Wednesday , January 23 2019
ಕೇಳ್ರಪ್ಪೋ ಕೇಳಿ
Home / Interval / ನಾಸಿರುದ್ದೀನ್​​ ಷಾಗೆ ಚೂರಿಯಿಂದ ಇರಿದಿದ್ದ ಸ್ನೇಹಿತ…! ಸಕಾಲದಲ್ಲಿ ಜೀವ ಉಳಿಸಿದ್ದರು ಓಂ ಪುರಿ…!

ನಾಸಿರುದ್ದೀನ್​​ ಷಾಗೆ ಚೂರಿಯಿಂದ ಇರಿದಿದ್ದ ಸ್ನೇಹಿತ…! ಸಕಾಲದಲ್ಲಿ ಜೀವ ಉಳಿಸಿದ್ದರು ಓಂ ಪುರಿ…!

ಬಾಲಿವುಡ್​ ಕಲಾವಿದರಾದ ನಾಸಿರುದ್ದೀನ್ ಷಾ ಮತ್ತು ಓಂ ಪುರಿ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಓಂ ಪುರಿ ಚೂರಿ ಇರಿತಕ್ಕೊಳಗಾಗಿದ್ದ ನಾಸಿರುದ್ದೀನ್ ಷಾರ ಜೀವ ಉಳಿಸಿದ್ದರು ಎಂಬ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ…!

ಅದು 1977ರ ಭೂಮಿಕಾ ಚಿತ್ರದ ಶೂಟಿಂಗ್ ಸಂದರ್ಭ. ಓಂ ಪುರಿ ಮತ್ತು ನಾಸಿರುದ್ದೀನ್ ಷಾ ಊಟ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದವರು ಜಸ್ಪಾಲ್​ ಸಿಂಗ್​ ಎಂಬುವವರು. ಜಸ್ಪಾಲ್​ ನಾಸಿರುದ್ದೀನ್ ಷಾ ಅವರ ಮಾಜಿ ಸ್ನೇಹಿತ. ನಾಸಿರುದ್ದೀನ್ ವಿರುದ್ಧ ವೃತ್ತಿಪರ ಮಾತ್ಸರ್ಯ ಜಸ್ಪಾಲ್​ಗೆ ಇತ್ತು. ಇದಾದ ಬಳಿಕ ಆದ ಕೆಲವೊಂದು ಘಟನೆಗಳಿಂದ ಜಸ್ಪಾಲ್​ರನ್ನು ನಾಸಿರುದ್ದೀನ್ ದೂರವೇ ಇಟ್ಟಿದ್ದರು. ಅಂದು ಓಂಪುರಿ ಮತ್ತು ನಾಸಿರುದ್ದೀನ್ ಊಟಕ್ಕೆ ಕುಳಿತಿದ್ದ ಸಂದರ್ಭದಲ್ಲಿ ಈ ಜಸ್ಪಾಲ್​ ಕೂಡಾ ಬಂದಿದ್ದರು. ಓಂ ಪುರಿ ಅವರಿಗೆ ಮುಗುಳುನಕ್ಕು ಸ್ವಾಗತಿಸಿದರು. ನಾಸಿರುದ್ದೀನ್ ಸುಮ್ಮನಿದ್ದರು. ಇದಾದ ಬಳಿಕ ಓಂ ಪುರಿ ಮತ್ತು ನಾಸಿರುದ್ದೀನ್ ಊಟ ಮುಂದುವರಿಸಿದ್ದರು. ಜಸ್ಪಾಲ್​ ಪಕ್ಕದ ಟೇಬಲ್​ನಲ್ಲಿ  ಹೋಗಿ ಕುಳಿತರು. ಅಲ್ಲಿತನಕ ಎಲ್ಲವೂ ಚೆನ್ನಾಗಿಯೇ ಇತ್ತು.

ಊಟದ ಮಧ್ಯೆ ನಾಸಿರುದ್ದೀನ್​ ಷಾ ಬೆನ್ನಿಗೆ ಯಾರೂ ಚೂರಿಯಿಂದ ಇರಿದಿದ್ದರು. ಏನಾಯ್ತು ಎಂದು ನೋಡಿದಾಗ ಜಸ್ಪಾಲ್ ಕೈಯಲ್ಲಿ ಚೂರಿ ಇತ್ತು. ಅದು ರಕ್ತಸಿಕ್ತವಾಗಿತ್ತು. ಓಂಪುರಿಯೂ ಈ ಘಟನೆಯಿಂದ ಅವಕ್ಕಾಗಿದ್ದರು… ಇನ್ನೊಂದು ಬಾರಿ ಚೂರಿಯಿಂದ ಇರಿಯಲು ಜಸ್ಪಾಲ್ ಕೈ ಎತ್ತಿದ್ದರು. ಆಗ ಅಲ್ಲೇ ಇದ್ದ ಓಂ ಪುರಿ ಮತ್ತು ಬೇರೆಯವರು ಜಸ್ಪಾಲ್​ರನ್ನು ತಡೆದರು.

ನಾಸಿರುದ್ದೀನ್ ನೋವಿನಿಂದ ನರಳುತ್ತಿದ್ದರು. ಓಂ ಪುರಿ ಜಸ್ಪಾಲ್​ ಬೆನ್ನಟ್ಟಿದ್ದರು. ಆದರೆ, ಜಸ್ಪಾಲ್​ ಎಸ್ಕೇಪ್ ಆಗಿ ಆಗಿತ್ತು. ಅಷ್ಟರಲ್ಲಿ ಇನ್ನೊಂದು ಸಮಸ್ಯೆ ಎದುರಾಗಿತ್ತು. ಅದೇನೆಂದರೆ, ಹೊಟೇಲ್​ ಮ್ಯಾನೇಜರ್ ಇವರನ್ನು ಆಸ್ಪತ್ರೆಗೆ ಹೋಗಲು ಬಿಡುತ್ತಿರಲಿಲ್ಲ. ಪೊಲೀಸರು ಬರುವ ತನಕ ನಿಮ್ಮನ್ನು ಹೋಗಲು ಬಿಡುವುದಿಲ್ಲ ಎಂದು ಮ್ಯಾನೇಜರ್ ಹೇಳುತ್ತಿದ್ದ. ಈ ವೇಳೆ, ಓಂ ಪುರಿ ಹೊಟೇಲ್ ಮ್ಯಾನೇಜರ್​ ಜೊತೆ ಜಗಳಕ್ಕೇ ನಿಂತಿದ್ದರು.

ಈ ನಡುವೆ, ಪೊಲೀಸರೂ ಬರುವುದು ತಡವಾಗಿತ್ತು. ಸಿಟ್ಟಿಂದ ಓಂ ಕುದಿಯುತ್ತಿದ್ದರು. ಸ್ಥಳಕ್ಕೆ ಬಂದ ಪೊಲೀಸರೊಂದಿಗೆ ಓಂ ಸಿಟ್ಟು ಪ್ರದರ್ಶಿಸಿದರು. ನಾಸಿರುದ್ದೀನ್ ಮಾತ್ರ ನೋವಿನಿಂದ ನರಳುತ್ತಿದ್ದರು. ಪೊಲೀಸರು ಆಗ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಲೇ ಇದ್ದರು. ತುಂಬಾ ಹೊತ್ತಾದ ಬಳಿಕ ಓಂ ಪುರಿ ನಾಸಿರುದ್ದೀನ್ ಷಾ ಅವರನ್ನು ಜೂಹೂನಲ್ಲಿರುವ ಕೂಪರ್ ಆಸ್ಪತ್ರೆಗೆ ದಾಖಲಿಸಿದರು. ನಾಸಿರುದ್ದೀನ್​ ಅಪಾಯದಿಂದ ಪಾರಾಗಿದ್ದರು…

ಈ ಇಡೀ ಘಟನೆಯನ್ನು ನಾಸಿರುದ್ದೀನ್ ಷಾ ತಮ್ಮ ಆತ್ಮಕತೆ ‘ಆಂಡ್​​ ದೆನ್​ ವನ್​ ಡೇ: ಎ ಮೆಮೋರಿ‘ ಯಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ. ಅಲ್ಲದೆ, ಓಂ ಪುರಿ ಆ ಸನ್ನಿವೇಶದಲ್ಲಿ ನನ್ನ ಜೊತೆಗಿದ್ದು ಜೀವ ಉಳಿಸಿದರು ಎಂದು ಕೊಂಡಾಡಿದ್ದಾರೆ.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!