Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / Kollywood / ಪ್ರಿಯತಮನೊಂದಿಗೆ ನ್ಯೂಯಾರ್ಕ್​ನಲ್ಲಿರುವ ನಯನಾತಾರಾ

ಪ್ರಿಯತಮನೊಂದಿಗೆ ನ್ಯೂಯಾರ್ಕ್​ನಲ್ಲಿರುವ ನಯನಾತಾರಾ

ಚೆನ್ನೈ : ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ಲೇಡಿ ಸೂಪರ್​ ಸ್ಟಾರ್ ನಯನಾತಾರಾ ನಡುವೆ ಪ್ರೇಮ ಸಂಬಂಧ ಇದೆ ಎಂಬ ಸುದ್ದಿ ಬಹಳ ಹಳೆಯದ್ದು. ಸೆಪ್ಟೆಂಬರ್​ 18 ವಿಘ್ನೇಶ್ ಹುಟ್ಟುಹಬ್ಬ. ಈ ದಿನವನ್ನು ಈ ಬಾರಿ ವಿಘ್ನೇಶ್ ನ್ಯೂಯಾರ್ಕ್​ನಲ್ಲಿ ಆಚರಿಸುತ್ತಿದ್ದಾರೆ. ಜೊತೆಗೆ ಇವರ ಪ್ರಿಯತಮೆ ನಯನಾತಾರಾ ಕೂಡಾ ಇದ್ದಾರೆ.


ವಿಘ್ನೇಶ್​ ನಿರ್ದೇಶಿಸಿದ ನಾನೂಮ್​ ರೌಡಿದಾನ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಹಿಟ್ ಆಗಿದೆ. ಇದರಲ್ಲಿ ನಯನಾತಾರಾ ಮತ್ತು ವಿಜಯ್​ ಸೇತುಪತಿ ಹೀರೋ ಹೀರೋಯಿನ್​​. ಸದ್ಯ ಸೂರ್ಯ ಅಭಿನಯದ ‘ತನ್ನ ಸೇರ್ದ ಕೂಟಂ‘ ಚಿತ್ರವನ್ನು ಶಿವನ್ ನಿರ್ದೇಶನ ಮಾಡುತ್ತಿದ್ದಾರೆ. ಪೊಂಗಲ್​ಗೆ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರದ ಕೆಲಸದ ನಡುವೆ ಬಿಡುವು ಮಾಡಿಕೊಂಡು ವಿಘ್ನೇಶ್ ಮತ್ತು ನಯನಾತಾರಾ ಡ್ರೀಮ್​ ಸಿಟಿಯಲ್ಲಿ ಸುತ್ತಾಡುತ್ತಿದ್ದಾರೆ.

ನಯನತಾರಾ ದಕ್ಷಿಣ ಭಾರತದ ಸುಂದರ ನಟಿ… ಲೇಡಿ ಸೂಪರ್​ಸ್ಟಾರ್ ಎಂಬುದು ಇವರಿಗಿರುವ ಬಿರುದು… ಆ ಬಿರುದಿನಂತೆ ಸೂಪರ್ ಹಿಟ್​ ಚಿತ್ರಗಳನ್ನೂ ಕೊಟ್ಟವರು ನಯನತಾರಾ… ಇಂತಹ ನಯನತಾರಾ ಅವರ ಪ್ರೀತಿಯ ಕತೆಯೂ ಯಾವುದೇ ಚಿತ್ರಕ್ಕಿಂತ ಕಮ್ಮಿ ಇಲ್ಲ. ಆರಂಭದಲ್ಲಿ ನಯನಾತಾರ ಹೆಸರು ಕೇಳಿ ಬರುತ್ತಿದ್ದದ್ದು ನಟ ಸಿಂಬು ಜೊತೆ…

ಇನ್ನೇನು ಮದುವೆ ಆಗಿಯೇ ಹೋಯಿತು ಎನ್ನುವಷ್ಟರಲ್ಲಿ ಈ ಜೋಡಿ ದೂರವಾಗಿತ್ತು. ಬಹಳ ವರ್ಷ ಮಾತುಕತೆಯೂ ಇರಲಿಲ್ಲ. ಇದಾದ ಬಳಿಕ ಕಳೆದ ವರ್ಷವಷ್ಟೇ ಜೊತೆಯಾಗಿ ನಟಿಸುವ ಮೂಲಕ ಸಿಂಬು, ನಯನತಾರಾ ಮತ್ತೆ ಸ್ನೇಹಿತರಾಗಿದ್ದರು… ಆದರೆ, ಸಿಂಬು ಜೊತೆಗಿನ ಬ್ರೇಕ್​ ಅಪ್ ಸ್ಟೋರಿ ಬಳಿಕ ನಯನಾ ಹೆಸರು ಥಳುಕು ಹಾಕಿಕೊಂಡಿದ್ದು ಭಾರತದ ಮೈಕಲ್ ಜಾಕ್ಸನ್​ ಪ್ರಭುದೇವಾ ಜೊತೆ…

ಪ್ರಭು ಕೂಡಾ ನಯನತಾರಾಗಾಗಿ ತನ್ನ ಪತ್ನಿಯನ್ನು ತೊರೆದಿದ್ದರು. ನಯನ ಕೂಡಾ ಕ್ರಿಶ್ಚನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇವರದ್ದು ಕೂಡಾ ಇನ್ನೇನು ಮದುವೆ ಆಗಿಯೇ ಹೋಯ್ತು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು… ಆದರೆ, ಮುಂದೆ ಅದೇನಾಯ್ತೋ… ಗೊತ್ತಿಲ್ಲ. ನಯನತಾರಾ ಪ್ರಭು ದೂರ ದೂರವಾದರು… ಅಲ್ಲಿಗೆ ನಯನತಾರಾರ ಮತ್ತೊಂದು ಲವ್​ ಸ್ಟೋರಿ ಮುಗಿದಿತ್ತು… ಪ್ರಭುದೇವ ಜೊತೆಗಿನ ಲವ್​ಸ್ಟೋರಿ ಕೊನೆಯಾದ ಬಳಿಕ ನಯನತಾರಾರ ಮತ್ತೊಂದು ಲವ್​ ಸ್ಟೋರಿ ಓಪನ್ ಆಗಿತ್ತು… ಅದು ನಿರ್ದೇಶಕ ವಿಘ್ನೇಶ್​ ಶಿವನ್​ ಜೊತೆ…

ನಿರ್ದೇಶಕ ವಿಘ್ನೇಶ್​ ಶಿವನ್ ಮತ್ತು ನಯನತಾರಾ ಪ್ರೀತಿಯ ಕತೆ ಒಂದೆರಡು ವರ್ಷಗಳಿಂದ ಬಹಳ ಜೋರಾಗಿಯೇ ಇದೆ. ಅಲ್ಲಿ ಇಲ್ಲಿ ಒಟ್ಟಾಗಿ ಸುತ್ತಾಡುವ ಮೂಲಕ ಇವರು ಕೂಡಾ ಹಲವರ ಕಣ್ಣಿಗೆ ಬಿದ್ದಿದ್ದರು. ಈ ಅನುಮಾನಾಸ್ಪದ ಓಡಾಟ ಗಾಸಿಪ್ ಕಾಲಂಗಳಲ್ಲೂ ದೊಡ್ಡದಾಗಿಯೇ ಬರುತ್ತಿತ್ತು… ಆದರೆ, ಇಬ್ಬರೂ ತಮ್ಮ ಪ್ರೀತಿಯ ವಿಚಾರ ನಿರಾಕರಿಸುತ್ತಲೇ ಬಂದಿದ್ದರು… ಈ ನಡುವೆ, ನಯನತಾರಾ ಮತ್ತು ವಿಘ್ನೇಶ್ ಗುಟ್ಟಾಗಿ ಮದುವೆ ಕೂಡಾ ಮಾಡಿಕೊಂಡಿದ್ದಾರೆ ಎಂದು ಈಚೆಗೆ ಒಂದು ವರ್ಷದ ಹಿಂದೆ ಸಖತ್ ಸುದ್ದಿಯಾಗಿತ್ತು. ​ ಆದರೆ, ಈ ಸುದ್ದಿಯನ್ನು ಇವರಿಬ್ಬರು ಅಲ್ಲಗಳೆದಿದ್ದರೂ ಇವರ ಪ್ರೀತಿಯ ಕತೆಗೆ ಮಾತ್ರ ತೆರೆ ಬಿದ್ದಿರಲಿಲ್ಲ. ಅಲ್ಲಿ ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಈ ಸುದ್ದಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದರು…

ಸದ್ಯ ಈ ಜೋಡಿ ನ್ಯೂಯಾರ್ಕ್​ನಲ್ಲಿದೆ… ಸೆಪ್ಟೆಂಬರ್ 18 ವಿಘ್ನೇಶ್​ ಶಿವನ್ ಅವರ ಹುಟ್ಟುಹಬ್ಬ. ಹೀಗಾಗಿ, ಈ ಪ್ರೇಮಪತಂಗಗಳು ನ್ಯೂಯಾರ್ಕ್​ಗೆ ಹಾರಿವೆ… ಇವರಿಬ್ಬರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಲಾರಂಭಿಸಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!