Friday , April 20 2018
Home / Sandalwood / ಒಂದೇ ಫ್ರೇಮ್​ನಲ್ಲಿ ಟಾಲಿವುಡ್​, ಸ್ಯಾಂಡಲ್​ವುಡ್​ ಸ್ಟಾರ್​ಗಳು : ಸುಂದರ ಸ್ನೇಹಕ್ಕೆ ಸಾಕ್ಷಿ ಈ ಫೋಟೋ

ಒಂದೇ ಫ್ರೇಮ್​ನಲ್ಲಿ ಟಾಲಿವುಡ್​, ಸ್ಯಾಂಡಲ್​ವುಡ್​ ಸ್ಟಾರ್​ಗಳು : ಸುಂದರ ಸ್ನೇಹಕ್ಕೆ ಸಾಕ್ಷಿ ಈ ಫೋಟೋ

ಬೆಂಗಳೂರು : ಹಿರಿಯ ನಟಿ ಸುಮಲತಾ ಅಂಬರೀಷ್​ ಹಳೇ ಫೋಟೋವೊಂದನ್ನು ಟ್ವಿಟರ್​ನಲ್ಲಿ ಹಾಕಿಕೊಂಡಿದ್ದಾರೆ. ಸುಂದರ ನೆನಪುಗಳುಳ್ಳ ಅಪರೂಪದ ಫೋಟೋಗಳು ಇವು. ಸುಮಲತಾ ಅವರ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಸ್ಟಾರ್​ಗಳೆಲ್ಲಾ ಒಟ್ಟಾಗಿದ್ದ ಫೋಟೋ ಇದು. ಅಪೂರ್ವ ಮತ್ತು ಅಷ್ಟೇ ಅಮೂಲ್ಯ ಫೋಟೋ ಇದು…


ಮೂಲತಃ ಆಂಧ್ರ ಪ್ರದೇಶದವರಾದ ಸುಮಲತಾ ರೆಬಲ್​ ಸ್ಟಾರ್​ ಅಂಬರೀಷ್​ ಅವರನ್ನು ವರಿಸಿ ಕನ್ನಡತಿಯಾಗಿದ್ದರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದ ಸುಮಲತಾ ಈಗಲೂ ಸ್ಯಾಂಡಲ್​​ವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಟಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದ ಸುಮಲತಾ ಚಿರಂಜೀವಿ ಅವರೊಂದಿಗೆ ಹಲವು ಸೂಪರ್​ಹಿಟ್​ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ನಿನ್ನೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಈ ಹಳೇ ಫೋಟೋವನ್ನು ಸುಮಲತಾ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ, ಬಾಲಕೃಷ್ಣ, ವಿಷ್ಣುವರ್ಧನ್​, ಅಂಬರೀಷ್​, ಭಾರತೀ ವಿಷ್ಣುವರ್ಧನ್, ಜಯಸುಧಾ ಸೇರಿದಂತೆ ಹಲವರು ಇದ್ದಾರೆ. ಈ ಫೋಟೋದಲ್ಲಿರುವ ದಿವಂಗತ ವಿಷ್ಣುವರ್ಧನ್ ಅವರನ್ನು ಬಿಟ್ಟು ಬಾಕಿ ಎಲ್ಲರೂ ಈಗಲೂ ಸಿನಿಲೋಕದಲ್ಲಿ ಸಕ್ರಿಯರಾಗಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!