Friday , September 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸೋನಂ ಕಪೂರ್​ ಲವ್​ಗೆ ಇಂಟರ್​ನೆಟ್​​ ಕಾಟ…!

ಸೋನಂ ಕಪೂರ್​ ಲವ್​ಗೆ ಇಂಟರ್​ನೆಟ್​​ ಕಾಟ…!

ಮುಂಬೈ : ಬಾಲಿವುಡ್​ ಬ್ಯೂಟಿ ಸೋನಂ ಕಪೂರ್​​​​​ ತನ್ನ ತಂದೆ ಅನಿಲ್ ಕಪೂರ್ ಹೆಸರು ಬಳಸಿಕೊಂಡು ಚಿತ್ರರಂಗಕ್ಕೆ ಬಂದವರು. ಆದರೂ ಆರಂಭಿಕ ದಿನಗಳಲ್ಲಿ ಸೋನಂ ಸಖತ್ ಕಷ್ಟಪಟ್ಟಿದ್ದರು. ಇದಾದ ಬಳಿಕ ಒಂದಷ್ಟು ಚಿತ್ರಗಳು ಸೋನಂಗೆ ನೇಮು, ಫೇಮು ಎರಡನ್ನೂ ತಂದುಕೊಟ್ಟಿತ್ತು.

🐒🐰 Already missing all this … @purevnv @sonamkapoor @boxoutfm

A post shared by anand ahuja (@anandahuja) on


ಈ ಬ್ಯುಸಿ ಸೆಡ್ಯೂಲ್ಡ್​ನ ನಡುವೆ ತುಂಬಾ ದೊಡ್ಡ ಗ್ಯಾಪ್ ಬಳಿಕ ಸೋನಂ ಬ್ರೇಕ್​ ತೆಗೆದುಕೊಂಡಿದ್ದರು. ಅಲ್ಲದೆ, ಈ ಟೈಮ್ ಅನ್ನು ತನ್ನ ಪ್ರಿಯಕರ ಆನಂದ್​ ಅಜುಜಾ ಜೊತೆ ಕಳೆದಿದ್ದಾರೆ. ಆನಂದ್​ ದೆಹಲಿ ಮೂಲದ ಉದ್ಯಮಿ. ಈ ಪ್ರೇಮ ಪತಂಗಗಳು ಒಂದು ತಿಂಗಳು ಫಾರಿನ್​​ನಲ್ಲಿ ಸುತ್ತಾಡಿದ್ದರು. ಈ ಸುತಾಟದ ಬಳಿಕ ಸೋನಂ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಸದ್ಯ ಕಪೂರ್ ಮತ್ತೆ ಚಿತ್ರರಂಗದ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

ಹೀಗಾಗಿ, ಪ್ರೇಮ ಪಕ್ಷಿಗಳಿಗೆ ಮತ್ತೆ ಭೇಟಿಯಾಗಲು ಕಷ್ಟ ಆಗುತ್ತಿದೆ. ಇದರಿಂದ ಇಂಟರ್​ನೆಟ್​ನ ಲೈವ್​ ವೀಡಿಯೋ ಕಾಲ್ ಮೂಲಕ ಇವರಿಬ್ಬರು ಮಾತನಾಡುತ್ತಿದ್ದಾರೆ. ಆದರೆ, ಹೀಗೆ ಮಾತನಾಡುವಾಗ ಇಂಟರ್​ನೆಟ್​ ಇವರಿಗೆ ಕಾಟ ಕೊಡುತ್ತಿದೆಯಂತೆ. ಸ್ಲೋ ಇಂಟರ್​ನೆಟ್​ನಿಂದ ಈ ಪ್ರೇಮಪಕ್ಷಿಗಳ ಸಂಭಾಷಣೆಗೆ ಕಷ್ಟ ಆಗುತ್ತಿದಯಂತೆ. ಈ ನೋವನ್ನು ಸೋನಂ ತನ್ನ ಇನ್ಸ್ಟ್ರಾಗ್ರಾಮ್​ನಲ್ಲಿ ತೋಡಿಕೊಂಡಿದ್ದಾರೆ. ಪಾಪ ಸೋನಂ..

 

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!