Monday , July 23 2018
ಕೇಳ್ರಪ್ಪೋ ಕೇಳಿ
Home / Film News / Mollywood / ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಿರೀಕ್ಷಣಾ ಜಾಮೀನಿಗೆ ಕಾವ್ಯ ಮಾಧವನ್​ ಅರ್ಜಿ

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಿರೀಕ್ಷಣಾ ಜಾಮೀನಿಗೆ ಕಾವ್ಯ ಮಾಧವನ್​ ಅರ್ಜಿ

ತಿರುವನಂತಪುರಂ : ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಮಾಧವನ್​ ಕೇರಳ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕಾವ್ಯಾ ಸದ್ಯ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರುವ ನಟ ದಿಲೀಪ್ ಪತ್ನಿ. ದಿಲೀಪ್​ಗಿಂತೂ ಮುಂಚೆ ಬಂಧನಕ್ಕೊಳಗಾದ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಗೂ ಕಾವ್ಯಾಗೂ ಸಂಪರ್ಕ ಇತ್ತು ಎಂಬ ಸಾಕ್ಷ್ಯ ಪೊಲೀಸರಿಗೆ ದೊರೆತಿತ್ತು. ಹೀಗಾಗಿ, ಬಂಧನದ ಭೀತಿಯಿಂದ ಕಾವ್ಯಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ…

ಪ್ರಕರಣದ ಸಂಬಂಧ ಕಾವ್ಯಾ ಮಾಧವನ್​​ ತನಿಖಾ ತಂಡದ ಎದುರು ಒಂದೆರಡು ಬಾರಿ ಹಾಜರಾಗಿದ್ದರು. ಆರಂಭದಲ್ಲಿ ಪಲ್ಸರ್ ಸುನಿ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಕಾವ್ಯಾ ವಾದಿಸುತ್ತಿದ್ದರು. ಆದರೆ, ಪಲ್ಸರ್ ಸುನಿ ಮಾತ್ರ ಕಾವ್ಯಾ ಮಾಧವನ್​ಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದ. ಪೊಲೀಸರು ಕೂಡಾ ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಇಬ್ಬರಿಗೂ ಸಂಪರ್ಕ ಇದ್ದ ಬಗ್ಗೆ ಸಾಕ್ಷ್ಯಗಳು ದೊರೆತಿದ್ದವು. ಅಲ್ಲದೆ, ನಟಿಯ ಅಪಹರಣಕ್ಕೆ ಮುನ್ನ ಇವರ ಮನೆಗೆ ಬಂದ ಪಲ್ಸರ್ ಸುನಿ ಕಾವ್ಯಾ ತಾಯಿಯಿಂದ 25 ಸಾವಿರ ರೂಪಾಯಿ ಪಡೆದಿದ್ದ ಎಂದೂ ಹೇಳಲಾಗುತ್ತಿದೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!