Saturday , November 17 2018
ಕೇಳ್ರಪ್ಪೋ ಕೇಳಿ
Home / Film News / Bollywood / ವಿರಾಟ್​ – ಅನುಷ್ಕಾ ನೆಕ್ಸ್ಟ್​ ಪ್ಲ್ಯಾನ್​ ಏನು ಗೊತ್ತಾ…?

ವಿರಾಟ್​ – ಅನುಷ್ಕಾ ನೆಕ್ಸ್ಟ್​ ಪ್ಲ್ಯಾನ್​ ಏನು ಗೊತ್ತಾ…?

ಮುಂಬೈ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಣ ಪ್ರೇಮ ಪ್ರಸಂಗ ತುಂಬಾ ಹಳೆಯದ್ದು. ಇವರಾಗಿ ಏನೂ ಹೇಳದಿದ್ದರೂ ಬಹುತೇಕ ಎಲ್ಲರಿಗೂ ಇವರಿಬ್ಬರ ಪ್ರೇಮ ಪ್ರಸಂಗದ ಬಗ್ಗೆ ಗೊತ್ತೇ ಇದೆ. ಜನರಿಗೆ ಗೊತ್ತಾದ ಮೇಲೆ ಈ ಜೋಡಿ ಕೂಡಾ ತುಂಬಾ ಕಮ್ಫರ್ಟ್​​​ ಝೋನ್​ನಲ್ಲಿ ಇದ್ದು, ಬಹಿರಂಗವಾಗಿಯೇ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಜೋಡಿ ತಮ್ಮ ಸಂಬಂಧವನ್ನು ನೆಕ್ಸ್ಟ್​ ಲೆವೆಲ್​ಗೆ ಕೊಂಡು ಹೋಗಲು ನಿರ್ಧರಿಸಿದ್ದಾರೆ. ಹಾಗಂತ, ಮದುವೆ ಆಗಲು ಇವರಿಬ್ಬರು ನಿರ್ಧರಿಸಿದ್ದಲ್ಲ.

ಅರೇ ಮತ್ತೇನು ಅಂತೀರಾ? ಆಸ್ತಿಯೊಂದರಲ್ಲಿ ಇಬ್ಬರೂ ಜೊತೆಯಾಗಿ ದುಡ್ಡು ಹಾಕಿದ್ದಾರೆ. ಮಹಾರಾಷ್ಟ್ರದ ವರ್ಲಿಯಲ್ಲಿ ಈ ಜಾಗ ಇದೆ. ಈಗಾಗಲೇ ಇವರಿಬ್ಬರು ದೆಹಲಿಯಲ್ಲಿ ಆಸ್ತಿ ಖರೀದಿಸಿದ್ದಾರೆ. ಈಗ ಹೊಸದಾಗಿ ಖರೀದಿಸಿರುವ ಜಾಗದಲ್ಲಿ ಇವರು ರೆಸ್ಟೋರೆಂಟ್​ ಓಪನ್ ಮಾಡಲು ಇವರು ನಿರ್ಧರಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಈ ರೆಸ್ಟೋರೆಂಟ್​ ಓಪನ್​ ಕೂಡಾ ಆಗಲಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!