Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / Mollywood / ರಿಯಲ್ ಅಲ್ಲ, ರೀಲ್ ಲೈಫ್​ನಲ್ಲೂ ಪ್ರಿಯಾಮಣಿಯದ್ದು ಅಂತರ್​ ಜಾತಿ ಮದುವೆ…!

ರಿಯಲ್ ಅಲ್ಲ, ರೀಲ್ ಲೈಫ್​ನಲ್ಲೂ ಪ್ರಿಯಾಮಣಿಯದ್ದು ಅಂತರ್​ ಜಾತಿ ಮದುವೆ…!

ತಿರುವನಂತಪುರಂ :  ನಟಿ ಪ್ರಿಯಾಮಣಿ ಮದುವೆ ಬಳಿಕ ಮತ್ತೆ ಚಿತ್ರರಂಗದ ಕೆಲಸದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮದುವೆಯಾಗಿ ಮೂರೇ ದಿನಕ್ಕೆ ಪ್ರಿಯಾ ಶೂಟಿಂಗ್​ಗೆ ಬಂದಿದ್ದಾರೆ. ಸದ್ಯ ಮಲಯಾಳಂನ ‘ಆಶಿಖ್ ವನ್ನಾ ದಿವಸಂ‘ ಎಂಬ ಚಿತ್ರದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಕ್ರಿಶ್​ ಕೈಮಾಲ್​​ ಈ ಚಿತ್ರದ ನಿರ್ದೇಶಕ. ಪ್ರಿಯಾಮಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಅಲ್ಲದೆ, ಈ ಚಿತ್ರದಲ್ಲೂ ಪ್ರಿಯಾಮಣಿ ಅವರದ್ದು ಅಂತರ್ ಜಾತಿ ವಿವಾಹವಂತೆ… ​ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಇದು ಬರೀ ಕಾಕತಾಳೀಯ ಅಷ್ಟೇ. ನನ್ನ ಮದುವೆ ಫಿಕ್ಸ್ ಆಗುವ ಮುನ್ನವೇ ಈ ಚಿತ್ರದ ಮಾತುಕತೆ ಮುಗಿದಿತ್ತು ಎಂದು ಪ್ರಿಯಾಮಣಿ ನಗುತ್ತಾರೆ…

ನಿಜಜೀವನದಲ್ಲಿ ಪ್ರಿಯಾಮಣಿ ತಮ್ಮ ಬಹುಕಾಲದ ಸಂಗಾತಿ ಮುಸ್ತಾಫ ರಾಜ್ ಅವರನ್ನು ವರಿಸಿದ್ದರು. ಇದು ಅಂತರ್​ ಧರ್ಮೀಯ ವಿವಾಹ. ಆದರೆ, ಮದುವೆ ಬಳಿಕ ಚಿತ್ರದಲ್ಲೂ ಪ್ರಿಯಾ ಅಂತರ್​ಧರ್ಮೀಯ ಅಲ್ಲದಿದ್ದರೂ ಅಂತರ್​ಜಾತಿಯ ವಿವಾಹವಾಗುವ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಕೂಡಾ ಪ್ರಿಯಾಗೆ ಖುಷಿ ಕೊಟ್ಟಿದೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!