ಚೆನ್ನೈ : ಸೂಪರ್ಸ್ಟಾರ್ ಕಮಲ್ ಹಾಸನ್ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ. ಬಹುತೇಕ ಪ್ರತ್ಯೇಕ ಪಕ್ಷ ಸ್ಥಾಪನೆಯ ಚಿಂತನೆಯಲ್ಲಿ ಕಮಲ್ ಇದ್ದಾರೆ. ಹೀಗೆ ರಾಜಕೀಯ ಪ್ರವೇಶ ಘೋಷಣೆಯ ಬಳಿಕ ಕಮಲ್ ಮತ್ತೋರ್ವ ಸೂಪರ್ಸ್ಟಾರ್ ಮತ್ತು ತಮ್ಮ ಸ್ನೇಹಿತ ರಜನಿಕಾಂತ್ ಬಗೆಗೂ ಮಾತನಾಡಿದ್ದಾರೆ.
ಒಂದೊಮ್ಮೆ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾದರೆ ಅವರೊಂದಿಗೆ ಕೆಲಸ ಮಾಡಲು ನಾನು ಬಯಸಿದ್ದೇನೆ ಎಂದು ಕಮಲ್ ಹೇಳಿದ್ದಾರೆ. ಸಿನೆಮಾ ರಂಗದಲ್ಲಿ ನಮ್ಮಿಬ್ಬರ ನಡುವೆ ಸ್ಪರ್ಧೆ ಇದ್ದರೂ ನಾವಿಬ್ಬರು ಗೆಳೆಯರು. ಹೀಗಾಗಿ, ನಾವಿಬ್ಬರು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.