Wednesday , January 24 2018
Home / Film News / Bollywood / ಇನಿಯನ ಜೊತೆ ಇಲಿಯಾನ ರೊಮ್ಯಾನ್ಸ್​​ : ವೈರಲ್ ಆಗಿದೆ ಫೋಟೋ…
Buy Bitcoin at CEX.IO

ಇನಿಯನ ಜೊತೆ ಇಲಿಯಾನ ರೊಮ್ಯಾನ್ಸ್​​ : ವೈರಲ್ ಆಗಿದೆ ಫೋಟೋ…

ಮುಂಬೈ : ಬರ್ಫಿ ಬೆಡಗಿ ಇಲಿಯಾನಾ ಇತ್ತೀಚಿನ ದಿನಗಳಲ್ಲಿ ಚಿತ್ರಕ್ಕಿಂತಲೂ ಇತರ ಸಂಗತಿಗಳಿಗೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಅಭಿಮಾನಿಗಳಿಂದ ಕಿರುಕುಳಕ್ಕೊಳಗಾಗಿ ಇಲಿಯಾನಾ ತುಂಬಾ ಸುದ್ದಿಯಾಗಿದ್ದರು. ಟ್ವಿಟರ್​ನಲ್ಲಿ ಅಭಿಮಾನಿಗಳ ಅಸಭ್ಯ ವರ್ತನೆ ಬಗ್ಗೆ ಇಲಿಯಾನ ಬರೆದುಕೊಂಡಿದ್ದರು. ಇದಾದ ಬಳಿಕ ಇಲಿಯಾನ ಮತ್ತೊಂದು ಸಲ ಸುದ್ದಿಯಾಗಿದ್ದು ತಮ್ಮ ಪ್ರೀತಿಯ ಕತೆಯಿಂದ…

ಇಲಿಯಾನಾ ಪ್ರೀತಿಯ ವಿಚಾರ ಬಹಳ ದಿನಗಳಿಂದ ಗಾಸಿಪ್ ಕಾಲಂಗಳಲ್ಲಿ ಬರುತ್ತಿತ್ತು. ಆದರೆ, ಇಲಿಯಾನಾ ಎಲ್ಲದಕ್ಕೂ ಮೌನವಾಗಿದ್ದರು. ಪತ್ರಕರ್ತರು ಈ ಬಗ್ಗೆ ಕೇಳಿದಾಗಲೂ ಪ್ಲೀಸ್​ ಈ ಬಗ್ಗೆ ಕೇಳಬೇಡಿ ಎಂದೇ ಇಲಿಯಾನ ಉತ್ತರಿಸುತ್ತಿದ್ದರು. ಆದರೆ, ವೈಯಕ್ತಿಕ ವಿಚಾರಗಳನ್ನು ಹೆಚ್ಚುದಿನ ಮುಚ್ಚಿಡುವವರು ಇಲಿಯಾನ ಅಲ್ಲ. ಹೀಗಾಗಿ, ಇತ್ತೀಚೆಗೆ ಪ್ರೀತಿಯ ಬಗ್ಗೆ ಇಲಿಯಾನ ಬಹಿರಂಗವಾಗಿಯೇ ಮಾತನಾಡಿದ್ದರು. ಅಲ್ಲದೆ, ಟ್ವಿಟರ್​ನಲ್ಲಿ ತನ್ನ ಪ್ರೀತಿಯ ವಿಷಯವನ್ನು ಘೋಷಿಸಿಕೊಂಡಿದ್ದರು.

A moment. In a world of madness.

A post shared by Ileana D'Cruz (@ileana_official) on


ಇಲಿಯಾನ ಮನಗೆದ್ದ ಆ ವೀರ ಯುರೋಪಿನ ಛಾಯಾಗ್ರಾಹಕ ಆಂಡ್ರೋ ನಿಬೋನ್​​…ಯಾವಾಗ ಇಲಿಯಾನ ತನ್ನ ಡೇಟಿಂಗ್ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರೋ ಟ್ವಿಟರ್​ನಲ್ಲಿ ಟ್ರೋಲ್ ಕೂಡಾ ಶುರುವಾಗಿತ್ತು. ಅದು ಆಂಡ್ರೋ ವಿದೇಶಿಯರು ಎಂಬ ಕಾರಣಕ್ಕೆ. ಇದಕ್ಕೂ ಇಲಿಯಾನ ತುಂಬಾ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿದ್ದರು. ಮೈ ಬಣ್ಣ ನೋಡಬೇಡಿ, ದೇಹದೊಳಗಿರುವ ಹೃದಯವನ್ನು ನೋಡಿ ಎಂದು ಪ್ರತಿಕ್ರಿಯೆ ಕೊಟ್ಟು ಟೀಕಿಸುವವರು ಬಾಯಿ ಮುಚ್ಚಿಸಿದ್ದರು ಈ ಬೆಡಗಿ…

How I miss this ❤

A post shared by Ileana D'Cruz (@ileana_official) on


ಹೀಗೆ, ಪ್ರೀತಿಯ ಬಗ್ಗೆ ಏನೇ ಟೀಕೆಗಳು ಬಂದರೂ ಇಲಿಯಾನ ಮಾತ್ರ ತನ್ನ ಇನಿಯನ ಬಹುಬಂಧನದಲ್ಲಿ ಬಂಧಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಇಲಿಯಾನ ಅವರ ಇತ್ತೀಚಿನ ಫೋಟೋಗಳು. ತನ್ನ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನ ಒಂದಷ್ಟು ಫೋಟೋ ಹಾಕಿದ್ದಾರೆ. ಈ ಫೋಟೋ ನೋಡಿದಾಗ ನಿಮ್ಮ ಬಾಯಿಯಲ್ಲಿ ಓ ಹೋ ಎಂಬ ಉದ್ಘಾರ ಬಂದರೂ ಅಚ್ಚರಿ ಇಲ್ಲ.

This ❤️

A post shared by Ileana D'Cruz (@ileana_official) on


ತಮ್ಮ ಸಿನಿಲೋಕದ ಬ್ಯುಸಿ ಕೆಲಸದ ನಡುವೆಯೂ ಇಲಿಯಾನ ಬಿಡುವು ಮಾಡಿಕೊಂಡು ಪ್ರೇಮಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ, ಈ ಫೋಟೋಗೆ ‘ಎ ಮೂಮೆಂಟ್​​​ ಇನ್​ ಎ ವರ್ಲ್ಡ್​ ಆಫ್​ ಮ್ಯಾಡ್​ನೆಸ್​’ ಎಂದೂ ಕ್ಯಾಪ್ಶನ್ ಕೊಟ್ಟಿದ್ದಾರೆ. ತಮ್ಮ ಪ್ರೇಮ ಸಂಬಂಧದ ಬಗ್ಗೆ ಇಲಿಯಾನ ಈ ಹಿಂದೆ ಬಾಯಿ ಬಿಟ್ಟಿರಲಿಲ್ಲ. ಈ ವಿಷಯ ಬಹಿರಂಗಪಡಿಸಿದರೆ ತನ್ನ ಕೆರಿಯರ್ ಮೇಲೆ ತೊಂದರೆಯಾಗಬಹುದು ಎಂಬ ಆತಂಕವೂ ಇವರಿಗಿತ್ತು. ಹೀಗಾಗಿಯೇ, ಪತ್ರಕರ್ತರು ಪ್ರಶ್ನೆ ಕೇಳಿದರೆ ಪ್ಲೀಸ್​ ಬೇರೆ ಪ್ರಶ್ನೆ ಕೇಳಿ ಎಂದು ಹಾರಿಕೆಯ ಉತ್ತರವಷ್ಟೇ ಕೊಡುತ್ತಿದ್ದರು ಇಲಿಯಾನ. ಆದರೆ, ಈಗ ಸಿನಿಲೋಕದಲ್ಲಿ ಇಲಿಯಾನ ಒಂದಷ್ಟು ಹೆಸರು ಮಾಡಿದ್ದಾರೆ. ದಕ್ಷಿಣ ಭಾರತದಲ್ಲೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲೂ ಇವರ ಹೆಜ್ಜೆ ಗುರುತುಗಳಿವೆ. ಹೀಗಾಗಿ, ಪ್ರೀತಿಯ ವಿಷಯವನ್ನೂ ಇಲಿಯಾನ ಬಹಿರಂಗ ಮಾಡಿದ್ದಾರೆ. ಈ ಮೂಲಕ ತಮ್ಮ ಪ್ರೀತಿಯ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ…

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!