Sunday , December 16 2018
ಕೇಳ್ರಪ್ಪೋ ಕೇಳಿ
Home / Film News / Bollywood / ಆರ್​.ಕೆ.ಸ್ಟುಡಿಯೋದಲ್ಲಿ ಬೆಂಕಿ : ನರ್ಗೀಸ್​ರಿಂದ ಹಿಡಿದು ಐಶ್ವರ್ಯವರೆಗೆ ಎಲ್ಲರೂ ಧರಿಸಿದ್ದ ಕಾಸ್ಟ್ಯೂಮ್ಸ್​ ಭಸ್ಮ

ಆರ್​.ಕೆ.ಸ್ಟುಡಿಯೋದಲ್ಲಿ ಬೆಂಕಿ : ನರ್ಗೀಸ್​ರಿಂದ ಹಿಡಿದು ಐಶ್ವರ್ಯವರೆಗೆ ಎಲ್ಲರೂ ಧರಿಸಿದ್ದ ಕಾಸ್ಟ್ಯೂಮ್ಸ್​ ಭಸ್ಮ

ಮುಂಬೈ : ಕಳೆದ ವಾರ ಮುಂಬೈನ ಆರ್​.ಕೆ.ಸ್ಟುಡಿಯೋದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಇದರಿಂದ ಸಾಕಷ್ಟು ನಷ್ಟವೂ ಆಗಿತ್ತು. ಆದರೆ, ಹಣಕ್ಕಿಂತಲೂ ಹೆಚ್ಚಾಗಿ ಅಮೂಲ್ಯ ವಸ್ತುಗಳು ಇಲ್ಲಿ ಭಸ್ಮವಾಗಿದ್ದವು.

ಆರ್​.ಕೆ.ಸ್ಟುಡಿಯೋ ಬಾಲಿವುಡ್​ನ ದಿಗ್ದರ್ಶಕ ರಾಜ್​ ಕಪೂರ್​ ಅವರು ಹುಟ್ಟುಹಾಕಿದ್ದ ಸ್ಟುಡಿಯೋ. ಹಿಂದಿ ಚಿತ್ರರಂಗದ ಮಟ್ಟಿಗೆ ಇದೊಂದು ಪ್ರಮುಖ ಸ್ಥಳ. ರಾಜ್​ ಕಪೂರ್ ಕುಟುಂಬ ಈಗಲೂ ಇಲ್ಲಿ ಅಪೂರ್ವ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿತ್ತು. ಹಲವು ಬ್ಲಾಕ್​ಬಸ್ಟರ್​ ಚಿತ್ರಗಳು ಇಲ್ಲಿ ಶೂಟ್ ಆಗಿದ್ದವು. ಹೀಗಾಗಿ, ಆರ್​.ಕೆ.ಸ್ಟುಡಿಯೋ ಮೇಲೆ ಬಾಲಿವುಡ್​ಗೂ ಒಂದು ಭಾವನಾತ್ಮಕ ನಂಟಿದೆ.

ಈ ಬಗ್ಗೆ ಮಾತನಾಡಿರುವ ನಟ ರಿಶಿ ಕಪೂರ್​, ಇಲ್ಲಿ ಹಿಂದಿ ಚಿತ್ರರಂಗದ ಅಪೂರ್ವ ಚಿತ್ರಗಳ ಶೂಟಿಂಗ್ ವೇಳೆ ಕಲಾವಿದರು ಧರಿಸಿದ್ದ ಕಾಸ್ಟ್ಯೂಮ್​ಗಳನ್ನು ಇಲ್ಲಿ ಕಾಪಾಡಿಕೊಂಡು ಬರಲಾಗಿತ್ತು. ನಟಿ ನರ್ಗೀಸ್​ರಿಂದ ಹಿಡಿದು ಐಶ್ವರ್ಯ ಬಚ್ಚನ್​ ಧರಿಸಿದ್ದ ಬಟ್ಟೆಗಳೂ ಇಲ್ಲಿದ್ದವು. ಆದರೆ, ಈ ಎಲ್ಲಾ ಕಾಸ್ಟೂಮ್​ಗಳು ಬೆಂಕಿಗಾಹುತಿಯಾಗಿವೆ. ಅದೂ ಅಲ್ಲದೆ, ನಟಿ ಪದ್ಮಿನಿ ಚಿತ್ರವೊಂದರಲ್ಲಿ ಧರಿಸಿದ್ದ ಆಭರಣಗಳನ್ನೂ ಇಲ್ಲಿ ರಕ್ಷಿಸಲಾಗಿತ್ತು ಎಂದು ಭಾವುಕರಾಗುತ್ತಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!