Tuesday , December 12 2017
Home / Sandalwood / ಅಮೂಲ್ಯ ಬರ್ತ್​ಡೇಗೆ ಮರ್ಸಿಡಿಸ್​ ಬೆಂಜ್ ಕಾರು ಗಿಫ್ಟ್​ ಕೊಟ್ಟ ಪತಿ

ಅಮೂಲ್ಯ ಬರ್ತ್​ಡೇಗೆ ಮರ್ಸಿಡಿಸ್​ ಬೆಂಜ್ ಕಾರು ಗಿಫ್ಟ್​ ಕೊಟ್ಟ ಪತಿ

ಬೆಂಗಳೂರು : ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ನಟಿ ಅಮೂಲ್ಯಗೆ ಈ ಬಾರಿಯ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್​ ಸಿಕ್ಕಿದೆ. ಸೆಪ್ಟೆಂಬರ್​ 14 ರಂದು 24ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅಮೂಲ್ಯಗೆ ಪತಿ ಜಗದೀಶ್​ ಮರ್ಸಿಡಿಸ್ ಬೆಂಜ್​ ಕಾರು ಗಿಫ್ಟ್​ ಕೊಟ್ಟಿದ್ದಾರೆ. ಮದುವೆಯ ನಂತರದ ಚೊಚ್ಚಲ ಹುಟ್ಟುಹಬ್ಬ ಇದಾಗಿದ್ದು ಈ ಗಿಫ್ಟ್​ ಬರ್ತ್​ಡೇಯನ್ನು ಇನ್ನಷ್ಟು ಸ್ಪೆಷಲ್ ಆಗಿಸಿದೆ.  ಇನ್ನು, ಅಮೂಲ್ಯ ಪತಿ ಜಗದೀಶ್ ಜೊತೆಗೂಡಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಪತಿಯಿಂದ ಪಡೆದ ಗಿಫ್ಟ್​​ ಕಾರನ್ನು ಅಮೂಲ್ಯ ಚಲಾಯಿಸಿ ಇನ್ನಷ್ಟು ಪುಳಕಗೊಂಡರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!