Monday , August 20 2018
ಕೇಳ್ರಪ್ಪೋ ಕೇಳಿ
Home / Earth / ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ಫಾರ್ಮಿಂಗ್ಟನ್ ಹಿಲ್ಸ್ (ಓಕ್ಲ್ಯಾಂಡ್) : ಮಿಚಿಗನ್​ನಲ್ಲಿ ವಿಶ್ವದ ಅತೀ ದೊಡ್ಡ ಸಾಕು ಬೆಕ್ಕುಗಳಿವೆ. ಇಲ್ಲಿನ ಡೆಟ್ರಾಯಿಟ್​ನ ಒಂದೇ ಮನೆಯಲ್ಲಿ ದಾಖಲೆ ಬರೆದ ಎರಡು ಬೆಕ್ಕುಗಳಿವೆ. ಆರ್ಕ್ಟರುಸ್ ಅಲ್ಡೆಬರಾನ್ ಪವರ್ಸ್ ಅವರ ಸಾಕು ಬೆಕ್ಕು 19 ಇಂಚು ಅಂದರೆ 48 ಸೆಂಟಿಮೀಟರ್ ಉದ್ದ ಇದ್ದು ಗಿನ್ನಿಸ್​ ದಾಖಲೆ ಪುಟದಲ್ಲಿ ಸ್ಥಾನ ಪಡೆದರೆ, ಇದೇ ಮನೆಯಲ್ಲಿ ಇರುವ  ಸಿಗ್ನಸ್ ರೆಗ್ಯುಲಸ್ ಪವರ್ಸ್ ಅವರ ಬೆಕ್ಕು ಅತೀ ಉದ್ದ ಬಾಲ ಹೊಂದುವ ಮೂಲಕ ರೆಕಾರ್ಡ್ ಮಾಡಿದೆ. ಈ ಬೆಕ್ಕಿನ ಬಾಲದ ಉದ್ದ 17 ಇಂಚು ಅಂದರೆ 43 ಸೆಂಟಿಮೀಟರ್ ಆಗಿದೆ.

ಇನ್ನು, ಈ ಬೆಕ್ಕುಗಳಿಂದಲೇ ಇವರ ಮನೆ ಪ್ರಮುಖ ಆಕರ್ಷಣೆಯ ತಾಣವಾಗಿದೆ. ಎಲ್ಲರೂ ಬಂದು ಈ ಬೆಕ್ಕುಗಳೊಂದಿಗೆ ಫೋಟೋ ತೆಗೆದುಕೊಳ್ಳುತ್ತಿದ್ದಾರಂತೆ. ದಾಖಲೆ ಬರೆದ ಎರಡೂ ಬೆಕ್ಕುಗಳಿಗೂ ಸುಮಾರು ಎರಡು ವರ್ಷ ಪ್ರಾಯ ಎಂದು ಇದರ ಪಾಲಕರು ತಿಳಿಸಿದ್ದಾರೆ.

About sudina

Check Also

RIP : ಮಾತನಾಡುತ್ತಿದ್ದ ಗೊರಿಲ್ಲಾ ಇನ್ನಿಲ್ಲ…! : ಕೋಕೋ ಇನ್ನು ನೆನಪು ಮಾತ್ರ…!

ಕೋಕೋ… ಅವಳು ಬರೀ ಗೊರಿಲ್ಲಾ ಅಲ್ಲ… ಇಡೀ ಗೊರಿಲ್ಲಾ ಸಂತತಿಯ ಪಾಲಿಗೆ ಇದ್ದ ಒಬ್ಬಳೇ ಒಬ್ಬಳು ರಾಯಭಾರಿ…! ಯಾಕೆಂದರೆ, ಈ …

Leave a Reply

Your email address will not be published. Required fields are marked *

error: Content is protected !!