Monday , January 21 2019
ಕೇಳ್ರಪ್ಪೋ ಕೇಳಿ
Home / Sandalwood / ಕುರುಕ್ಷೇತ್ರಕ್ಕೆ ಭಾನುಮತಿ ಸಿಕ್ಕರು… : ಇವರೇ ದರ್ಶನ್​ಗೆ ನಾಯಕಿ…

ಕುರುಕ್ಷೇತ್ರಕ್ಕೆ ಭಾನುಮತಿ ಸಿಕ್ಕರು… : ಇವರೇ ದರ್ಶನ್​ಗೆ ನಾಯಕಿ…

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ನಾಯಕಿ ಯಾರು ಎಂಬ ಕುತೂಹಲ ಈ ತನಕ ಇತ್ತು. ಆದರೆ, ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದಕ್ಷಿಣ ಭಾರತದ ನಟಿ ರಮ್ಯಾ ನಂಬೀಸನ್​​ ದರ್ಶನ್​ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಕುರುಕ್ಷೇತ್ರದ ಚಿತ್ರದಲ್ಲಿ ರಮ್ಯಾಗೆ ದುರ್ಯೋಧನನ ಪತ್ನಿ ಭಾನುಮತಿ ಪಾತ್ರ. ಆರಂಭದಲ್ಲಿ ಈ ಪಾತ್ರಕ್ಕೆ ರೆಜೀನಾ ಹೆಸರು ಕೇಳಿ ಬಂದಿತ್ತು. ಆದರೆ, ಈಗ ಈ ಜಾಗಕ್ಕೆ ನಂಬೀಸನ್​ ಬಂದಿದ್ದಾರೆ. ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನಂಬೀಸನ್​​ ಈ ಹಿಂದೆ ಗೋಲ್ಡನ್​ ಸ್ಟಾರ್ ಗಣೇಶ್ ಅಭಿನಯದ ಸ್ಟೈಲ್​ ಕಿಂಗ್​ ಚಿತ್ರದಲ್ಲಿ ನಟಿಸಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!