Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / 15 ಪೊಲೀಸರಿಂದ ಸನ್ನಿ ಲಿಯೋನ್​ ಪೋಸ್ಟರ್​ಗೆ ರಕ್ಷಣೆ…!

15 ಪೊಲೀಸರಿಂದ ಸನ್ನಿ ಲಿಯೋನ್​ ಪೋಸ್ಟರ್​ಗೆ ರಕ್ಷಣೆ…!

ಅಹಮ್ಮದಾಬಾದ್​ : ನಟಿ ಸನ್ನಿ ಲಿಯೋನ್​ ಈಗ ಹೋದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಮೊನ್ನೆ ಮೊನ್ನೆ ಕೊಚ್ಚಿಯಲ್ಲಿ ಸನ್ನಿಗಾಗಿ ರೋಡ್​ ಕೂಡಾ ಬ್ಲಾಕ್ ಆಗಿದ್ದನ್ನು ನೋಡಿದ್ದೇವೆ. ಹೀಗಾಗಿ, ಸನ್ನಿ ಲಿಯೋನ್​ ಹೊರಗೆ ಹೋದ ಸಂದರ್ಭದಲ್ಲಿ ಪೊಲೀಸರು ಇವರಿಗೆ ಭದ್ರತೆ ಕೊಡುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಸನ್ನಿ ಲಿಯೋನ್​​ ಪೋಸ್ಟರ್​ಗೂ ಪೊಲೀಸರು ರಕ್ಷಣೆ ಕೊಟ್ಟಿದ್ದಾರೆ…! ಇದು ನಿಜ…

ಸನ್ನಿ ಲಿಯೋನ್​ ಕಾಂಡೋಮ್​ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ಸದ್ಯ ಕೆಲವರ ವಿರೋಧಕ್ಕೆ ಕಾರಣವಾಗಿದೆ. ಕಾರಣ, ದಸರಾ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಜನರು ಆಡಿ ತೋರಿಸುವ ಗರ್ಭ ನೃತ್ಯವನ್ನು ಆಧಾರವಾಗಿಟ್ಟುಕೊಂಡು ಈ ಜಾಹೀರಾತನ್ನು ಡಿಸೈನ್ ಮಾಡಿದ್ದು. ಗರ್ಭ ನೃತ್ಯಕ್ಕೆ ಅದರಲ್ಲೇ ಆದ ಸ್ಥಾನಮಾನ ಇದ್ದು, ಅದನ್ನು ಕಾಂಡೋಮ್​ನ ಜಾಹೀರಾತಿಗೆ ಬಳಸಿದ್ದು ಇವರ ಆಕ್ಷೇಪಕ್ಕೆ ಕಾರಣ. ಇಂತಹ ದೊಡ್ಡ ದೊಡ್ಡ ಜಾಹೀರಾತು ಫಲಕಗಳು ಗುಜರಾತ್​, ಸೂರತ್​ನಲ್ಲಿ ಹಲವು ಕಡೆ ಇದೆ. ಈ ಜಾಹೀರಾತು ಫಲಕದ ಬಗ್ಗೆ ವಿರೋಧವೂ ದೊಡ್ಡ ಮಟ್ಟದಲ್ಲೇ ಕೇಳಿ ಬಂದಿತ್ತು. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿ ಸಾಕಷ್ಟು ಜನರು ಈ ಜಾಹೀರಾತು ಫಲಕದ ವಿರುದ್ಧ ಹೋರಾಟ ಆರಂಭಿಸಿದ್ದರು. ಹೀಗಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ವಿವಾದಿತ ಜಾಹೀರಾತು ಫಲಕದ ಸುತ್ತು ಸುಮಾರು 15 ಪೊಲೀಸರನ್ನು ನಿಯೋಜಿಸಲಾಗಿತ್ತು..!

ಜಾಹೀರಾತು ಫಲಕ ತೆರವು : ಇನ್ನು, ವಿರೋಧ ಜಾಸ್ತಿ ಆಗುತ್ತಿದ್ದಂತೆಯೇ ಅಹಮದಾಬಾದ್​ನ ವಸ್ನಾ ಮತ್ತು ಎಲ್ಲೋರಾ ಪಾರ್ಕ್​ ಬಳಿ ಇದ್ದ ಜಾಹೀರಾತು ಫಲಕವನ್ನು ತೆರವುಗೊಳಿಸಲಾಗಿದೆ. ಸ್ವತಃ ಜಾಹೀರಾತು ಏಜೆನ್ಸಿಯೇ ಈ ಕ್ರಮ ಕೈಗೊಂಡಿದೆ. ಆದರೂ, ಕೆಲವು ಕಡೆ ಈ ಜಾಹೀರಾತು ಫಲಕ ಇನ್ನೂ ಹಾಗೆಯೇ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ, ವಿರೋಧ ವ್ಯಕ್ತವಾಗುತ್ತಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!