Monday , October 22 2018
ಕೇಳ್ರಪ್ಪೋ ಕೇಳಿ
Home / News NOW / ಪದ್ಮನಾಭಸ್ವಾಮಿ ದೇಗುಲ ಪ್ರವೇಶಿಸಲು ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರಿಗೆ ಅನುಮತಿ

ಪದ್ಮನಾಭಸ್ವಾಮಿ ದೇಗುಲ ಪ್ರವೇಶಿಸಲು ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರಿಗೆ ಅನುಮತಿ

ತಿರುವನಂತಪುರಂ  : ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭ ದೇಗುಲಕ್ಕೆ ಪ್ರವೇಶಿಸಲು ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರಿಗೆ ಅನುಮತಿ ಸಿಕ್ಕಿದೆ. ದೇಗುಲ ಪ್ರವೇಶಕ್ಕೆ ಅನುಮತಿ ಕೋರಿ ಯೇಸುದಾಸ್ ಅವರು ಮೊನ್ನೆ ದೇವಾಲಯದ ಟ್ರಸ್ಟ್​ಗೆ ಮನವಿ ಮಾಡಿಕೊಂಡಿದ್ದರು. ಹಿಂದೂಗಳು ಮತ್ತು ಹಿಂದುತ್ವದ ಮೇಲೆ ನಂಬಿಕೆ ಇಟ್ಟವರಿಗೆ ಮಾತ್ರ ದೇಗುಲ ಪ್ರವೇಶ ಎಂಬ ಕಟ್ಟುನಿಟ್ಟಿನ ನಿಯಮದ ಹಿನ್ನೆಲೆ ಇರುವುದರಿಂದ ಯೇಸುದಾಸ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿದ ದೇವಾಲಯದ ಟ್ರಸ್ಟ್​​ ಯೇಸುದಾಸ್ ಅವರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿದೆ. ಹುಟ್ಟಿನಲ್ಲಿ ಕ್ರೈಸ್ತರಾದರೂ ಯೇಸುದಾಸ್ ಅವರು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟಿರುವವರಾಗಿರುವ ಹಿನ್ನೆಲೆಯಲ್ಲಿ ಟ್ರಸ್ಟ್​ ಇವರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿದೆ. ಬಹುತೇಕ ವಿಜಯದಶಮಿ ದಿನ ಯೇಸುದಾಸ್ ಅವರು ದೇಗುಲಕ್ಕೆ ಆಗಮಿಸಿ ಪದ್ಮನಾಭ ಶತಕಂ ಅನ್ನು ಭಜಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ಈ ಬಗ್ಗೆ ಮಾತನಾಡಿರುವ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಹರಿಪಾಲ್​, ಯೇಸುದಾಸ್ ಅವರಿಗೆ ದೇಗುಲ ಪ್ರವೇಶಕ್ಕೆ ಈ ಹಿಂದೆಯೂ ಯಾವುದೇ ಅಡೆತಡೆಗಳಿರಲಿಲ್ಲ. ಆದರೆ, ಯೇಸುದಾಸ್ ಅವರೇ ಮನವಿ ಮಾಡಿಕೊಂಡಿದ್ದರಿಂದ ನಾವು ನಿಯಮದಂತೆ ಈ ಮನವಿಯ ಬಗ್ಗೆ ಚರ್ಚೆ ನಡೆಸಿದ್ದೇವು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು ದೇವಸ್ಥಾನಕ್ಕೆ ಬರುವುದು ಮತ್ತು ದೇವರ ದರ್ಶನ ಪಡೆಯುವುದಕ್ಕೆ ಯಾವುದೇ ಅಡ್ಡಿಗಳಿಲ್ಲ ಎಂದು ಈ ಹಿಂದೆಯೇ ದೇವಾಲಯದ ಅಧಿಕಾರಿ ವಿ.ರತೀಶನ್​ ತಿಳಿಸಿದ್ದರು.

ಯೇಸುದಾಸ್ ಅವರು ಕೊಲ್ಲೂರು ಮೂಕಾಂಬಿಕೆ ಮತ್ತು ಶಬರಿಮಲೈ ದೇಗುಲಕ್ಕೆ ಪ್ರತಿವರ್ಷ ಭೇಟಿ ನೀಡುತ್ತಾರೆ. ಇಲ್ಲಿನ ಪರಮಭಕ್ತ ಇವರು.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!