Monday , January 22 2018
Home / Gulf News / ಗಂಡನೊಂದಿಗೆ ಜಗಳ ಮಾಡಿ ಆತನ ಮೋಸ ಅಧಿಕಾರಿಗಳಿಗೆ ತಿಳಿದ ಪತ್ನಿ : ಪತಿ ಕೈಗೆ ಕೋಳ
Buy Bitcoin at CEX.IO

ಗಂಡನೊಂದಿಗೆ ಜಗಳ ಮಾಡಿ ಆತನ ಮೋಸ ಅಧಿಕಾರಿಗಳಿಗೆ ತಿಳಿದ ಪತ್ನಿ : ಪತಿ ಕೈಗೆ ಕೋಳ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಮನಾಮಾ : ಮೋಸದಿಂದ ಕುವೈಟ್ ಪೌರತ್ವ ಪಡೆದಿದ್ದ ಸಿರಿಯಾದ ವ್ಯಕ್ತಿಯೊಬ್ಬರ 22 ವರ್ಷಗಳ ಬಳಿಕ ತನ್ನ ಪತ್ನಿಯ ಕಾರಣದಿಂದಲೇ ಸಿಕ್ಕಿಬಿದ್ದಿದ್ದಾನೆ. ಗಂಡನೊಂದಿಗೆ ಜಗಳ ಮಾಡಿಕೊಂಡ ಪತ್ನಿ ಅಧಿಕಾರಿಗಳಿಗೆ ತನ್ನ ಪತಿ ಮಾಡಿದ್ದ ಮೋಸವನ್ನು ತಿಳಿಸಿದ್ದಾರೆ. ಇದಾದ ಬಳಿಕ ಅಧಿಕಾರಿಗಳು ಮೋಸ ಮಾಡಿದ ಸಿರಿಯಾದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ 22 ವರ್ಷಗಳ ಹಿಂದೆ ಕುವೈಟ್​ ಪೌರತ್ವ ಪಡೆದಿದ್ದ. ಆದರೆ, ಸಿರಿಯಾ ಮೂಲದ ಈ ವ್ಯಕ್ತಿ ನಕಲಿ ದಾಖಲೆಗಳಿಂದ ಈ ಪೌರತ್ವ ಪಡೆದಿದ್ದ. ಇದಾದ ಬಳಿಕ ಈತನಿಗೆ ಮದುವೆ ಆಗಿ ದಂಪತಿಗೆ ಮಕ್ಕಳು ಕೂಡಾ ಇದ್ದಾರೆ. ಆದರೆ, ಕಳೆದ ವಾರ ಗಂಡನೊಂದಿಗೆ ಜಗಳ ಮಾಡಿಕೊಂಡ ಪತ್ನಿ ಈತನ ಮೋಸದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಳು. ಅಧಿಕಾರಿಗಳು ಪರಿಶೀಲನೆ ನಡೆಸಿದರು. ಜೊತೆಗೆ, ಡಿಎನ್​ಎ ಪರೀಕ್ಷೆ ಕೂಡಾ ನಡೆದಿತ್ತು. ಈ ಪರೀಕ್ಷೆಯಲ್ಲಿ ಈತ ಕುವೈಟ್​ನ ವ್ಯಕ್ತಿ ಅಲ್ಲ ಎಂಬುದು ದೃಢಪಟ್ಟಿತ್ತು. ಈತ ಕುವೈಟ್​ಗೆ ಬಂದ ಸಂದರ್ಭದಲ್ಲಿ ಏರ್​ಪೋರ್ಟ್​ನಲ್ಲಿ ಈತನ ಫಿಂಗರ್​ಪ್ರಿಂಟ್​ ಕೂಡಾ ತೆಗೆದಿಲ್ಲವಂತೆ.

ಇನ್ನು, ಈತ ತನ್ನ ಮೂಲದ ಬಗ್ಗೆ ಮದುವೆ ವೇಳೆ ಮುಚ್ಚಿಟ್ಟಿದ್ದ ಎಂದೂ ಪತ್ನಿ ಆರೋಪಿಸಿದ್ದಾರೆ.

CEX.IO Bitcoin Exchange

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!