Sunday , July 22 2018
ಕೇಳ್ರಪ್ಪೋ ಕೇಳಿ
Home / News NOW / ದೇಶೀಯವಲ್ಲ ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳಲ್ಲ : ಪೆಪ್ಸಿ, ಫೇರ್​ನೆಸ್​​​ ಉತ್ಪನ್ನಗಳ ಆಡ್​ನಿಂದ ಹಿಂದೆ ಸರಿದ ಕೊಹ್ಲಿ

ದೇಶೀಯವಲ್ಲ ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳಲ್ಲ : ಪೆಪ್ಸಿ, ಫೇರ್​ನೆಸ್​​​ ಉತ್ಪನ್ನಗಳ ಆಡ್​ನಿಂದ ಹಿಂದೆ ಸರಿದ ಕೊಹ್ಲಿ

ನವದೆಹಲಿ : ದೇಶೀಯವಲ್ಲದ ಹಾಗೂ ಆರೋಗ್ಯವರ್ದಕವಲ್ಲದ ಉತ್ಪನ್ನಗಳನ್ನು ಪ್ರಚಾರ ಮಾಡದೇ ಇರಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಹೀಗಾಗಿ, ಪೆಪ್ಸಿ ಮತ್ತು ಫೇರ್ನೆಸ್ ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವಿರಾಟ್​ ಹೇಳಿದ್ದಾರೆ. ಈ ಮೂಲಕ ದೇಶಿವಲ್ಲದ ಉತ್ಪನ್ನಗಳನ್ನು ಪ್ರಚಾರ ಮಾಡದೇ ಇರುವ ಜೊತೆಗೆ ಜಂಕ್​ ಫುಡ್​​ಗಳ ಬಗೆಗೂ ವಿರಾಟ್ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಜೊತೆಗೆ, ಸ್ವದೇಶಿ ವಸ್ತುಗಳ ಬಗೆಗಿನ ಕೂಗಿಗೂ ಇನ್ನಷ್ಟು ಬಲ ತಂದಿದ್ದಾರೆ.

ಭಾರತದಲ್ಲಿ ನೇಮು ಫೇಮು ಹೊಂದಿರುವ ವಿರಾಟ್ ಜಾಹೀರಾತು ಕಂಪೆನಿಗಳ ಬೇಡಿಕೆಯ ಆಟಗಾರರಾಗಿದ್ದರು. ಆದರೆ, ತಾವು ಬಳಕೆ ಮಾಡಿ ವಿಶ್ವಾಸಾರ್ಹ ಎಂದೆನಿಸಿದ ಉತ್ಪನ್ನಗಳ ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ನಿರ್ಧಾರಕ್ಕೆ ಕೊಹ್ಲಿ ಬಂದಿದ್ದಾರೆ. ಪೆಪ್ಸಿ ಕಂಪನಿಯ ಜಾಹೀರಾತಿನಲ್ಲಿ 2011ರಿಂದ ವಿರಾಟ್ ಕಾಣಿಸಿಕೊಳ್ಳುತ್ತಿದ್ದರು. ಈ ಒಪ್ಪಂದ ಏಪ್ರಿಲ್​ನಲ್ಲಿ ಕೊನೆಯಾಗಿತ್ತು. ಕಂಪೆನಿ ಒಪ್ಪಂದ ನವೀಕರಿಸುವಂತೆ ಕೇಳಿತ್ತು. ಆದರೆ, ವಿರಾಟ್ ಈ ಒಪ್ಪಂದ ನವೀಕರಣಕ್ಕೆ ಒಲ್ಲೆ ಎಂದಿದ್ದಾರೆ. ಅಲ್ಲದೆ, ವಿವಿಧ ಫೇರ್​ನೆಸ್​​​ ಕ್ರೀಮ್​ಗಳ ಜಾಹೀರಾತಿನಿಂದಲೂ ವಿರಾಟ್ ಹಿಂದೆ ಸರಿದಿದ್ದಾರೆ.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!