Wednesday , January 24 2018
Home / Interval / ಒಂದು ನಾಯಿಯ ಹೆಸರು ಅಮೀರ್ ಮತ್ತು ಶಾರೂಖ್ ನಡುವೆ ಜಗಳಕ್ಕೆ ಕಾರಣವಾಗಿತ್ತು…!
Buy Bitcoin at CEX.IO

ಒಂದು ನಾಯಿಯ ಹೆಸರು ಅಮೀರ್ ಮತ್ತು ಶಾರೂಖ್ ನಡುವೆ ಜಗಳಕ್ಕೆ ಕಾರಣವಾಗಿತ್ತು…!

ಬಾಲಿವುಡ್‍ನಲ್ಲಿ ಶಾರೂಖ್ ಮತ್ತು ಅಮೀರ್ ಖಾನ್ ತುಂಬಾ ಒಳ್ಳೆಯ ಸ್ನೇಹಿತರು. ಈಗಲೂ ಇವರಿಬ್ಬರ ಸ್ನೇಹ ಹಾಗೆಯೇ ಇದೆ. ಇಬ್ಬರ ನಡುವಣ ಬಾಂಧವ್ಯ ಎಲ್ಲರಿಗೂ ಮಾದರಿಯಾಗಿದೆ. ಆದರೆ, ನಡುವೆ ಒಂದು ಸಲ ಆಮೀರ್ ಮತ್ತು ಶಾರೂಖ್ ನಡುವೆ ಶೀತ ಸಂಘರ್ಷ ನಡೆಯುತ್ತಿತ್ತು. ಇದಕ್ಕೆ ಕಾರಣ ಒಂದು ನಾಯಿಯ ಹೆಸರು…!!! ಯಾಕೆಂದರೆ, ಆವಾಗ ಅಮೀರ್ ಮನೆಯಲ್ಲಿ ಇದ್ದ ನಾಯಿಯ ಹೆಸರು ಏನಿತ್ತು ಗೊತ್ತಾ…? ಶಾರೂಖ್ ಎಂದು…!

ಪಂಚಗನಿಯಲ್ಲಿರುವ ದೊಡ್ಡ ಬಂಗಲೆಯಲ್ಲಿ ಶಾರೂಖ್ ಅಭಿನಯದ ಚಿತ್ರವೊಂದರ ಶೂಟಿಂಗ್ ನಡೆಯುತ್ತಿತ್ತು. ಈ ಬಂಗಲೆ ಅಮೀರ್ ಸ್ನೇಹಿತರದ್ದು. ಸ್ವಲ್ಪ ದಿನದ ಬಳಿಕ ಈ ಬಂಗಲೆಯಲ್ಲಿ ಅಮೀರ್ ಪತ್ನಿ ಕಿರಣ್ ರಾವ್ ಖರೀದಿಸಿದರು. ಹೀಗೆ ಬಂಗಲೆ ಖರೀದಿಸುವಾಗ ಆ ಬಂಗಲೆಯ ಒಡೆಯ ತಾನು ಪ್ರೀತಿಯಿಂದ ನಾಯಿಯನ್ನೂ ಇವರಿಗೇ ಕೊಟ್ಟು ಹೋಗಿದ್ದರು. ಅದೇ ಶ್ವಾನದ ಹೆಸರು ಶಾರೂಖ್ ಎಂದು.

ಶಾರೂಖ್ ಮೇಲಿನ ಅಭಿಮಾನದಿಂದ ಆ ಮನೆ ಮಾಲಿಕ ಈ ರೀತಿ ಹೆಸರಿಟ್ಟಿದ್ದ ಎಂದು ಒಂದು ಸುದ್ದಿ. ಇರಲಿ, ಆದರೆ, ಈ ಶ್ವಾನದ ಹೆಸರು ಶಾರೂಖ್ ಎಂದು ಕೇಳಿದ ತಕ್ಷಣ ಅಮೀರ್‍ಗೂ ಕೊಂಚ ಇರುಸು ಮುರುಸಾಗಿತ್ತು. ಹೀಗಾಗಿ, ಇದರ ಹೆಸರನ್ನು ಅಮೀರ್ ಶಾಕಿ ಎಂದು ಬದಲಿಸಿದ್ದರು. ಇದು ಶಾರೂಖ್‍ಗೂ ಗೊತ್ತಿತ್ತು. ಆದರೆ, ಕಾರ್ಯಕ್ರಮವೊಂದರಲ್ಲಿ ಶಾರೂಖ್ ತನ್ನ ಗೆಳೆಯನನ್ನು ಇದೇ ಕಾರಣಕ್ಕೆ ಸುಮ್ಮನೆ ಕಿಚಾಯಿಸಿದ್ದರು. ಅಮೀರ್ ಕೂಡಾ ಆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಬಳಿಕ ತಮ್ಮ ಬ್ಲಾಗ್‍ನಲ್ಲಿ ಅಮೀರ್ ಕೂಡಾ ಈ ಪ್ರಕರಣದ ಬಗ್ಗೆ ಬರೆದುಕೊಂಡಿದ್ದರು. ಅಮೀರ್ ಹೀಗೆ ಬರೆದ ಕಾರಣವನ್ನು ಶಾರೂಖ್ ಚೆನ್ನಾಗಿ ಅರಿತಿದ್ದರು. ಹೀಗಾಗಿ, ಶಾರೂಖ್ ಈ ವಿಚಾರದಲ್ಲಿ ಸುಮ್ಮನಾದರು. ಕೋಪಗೊಳ್ಳಲಿಲ್ಲ. ಅಲ್ಲದೆ, ಅಮೀರ್ ಅಭಿಪ್ರಾಯದ ಬಗ್ಗೆ ಅವರಿಗೆ ಸಮ್ಮತಿ ಕೂಡಾ ಇತ್ತು.

ಆದರೆ, ಶಾರೂಖ್ ಅಭಿಮಾನಿಗಳಿಗೆ ಮಾತ್ರ ಇದು ಪಥ್ಯವಾಗಿರಲಿಲ್ಲ. ಹೀಗಾಗಿ, ಅಮೀರ್ ವಿರುದ್ಧ ಮುಗಿಬಿದ್ದಿದ್ದರು. ಕೊನೆಗೆ ಅಮೀರ್ ಎಷ್ಟು ಬೇಜಾರಾಗಿದ್ದರು ಎಂದರೆ, ಬ್ಲಾಗ್ ಬರೆಯುವುದನ್ನೇ ನಿಲ್ಲಿಸಿದ್ದರು…! ಈ ವಿಚಾರ ಶಾರೂಖ್ ಮತ್ತು ಅಮೀರ್ ನಡುವೆ ತುಂಬಾ ದಿನ ಇರಲಿಲ್ಲ. ಇಬ್ಬರೂ ಈ ವಿಷಯ ಮರೆತಿದ್ದರು. ಆದರೆ, ಇವರು ಬೇಡ ಎಂದರೂ ಇದು ಸುದ್ದಿಯಾಗಿತ್ತು. ಹಾಗಂತ, ಈ ಪ್ರಕರಣ ಶಾರೂಕ್ ಮತ್ತು ಅಮೀರ್ ಸ್ನೇಹಕ್ಕೆ ಯಾವುದೇ ಚ್ಯುತಿ ತಂದಿರಲಿಲ್ಲ. ಈಗಲೂ ಇವರಿಬ್ಬರು ಒಳ್ಳೆಯ ಸ್ನೇಹಿತರೇ… ಅದೇ ಸ್ನೇಹಕ್ಕಿರುವ ತಾಕತ್ತು…

CEX.IO Bitcoin Exchange

About sudina

Check Also

ಸ್ಫೂರ್ತಿಯ ಸೆಲೆ : ಈ ಸ್ಟಾರ್ ಡೈರೆಕ್ಟರ್​​​, ನಟ ಹೊಟೇಲ್​ನಲ್ಲಿ ಸವರ್ ಆಗಿದ್ದರು

ಎಸ್​.ಜೆ.ಸೂರ್ಯ. ದಕ್ಷಿಣ ಭಾರತದ ಸ್ಟಾರ್​ ಡೈರೆಕ್ಟರ್​. ನಟನಾಗಿಯೂ ಇವರು ಸಖತ್ ಹೆಸರು ಮಾಡಿದವರು. ಇಂತಹ ಸೂರ್ಯ ಚೆನ್ನೈಗೆ ಬಂದ ಸಂದರ್ಭದಲ್ಲಿ …

Leave a Reply

Your email address will not be published. Required fields are marked *

error: Content is protected !!