ಮುಂಬೈ : ನಟಿ ಇಲಿಯಾನ ಈಗ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ, ಚಿತ್ರರಂಗಕ್ಕೆ ಬಂದ ಆರಂಭದ ದಿನಗಳ ಪರಿಸ್ಥಿತಿ ಇದೇ ರೀತಿ ಇರಲಿಲ್ಲವಂತೆ..! ಯಾಕೆಂದರೆ, ಆ ಅವಧಿಯಲ್ಲಿ ಇಲಿಯಾನ ಖಿನ್ನತೆ ಮತ್ತು ಬಾಡಿ ಡಿಸ್ಮಾಫಿಕ್ ಡಿಸಾರ್ಡರ್ನಿಂದ ಬಳಲುತ್ತಿದ್ದರಂತೆ…! ಇದನ್ನು ಸ್ವತಃ ಇಲಿಯಾನ ಅವರೇ ಹೇಳಿಕೊಂಡಿದ್ದಾರೆ. ಜೀನ್ಸ್ ಬ್ರಾಂಡ್ನ ವೀಡಿಯೋ ಶೂಟ್ ಸಂದರ್ಭದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ಆ ದಿನಗಳ ಬಗ್ಗೆ ಇಲಿಯಾನ ಮಾತನಾಡಿದ್ದಾರೆ.
