Wednesday , January 24 2018
Home / Gulf News / ಕೋಣೆಯೊಳಗೆ ಸಿಲುಕಿದ್ದ ಬಾಲಕಿಯನ್ನು ಕರೆ ಮಾಡಿದ ಐದೇ ನಿಮಿಷದಲ್ಲಿ ರಕ್ಷಿಸಿದ ಭದ್ರತಾ ತಂಡ
Buy Bitcoin at CEX.IO

ಕೋಣೆಯೊಳಗೆ ಸಿಲುಕಿದ್ದ ಬಾಲಕಿಯನ್ನು ಕರೆ ಮಾಡಿದ ಐದೇ ನಿಮಿಷದಲ್ಲಿ ರಕ್ಷಿಸಿದ ಭದ್ರತಾ ತಂಡ

ರಾಹುಲ್​ ರೋಷನ್ ಸಿಕ್ವೇರಾ, ಗಲ್ಫ್​​ ಬ್ಯುರೋ

ದುಬೈ : ಅಲ್​ ಐನ್​ ನ ಕುಟುಂಬವೊಂದರಲ್ಲಿ ಈಗ ಖುಷಿ ಮನೆ ಮಾಡಿದೆ. ಯುಎಇಯ ತುರ್ತು ಸೇವಾ ಸಂಖ್ಯೆ 999 ಇವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ. ಕಷ್ಟದಲ್ಲಿ ಸಿಲುಕಿದ್ದ ಹುಡುಗಿಯನ್ನು ಇಲ್ಲಿನ ಭದ್ರತಾ ತಂಡಗಳು ಕರೆ ಮಾಡಿದ ಐದೇ ನಿಮಿಷದಲ್ಲಿ ರಕ್ಷಿಸುವ ಮೂಲಕ ಇವರ ಆತಂಕವನ್ನು ದೂರ ಮಾಡಿದೆ.

ಏನಿದು ಘಟನೆ? : ಆ ಮನೆಯಲ್ಲಿ ತಂದೆ ಬಸೀರ್ ಅವರೊಂದಿಗೆ ಮಗಳು ವಾಸವಾಗಿದ್ದಳು. ಕುಟುಂಬದವರು ಆ ಹೊತ್ತಿನಲ್ಲಿ ಮನೆಯಲ್ಲಿ ಇರಲಿಲ್ಲ. 14 ವರ್ಷದ ಹುಡುಗಿ ಶಾಲೆಗೆ ಹೋಗಲು ತಯಾರಾಗುತ್ತಿದ್ದಳು. ಬಟ್ಟೆ ಬದಲಾಯಿಸಲು ಕೋಣೆಯ ಬಾಗಿಲು ಹಾಕಿದಳು. ಆದರೆ, ಅಚಾನಾಕಾಗಿ ಈ ಬಾಗಿಲಿನ ಬೀಗ ಬಿದ್ದಿತ್ತು. ಬಾಗಿಲು ತೆರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಹುಡುಗಿ ಒಳಗಿನಿಂದ ಕೂಗುವುದನ್ನು ಕೇಳಿದ ತಂದೆ ಕೂಡಾ ಬಾಗಿಲಿನ ಬೀಗ ತೆಗೆಯುವ ಪ್ರಯತ್ನ ಮಾಡಿದರು. ಆದರೆ, ಅದೂ ಸಾಧ್ಯವಾಗಲಿಲ್ಲ. ಹೀಗಾಗಿ, ತಕ್ಷಣ ಮನೆಯ ಕೆಳಭಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಇದ್ದ ತನ್ನ ಫೋನ್​ ಅನ್ನು ತೆಗೆದು 999 ತುರ್ತು ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದರು. ವಿಷಯ ತಿಳಿದ ಐದೇ ನಿಮಿಷಕ್ಕೆ ರಕ್ಷಣಾ ತಂಡ ಬಸೀರ್ ಮನೆಗೆ ಬಂದು ಬಾಗಿಲನ್ನು ಒಡೆದು ಬಾಲಕಿಯನ್ನು ರಕ್ಷಿಸಿದೆ.

ಭದ್ರತಾ ಪಡೆಗಳ ಈ ತಕ್ಷಣದ ಸ್ಪಂದನೆಯನ್ನು ಬಸೀರ್ ಕೊಂಡಾಡಿದ್ದಾರೆ. ಬಾಲಕಿಯೂ ಯಾವುದೇ ತೊಂದರೆ ಇಲ್ಲದೆ ಬಚಾವ್ ಆಗಿದ್ದಾಳೆ.

CEX.IO Bitcoin Exchange

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!