Wednesday , January 23 2019
ಕೇಳ್ರಪ್ಪೋ ಕೇಳಿ
Home / Mumbai Mail / ಮಾಂಸದಂಗಡಿ ಮಾಲಿಕನ ಕೊಲೆ : ತಂದೆ ಮಗನಿಗೆ ಜೀವಾವಧಿ ಶಿಕ್ಷೆ

ಮಾಂಸದಂಗಡಿ ಮಾಲಿಕನ ಕೊಲೆ : ತಂದೆ ಮಗನಿಗೆ ಜೀವಾವಧಿ ಶಿಕ್ಷೆ

ಥಾಣೆ : ಮಹಾರಾಷ್ಟ್ರದ ಥಾಣೆಯಲ್ಲಿ ಮಾಂಸದಂಗಡಿ ಮಾಲಿಕರನ್ನು ಕೊಂದು ಅವರ ಸಹೋದರ ಹತ್ಯೆಗೆ ಯತ್ನಿಸಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಈ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ತಂದೆ ಮಗನಿಗೆ ಥಾಣೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2010ರಲ್ಲಿ ಥಾಣೆಯಲ್ಲಿ ಈ ಘಟನೆ ನಡೆದಿತ್ತು.

ಶಿಕ್ಷೆಗೊಳಗಾದವರನ್ನು ಮಹಮ್ಮದ್ ಹನೀಫ್ ಖುರೇಷಿ ಮತ್ತು ಮಗ ನದೀಮ್ ಎಂದು ಗುರುತಿಸಲಾಗಿದೆ. ಇವರು ಮಹಮ್ಮದ್ ಅಬ್ದುಲ್ ಎಂಬುವವರ ಹತ್ಯೆ ಮಾಡಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹೇಮಂತ್ ಎಂ ಪಟವರ್ಧನ್ ಇವರಿಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ. ಜೊತೆಗೆ, ಆರೋಪಿಗಳಿಗೆ ತಲಾ 15,00 ರೂಪಾಯಿ ದಂಡ ಕೂಡಾ ವಿಧಿಸಲಾಗಿದೆ. ಇನ್ನು, ಖುರೇಷಿಯ ಪುತ್ರ ವಾಸಿಂ ಮೇಲೂ ಈ ಆರೋಪ ಇತ್ತು, ಆದರೆ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯದ ವಾಸಿಂನನ್ನು ಖುಲಾಸೆಗೊಳಿಸಿದೆ. ಅಮೃತ್ ನಗರ್ನಲ್ಲಿ ಈ ಕೊಲೆ ನಡೆದಿದ್ದು ಅಪರಾಧಿಗಳು ಇದೇ ಪ್ರದೇಶದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!