Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಸಾವನ್ನು ಹತ್ತಿರದಿಂದ ಕಂಡ ಯಶವಂತ್​…! : ಜಲಪಾತದಲ್ಲಿ ಕೊಚ್ಚಿ ಹೋದವನ ಭೀಕರ ಅನುಭವ

ಸಾವನ್ನು ಹತ್ತಿರದಿಂದ ಕಂಡ ಯಶವಂತ್​…! : ಜಲಪಾತದಲ್ಲಿ ಕೊಚ್ಚಿ ಹೋದವನ ಭೀಕರ ಅನುಭವ

ಕಾರವಾರ : ಭಾನುವಾರ ಇಲ್ಲಿನ ನಾಗರಮಡಿ ಜಲಪಾತದಲ್ಲಿ ಗೋವಾ ಮೂಲದ ಏಳು ಮಂದಿ ನೀರುಪಾಲಾಗಿದ್ದರು. ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ ಒಬ್ಬರು ಮಾತ್ರ ಪವಾಡ ಸದೃಶ್ಯ ರೀತಿಯಲ್ಲಿ ಬಚಾವ್​ ಆಗಿದ್ದಾರೆ. ಹೀಗೆ ಸಾವನ್ನು ತುಂಬಾ ಹತ್ತಿರದಿಂದ ಕಂಡು ಪಾರಾದವರು ಯಶವಂತ್​ ರಾಯ್​ಕರ್​. ಗೋವಾದ ನಿವಾಸಿ ಇವರು. ನಾಗರಮಡಿ ದುರಂತದಲ್ಲಿ ಇವರೂ ಕೂಡಾ ಸಾವನ್ನಪ್ಪಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಗೋವಾದ ಸುದ್ದಿ ಮಾಧ್ಯಮಗಳೂ ಇವರ ಫೋಟೋವನ್ನೂ ಮೃತಪಟ್ಟವರ ಪಟ್ಟಿಯಲ್ಲಿ ಪ್ರಕಟಿಸಿತ್ತು. ಆದರೆ, ಯಶವಂತ್ ಸಾವನ್ನೇ ಗೆದ್ದು ಬಂದಿದ್ದಾರೆ.

ಯಶವಂತ್​ ಮನದಾಳದ ಮಾತು : ನನ್ನ ಪತ್ನಿ ಜಲಪಾತದ ಸಮೀಪ ಚಿಕನ್​ ಕಬಾಬ್​ ತಯಾರು ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಇಲ್ಲಿನ ನೀರಿನ ಮಟ್ಟ ಏರಿಕೆಯಾಗಿತ್ತು. ಆಗಲೇ ಅಪಾಯದ ಸೂಚನೆ ನಮಗೆ ಸಿಕ್ಕಿತ್ತು. ಈ ವೇಳೆ, ಹುಡುಗನೊಬ್ಬ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ, ತಕ್ಷಣ ಆತನನ್ನು ನಾನು ಹಿಡಿದು ರಕ್ಷಿಸಿದೆ, ಆದರೆ, ನಾನು ಕೊಚ್ಚಿ ಹೋದೆ. ನನ್ನ ಸಾವು ನಿಶ್ಚಿತ ಎಂದು ನಾನು ಅಂದುಕೊಂಡಿದ್ದೆ. ಆದರೂ ಕಡೇ ಕ್ಷಣದ ವರೆಗೂ ಹೋರಾಡುವ ಮನಸ್ಸು ನನಗಿತ್ತು. ಸುಮಾರು 2 ಕಿಲೋ ಮೀಟರ್ ಅಷ್ಟು ದೂರ ನಾನು ಕೊಚ್ಚಿ ಹೋಗಿದ್ದೆ. ಅಷ್ಟಾಗುವಾಗ ನಾನು ಭಯಭೀತನಾಗಿದ್ದೆ ಮತ್ತು ನನ್ನ ದೇಹದಲ್ಲಿ ಶಕ್ತಿ ಕೂಡಾ ಇರಲಿಲ್ಲ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಮರದ ಕೊಂಬೆ ನನಗೆ ಸಿಕ್ಕಿತ್ತು. ಅದನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಇದಾದ ತುಂಬಾ ಹೊತ್ತಾದ ಬಳಿಕ ನೀರಿನ ಮಟ್ಟ ಇಳಿಯಿತು. ನಾನೂ ಪ್ರಜ್ಞಾಹೀನನಾಗಿದ್ದೆ. ಅಷ್ಟರಲ್ಲಾಗಲೇ ನೀರು ಪಾಲಾದವರ ಹುಡುಕಾಟ ಶುರುವಾಗಿತ್ತು. ರಕ್ಷಣಾ ತಂಡದವರು ನಾನು ಇದ್ದಲ್ಲಿಗೆ ಧಾವಿಸಿದರು. ತಕ್ಷಣ ಆಸ್ಪತ್ರೆಗೆ ಸೇರಿಸಿದರು. ನನಗೆ ಈಜು ಗೊತ್ತಿದ್ದರೂ ಆ ಪ್ರವಾಹದಂತ ಸ್ಥಿತಿಯಲ್ಲಿ ಈಜಲು ಸಾಧ್ಯವಾಗುತ್ತಿರಲಿಲ್ಲ. ಒಂದು ಪಿಕ್​ನಿಕ್​ ಇಷ್ಟು ದೊಡ್ಡ ದುರಂತಕ್ಕೆ ಕಾರಣ ಆಗುತ್ತದೆ ಎಂದು ನಾನು ಎನಿಸಿರಲಿಲ್ಲ. ಇದನ್ನು ಜೀವನದಲ್ಲಿ ನಾನು ಮರೆಯಲು ಸಾಧ್ಯವಿಲ್ಲ.

ಇನ್ನು, ಇದ್ದಕ್ಕಿದ್ದಂತೆಯೇ ನೀರಿನ ಮಟ್ಟ ಏರಿಕೆಯಾಗಿದ್ದು ಹೇಗೆ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. ಗೋವಾದಿಂದ ಕುಟುಂಬವೊಂದು ಇಲ್ಲಿಗೆ ಭಾನುವಾರ ಪಿಕ್​ನಿಕ್​ಗೆಂದು ಬಂದಿತ್ತು. ಈ ವೇಳೆ ಈ ದುರಂತ ಸಂಭವಿಸಿತ್ತು. ಒಟ್ಟು ಏಳು ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇದರಲ್ಲಿ ಯಶವಂತ್ ಒಬ್ಬರೇ ಬಚಾವ್ ಆಗಿದ್ದು, ಆರು ಮಂದಿಯ ಮೃತದೇಹ ಸಿಕ್ಕಿದೆ.

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!