Sunday , February 17 2019
ಕೇಳ್ರಪ್ಪೋ ಕೇಳಿ
Home / Mumbai Mail / ಪೊಲೀಸ್​ ಕಾನ್​​ಸ್ಟೇಬಲ್ ತಲೆಗೆ ಬಾಟಲಿಯಲ್ಲಿ ಹೊಡೆದ ಇಬ್ಬರ ಬಂಧನ

ಪೊಲೀಸ್​ ಕಾನ್​​ಸ್ಟೇಬಲ್ ತಲೆಗೆ ಬಾಟಲಿಯಲ್ಲಿ ಹೊಡೆದ ಇಬ್ಬರ ಬಂಧನ

ಥಾಣೆ : ಪೊಲೀಸ್​ ಕಾನ್​ಸ್ಟೇಬಲ್​ಗೆ ಬಿದಿರಿನಿಂದ ಥಳಿಸಿ ಮತ್ತು ತಲೆಗೆ ಬಾಟಲಿಯಿಂದ ಹೊಡೆದು ಪರಾರಿಯಾಗಿದ್ದ ಆರು ಮಂದಿಯಲ್ಲಿ ಇಬ್ಬರನ್ನು ಕಲ್ವ ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಈ ಘಟನೆ ನಡೆದಿತ್ತು. ಥಾಣೆ ಪೊಲೀಸ್​ ಹೆಡ್​ಕ್ವಾರ್ಟರ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪತಿ ತಾಪ್ಪೆ ಮೇಲೆ ಹಲ್ಲೆ ಮಾಡಿ ಈ ಆರು ಮಂದಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶ್ರೀಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೀಗ ಅಪಾಯದಿಂದ ಪಾರಾಗಿದ್ದಾರೆ.

ವಿಟ್ವಾದ ಜೈ ಮಲ್ಹರ್​ ರೆಸ್ಟೋರೆಂಟ್ ಬಳಿ ಈ ಘಟನೆ ನಡೆದಿತ್ತು. ಕಾನ್​ಸ್ಟೇಬಲ್​ ಮತ್ತು ಅವರ ಸಹೋದ್ಯೋಗಿಗಳು ಇಲ್ಲಿ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ರೆಸ್ಟೋರೆಂಟ್​ನಲ್ಲಿ ಚೆನ್ನಾಗಿ ಕುಡಿದಿದ್ದ ಆರೋಪಿಗಳ ಗುಂಪು ಮಾಲಿಕರೊಂದಿಗೆ ಜಗಳ ಮಾಡುತ್ತಿತ್ತು. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಹೋದ ಪೊಲೀಸರ ಮೇಲೆ ಆರೋಪಿಗಳ ಗುಂಪು ದಾಳಿ ಮಾಡಿತ್ತು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!