Monday , January 22 2018
Home / News NOW / ಮಗನನ್ನೇ ಕೊಂದ ತಾಯಿ…! : ಕಾರಣ ಕೇಳಿದರೆ ಶಾಕ್ ಆಗ್ತೀರ..!
Buy Bitcoin at CEX.IO

ಮಗನನ್ನೇ ಕೊಂದ ತಾಯಿ…! : ಕಾರಣ ಕೇಳಿದರೆ ಶಾಕ್ ಆಗ್ತೀರ..!

ಶಿವಗಂಗ(ತಮಿಳುನಾಡು) : ಇಲ್ಲಿನ ಶಿವಗಂಗಾ ಜಿಲ್ಲೆಯಲ್ಲಿ ತಾಯಿಯೇ ಮಗನನ್ನು ಕೊಂದಿದ್ದಾರೆ. 47 ವರ್ಷದ ಈ ವ್ಯಕ್ತಿ ಕುಡಿದುಕೊಂಡು ಬಂದು ತನ್ನ ಹೆತ್ತ ಮಗಳಿಗೇ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಇದರಿಂದ ಸಿಟ್ಟಾದ ಆತನ ತಾಯಿ ಮೊಮ್ಮಗಳಿಗೆ ಮಗ ಹಿಂಸೆ ಕೊಡುವುದನ್ನು ನೋಡಲಾರದೆ ತನ್ನ ಮಗನನ್ನೇ ಕೊಂದಿದ್ದಾರೆ. ಶಿವಗಂಗ ಜಿಲ್ಲೆಯ ಕರೈಕುಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಈ ಕೊಲೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಸಾಕ್ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಕ್ಕವಯಲ್ ಗ್ರಾಮದ ವೀರಸ್ವಾಮಿ ಎಂದು ಗುರುತಿಸಲಾಗಿದೆ. ಈ ಹಿಂದೆಯೂ ವೀರಸ್ವಾಮಿ ಮಗಳಿಗೆ ಲೈಂಗಿಕ ಹಿಂಸೆ ನೀಡುತ್ತಿದ್ದನಂತೆ. ಈ ಬಗ್ಗೆ ತಾಯಿ ದೂರು ನೀಡಿದ್ದರಿಂದ ಪೊಲೀಸರು ಒಂದು ಸಲ ಈತನನ್ನು ಬಂಧಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಈತ ತನ್ನ ಹಳೇಯ ಚಾಳಿಯನ್ನು ಮುಂದುವರಿಸಿದ್ದ. ಈ ವೇಳೆ, ಮೊಮ್ಮಗಳನ್ನು ರಕ್ಷಿಸಲು ಹೋಗಿ ಮಹಿಳೆ ಮಗನನ್ನು ಕೊಂದಿದ್ದಾರೆ. ಪ್ರಕರಣ ಸಂಬಂಧ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವೀರಸ್ವಾಮಿ ಪತ್ನಿ ಜ್ಯೋತಿ ಈ ಹಿಂದೆಯೇ ಗಂಡನನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!