Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಅನಿವಾಸಿ ಭಾರತೀಯರೇ ಎಚ್ಚರ…! : ಹೆಂಡತಿಗೆ ಹಿಂಸೆ ಕೊಟ್ಟರೆ ಪಾಸ್‍ಪೋರ್ಟ್ ಕ್ಯಾನ್ಸಲ್…?

ಅನಿವಾಸಿ ಭಾರತೀಯರೇ ಎಚ್ಚರ…! : ಹೆಂಡತಿಗೆ ಹಿಂಸೆ ಕೊಟ್ಟರೆ ಪಾಸ್‍ಪೋರ್ಟ್ ಕ್ಯಾನ್ಸಲ್…?

ನವದೆಹಲಿ : ಪತ್ನಿ ಪೀಡಕ ಅನಿವಾಸಿ ಭಾರತೀಯರ ಮೇಲೆ ಸರ್ಕಾರ ಸಿಡಿದೆದ್ದಿದೆ. ಕೇಂದ್ರ ವಿದೇಶಾಂಗ ಇಲಾಖೆ ರಚಿಸಿದ ಉನ್ನತ ಮಟ್ಟದ ಸಮಿತಿಯು ಪತ್ನಿ ಪೀಡಕ ಅನಿವಾಸಿ ಭಾರತೀಯರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದೆ. ಒಂದೊಮ್ಮೆ ಸರ್ಕಾರ ಶಿಫಾರಸ್ಸನ್ನು ಒಪ್ಪಿದರೆ ಎನ್‍ಆರ್‍ಐಗಳಿಗೆ ಸಂಕಷ್ಟ ತಪ್ಪಿದಲ್ಲ. ಯಾಕೆಂದರೆ, ಪತ್ನಿಗೆ ಹಿಂಸೆ ನೀಡುವ ಮತ್ತು ಪತ್ನಿಯನ್ನು ಬಿಟ್ಟು ಬರುವ ಎನ್‍ಆರ್‍ಐಗಳ ಪಾಸ್‍ಪೋರ್ಟ್ ರದ್ದು ಮಾಡುವುದು ಈ ಉನ್ನತ ಸಮಿತಿ ಮಾಡಿರುವ ಪ್ರಮುಖ ಶಿಫಾರಸು.

ಈ ನಿರ್ಧಾರದಿಂದ ಪತ್ನಿ ಪೀಡಕರನ್ನು ಕಾನೂನಡಿಗೆ ತಂದು ದಂಡಿಸಲು ಸುಲಭವಾಗುತ್ತದೆ. ಯಾಕೆಂದರೆ, ಈಗ ಇರುವ ನಿಯಮಗಳಿಂದ ಪತ್ನಿಗೆ ಹಿಂಸೆ ನೀಡುವವರನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಲು ಹಲವು ಅಡೆತಡೆಗಳಿವೆ. ಒಂದೊಮ್ಮೆ ಉನ್ನತ ಸಮಿತಿ ಮಾಡಿರುವ ಈ ಶಿಫಾರಸು ಅಂಗೀಕಾರವಾದರೆ ಅಪರಾಧಿಗೆ ತಕ್ಕ ಶಿಕ್ಷೆ ಕೊಡುವಂತೆ ಮಾಡಲು ಅನುಕೂಲವಾಗುತ್ತದೆ. ಹೇಗೆಂದರೆ, ಪಾಸ್‍ಪೋರ್ಟ್ ರದ್ದಾದರೆ ಆತ ದೇಶ ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ವಿದೇಶದಲ್ಲೇ ಇದ್ದರೂ ಆತನ ಗಡಿಪಾರಿನ ಪ್ರಕ್ರಿಯೆಗೂ ಇದು ಪೂರಕವಾಗಿರುತ್ತದೆ.

ಎನ್‍ಆರ್‍ಐ ಮಹಿಳೆಯರು ನೀಡಿದ್ದ ಹಲವು ದೂರಿನ ಆಧಾರದ ಮೇಲೆ ಈ ಉನ್ನತ ಸಮಿತಿಯನ್ನು ರಚನೆ ಮಾಡಲಾಗಿತ್ತು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!