಳ ಬಳಿಕ ಈಕೆಯ ತನ್ನ ಮನೆಯಲ್ಲಿ ಹಿಂಸೆ ಶುರುವಾಗಿತ್ತು. ಗಂಡ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಶುರು ಮಾಡಿದ್ದ. ಮಳೆಗಾಲದಲ್ಲಿ ತನ್ನೀರಲ್ಲಿ ಸ್ನಾನ ಮಾಡುವಂತೆ ಹೇಳುವುದು, ಬಲವಂತದಿಂದ ದೈಹಿಕ ಸಂಪರ್ಕ ಮಾಡುವುದು ಹೀಗೆ ಅನೇಕ ಹಿಂಸೆಯನ್ನು ಈಕೆ ಅನುಭವಿಸಬೇಕಾಗಿತ್ತು. ಹೀಗಾಗಿ, ಒಂದು ದಿನ ಈಕೆ ಗಂಡನ ಮನೆಯಿಂದ ತಪ್ಪಿಸಿಕೊಂಡು ಹೆತ್ತವರ ಮನೆಗೆ ಬಂದಳು. ಬಳಿಕ ಪೊಲೀಸರಿಗೆ ದೂರು ನೀಡಲು ಇಷ್ಟವಿಲ್ಲದೆ ವನಿತಾ ಸಹಾಯವಾಣಿಯ ಮೊರೆ ಹೋದಳು. ಇನ್ನೊಂದು ಕಡೆ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಪತಿ ಕಾನೂನು ಮತ್ತು ಪೊಲೀಸರ ಮೊರೆ ಹೋಗಿದ್ದ. ಇದಾದ ಬಳಿಕವೇ ಪ್ರಕರಣ ಇನ್ನಷ್ಟು ನಾಟಕೀಯ ತಿರುವು ಪಡೆದುಕೊಳ್ಳಲು ಆರಂಭಿಸಿತ್ತು.
ಈ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ನಿರ್ಧರಿಸಲಾಗಿತ್ತು. ಆದರೆ, ಈತ ಪತ್ನಿ ಬರದಿದ್ದರೆ ಕೌನ್ಸಿಲಿಂಗ್ ಕೋಣೆಯಲ್ಲೇ ಕತ್ತು ಕೊಯ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಲಾರಂಭಿಸಿದ. ಇನ್ನೊಂದು ಸಲ ವಿಷ ಕುಡಿಯುತ್ತೇನೆ ಎಂದು ಬೆದರಿಸಿದ್ದ. ಮಗದೊಂದು ಸಲ ಪೊಲೀಸ್ ಹೆಡ್ ಕ್ವಾಟ್ರಸ್ನ ಏಳನೇ ಮಹಡಿಯಿಂದ ಹಾರುತ್ತೇನೆ ಎಂದು ಬೆದರಿಕೆಯೊಡ್ಡಿದ್ದ… ಅಲ್ಲದೆ, ಒಂದು ಸಲ ಯುವತಿಯನ್ನೂ ಕೊಲ್ಲುವ ಬೆದರಿಕೆಯೊಡ್ಡಿದ್ದನಂತೆ…! ಈಗಲೂ ಇವರನ್ನು ಸಂಧಾನ ಮಾಡುವ ಕಾರ್ಯದಲ್ಲಿ ವನಿತಾ ಸಹಾಯವಾಣಿಯವರು ನಿರತರಾಗಿದ್ದಾರೆ. ಆದರೆ, ಫಲಿತಾಂಶ ಏನಾಗುತ್ತದೆ ಎಂದು ಗೊತ್ತಿಲ್ಲ. ಆದರೆ, ಹರೆಯದ ಆಕರ್ಷಣೆಗೆ ಒಳಗಾಗಿ ಇಂತಹ ಸಂಕಷ್ಟಕ್ಕೆ ತುತ್ತಾಗಬೇಡಿ ಯುವತಿಯರೇ ಎಂಬುದಷ್ಟೇ ನಮ್ಮ ಕಳಕಳಿ