Monday , August 20 2018
ಕೇಳ್ರಪ್ಪೋ ಕೇಳಿ
Home / News NOW / ಶಿಕಾರಿ ವೇಳೆ ಮಿಸ್​ ಫೈರ್​ : ವ್ಯಕ್ತಿ ಸಾವು

ಶಿಕಾರಿ ವೇಳೆ ಮಿಸ್​ ಫೈರ್​ : ವ್ಯಕ್ತಿ ಸಾವು

ಚಿಕ್ಕಮಗಳೂರು : ಶಿಕಾರಿಗೆ ಹೋದ ವೇಳೆ ಮಿಸ್​ ಫೈರ್ ಆಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೊನ್ನೇಕುಡಿಗೆ ಗ್ರಾ.ಪಂ‌ ವ್ಯಾಪ್ತಿಯ ಅಡ್ಡಟ್ಟಿ ಕಾಡಿನಲ್ಲಿ ನಡೆದಿದೆ. ಧರ್ಮಯ್ಯ ಮೃತ ವ್ಯಕ್ತಿ. ಧರ್ಮಯ್ಯ ಮತ್ತು ಗಂಗಾಧರ್​ ಎಂಬುವವರು ಇಬ್ಬರು ನಿನ್ನೆ ರಾತ್ರಿ ಶಿಖಾರಿಗೆ ಹೋಗಿದ್ದರು, ಈ ವೇಳೆ, ಗುಂಡು ತಗುಲಿ ಧರ್ಮಯ್ಯ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಂಗಾಧರ್​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತರೀಕೆರೆ ಡಿವೈಎಸ್ಪಿ ತಿರುಮಲೇಶ್ ಗೆ ಉನ್ನತ ತನಿಖೆ ಮಾಡುವಂತೆ ಎಸ್.ಪಿ ಅಣ್ಣಮಲೈ ಆದೇಶ ನೀಡಿದ್ದಾರೆ. ಇದು ಉದ್ದೇಶಪೂರ್ವಕ ಕೊಲೆಯೇ ಅಥವಾ ಆಕಸ್ಮಿಕವಾಗಿ ನಡೆದಿರೋ ಘಟನೆಯೇ ಎಂಬ ನಿಟ್ಟಿನಲ್ಲೂ ಪೊಲೀಸರ ತನಿಖೆ ನಡೆಯುತ್ತಿದೆ.

About sudina

Check Also

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!