Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Mollywood / ಚೈನೀಸ್​​ ಭಾಷೆಗೆ ರಿಮೇಕ್ ಆಗುತ್ತಿದೆ ದೃಶ್ಯಂ

ಚೈನೀಸ್​​ ಭಾಷೆಗೆ ರಿಮೇಕ್ ಆಗುತ್ತಿದೆ ದೃಶ್ಯಂ

ತಿರುವನಂತಪುರಂ : ದಕ್ಷಿಣ ಭಾರತದ ಸೂಪರ್​ಸ್ಟಾರ್ ಮೋಹನ್​​ಲಾಲ್​ ಅಭಿನಯದ ಸೂಪರ್​ಹಿಟ್​ ಚಿತ್ರ ದೃಶ್ಯಂ ಹಲವು ಭಾಷೆಗೆ ರಿಮೇಕ್ ಆಗಿದೆ. ಮತ್ತು ಎಲ್ಲಾ ಕಡೆ ಗೆದ್ದು ಬೀಗಿದೆ. ಸ್ಯಾಂಡಲ್​ವುಡ್​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಈ ಚಿತ್ರವನ್ನು ಮಾಡಿದ್ದರು. ರವಿಗೂ ಈ ಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇದೀಗ ದೃಶ್ಯಂ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ.

2013ರಲ್ಲಿ ರಿಲೀಸ್ ಆದ ಈ ಬ್ಲಾಕ್​ ಬಸ್ಟರ್​​​ ಚಿತ್ರ ಈಗ ಚೀನಾಕ್ಕೆ ಹೋಗುತ್ತಿದೆ. ಕೇರಳದಲ್ಲಿ 50 ಕೋಟಿಯಷ್ಟು ಲಾಭ ಮಾಡಿದ್ದ ಈ ಚಿತ್ರ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ರಿಮೇಕ್ ಆಗಿತ್ತು. ಜೊತೆಗೆ ಸಿಂಹಳೀಯರ ಭಾಷೆಯಲ್ಲಿ ಧರ್ಮಯುಧ್ಯಾ ಎಂಬ ಹೆಸರಿನಲ್ಲಿ ಈ ಚಿತ್ರ ತೆರೆ ಕಂಡಿದೆ.  ಇದೀಗ, ಒಂದು ಹೆಜ್ಜೆ ಮುಂದೆ ಹೋಗಿರುವ ದೃಶ್ಯಂ. ಚೀನಾಕ್ಕೂ ಲಗ್ಗೆ ಇಡುತ್ತಿದೆ.

ದೃಶ್ಯಂ ಚಿತ್ರದ ನಿರ್ದೇಶಕ ಜೀತು ಜೋಸೆಫ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಚೀನಾದ ಪ್ರೊಡಕ್ಷನ್ ಹೌಸ್​ ವೊಂದು ಚಿತ್ರದ ರೈಟ್ಸ್​ ಪಡೆದುಕೊಂಡಿದೆಯಂತೆ. ಜೋಸೆಫ್ ಹೇಳುವಂತೆ ಚೀನಾ ಭಾಷೆಗೆ ರಿಮೇಕ್ ಆಗಿರುತ್ತಿರುವ ಮೊದಲ ಭಾರತೀಯ ಸಿನೆಮಾ ಇದಂತೆ ಮತ್ತು ಇದು ದಾಖಲೆ ಎಂದು ಅವರು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!