Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Bollywood / ಪ್ರಭಾಸ್ ಬಳಿಕ ಈಗ ಸೈನಾ ಸರದಿ

ಪ್ರಭಾಸ್ ಬಳಿಕ ಈಗ ಸೈನಾ ಸರದಿ

ಹೈದರಾಬಾದ್ : ಬಾಲಿವುಡ್ ಬ್ಯೂಟಿ ಶೃದ್ಧಾ ಕಪೂರ್ ಈಗ ಹೈದರಾಬಾದ್​ನಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸಾಹೋ ಟೀಂ ಸೇರಿರುವ ಶೃದ್ಧಾ ಇತ್ತೀಚೆಗಷ್ಟೇ ಮುತ್ತಿನನಗರಿಗೆ ಬಂದಿದ್ದರು. ಹೀಗೆ ಬಂದ ಶೃದ್ಧಾಗೆ ಇಲ್ಲಿನವರು ಉತ್ತಮ ಆದರಾತಿಥ್ಯವನ್ನು ನೀಡುತ್ತಿದ್ದಾರೆ. ಇಲ್ಲಿನ ಆಹಾರ, ಆತಿಥ್ಯ, ಗೌರವಗಳ ಸವಿಯುಂಡಿರುವ ಶೃದ್ಧಾ ಕರಗಿ ನೀರಾಗಿ ಹೋಗಿದ್ದಾರೆ.

ಇತ್ತೀಚೆಗಷ್ಟೇ ಟಾಲಿವುಡ್​ನ ರೆಬಲ್ ಸ್ಟಾರ್ ಪ್ರಭಾಸ್​ ಹೈದರಾಬಾದಿ ಖಾದ್ಯಗಳ ಮೂಲಕ ಶೃದ್ಧಾಗೆ ಸರ್ಪೈಸ್ ಕೊಟ್ಟಿದ್ದರು. ಇದನ್ನು ಶೃದ್ಧಾ ತಮ್ಮ ಇನ್ಸ್ಟಾಗ್ರಾಮ್​ನಲ್ಲೂ ಹಾಕಿಕೊಂಡಿದ್ದರು. ಪ್ರಭಾಸ್​ಗೂ ಧನ್ಯವಾದ ಹೇಳಿದ್ದರು. ಇದೀಗ ಸೈನಾ ನೆಹ್ವಾಲ್​​ ಶೃದ್ಧಾರಿಗೆ ತಮ್ಮ ಆತಿಥ್ಯ ತೋರಿದ್ದಾರೆ. ಸೈನಾ ಮನೆಗೆ ಬಂದಿರುವ ಶೃದ್ಧಾ, ನೆಹ್ವಾಲ್ ತಾಯಿಯ ಕೈಯಲ್ಲಿ ತಯಾರಾದ ರುಚಿ ರುಚಿ ಹೈದರಾಬಾದಿ ಖಾದ್ಯಗಳ ಸವಿಯುಂಡಿದ್ದಾರೆ. ಅಲ್ಲದೆ, ತುಂಬಾ ಹೊತ್ತು ಸೈನಾ ಮನೆಯಲ್ಲೇ ಕಳೆದ ಶೃದ್ಧಾ ಖುಷಿ ವ್ಯಕ್ತಪಡಿಸಿದ್ದಾರೆ.

ಸೈನಾ ಮನೆಗೆ ಶೃದ್ಧಾ ಭೇಟಿಗೆ ಒಂದು ಕಾರಣವೂ ಇದೆ. ಸೈನಾ ಜೀವನ ಚಿತ್ರವಾಗುತ್ತಿದೆ. ಈ ಚಿತ್ರದಲ್ಲಿ ಸೈನಾ ಪಾತ್ರ ನಿರ್ವಹಿಸುತ್ತಿರುವುದು ಇದೇ ಶೃದ್ಧಾ ಕಪೂರ್.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!