Friday , April 20 2018
Home / News NOW / ಬೆಳಗಾವಿ ಕೇಂದ್ರೀಯ ವಿದ್ಯಾಲಯದ ಮಕ್ಕಳ ಕೈಯಲ್ಲಿತ್ತು ಬ್ಲೂವೇಲ್ ಮಾದರಿಯ ಬರೆ…! ನಿಜ ಕತೆ ಏನು ಗೊತ್ತಾ?

ಬೆಳಗಾವಿ ಕೇಂದ್ರೀಯ ವಿದ್ಯಾಲಯದ ಮಕ್ಕಳ ಕೈಯಲ್ಲಿತ್ತು ಬ್ಲೂವೇಲ್ ಮಾದರಿಯ ಬರೆ…! ನಿಜ ಕತೆ ಏನು ಗೊತ್ತಾ?

ಬೆಳಗಾವಿ : ವಿಶ್ವದಾದ್ಯಂತ ಭೀತಿ ಮೂಡಿಸಿರುವ ಬ್ಲೂವೇಲ್ ಗೇಮ್​ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಆತಂಕ ಸೃಷ್ಟಿಸಿತ್ತು. ಈ ಆತಂಕ ಸೃಷ್ಟಿಗೆ ಕಾರಣ ಬೆಳಗಾವಿ ಕೇಂದ್ರೀಯ ವಿದ್ಯಾಲಯದ ಸುಮಾರು 20 ವಿದ್ಯಾರ್ಥಿಗಳ ಕೈಯಲ್ಲಿ ಇದ್ದ ಬ್ಲೂ ವೇಲ್ ಚಾಲೆಂಜ್ ಮಾದರಿಯ ಗೆರೆಗಳು…!

16 ವಿದ್ಯಾರ್ಥಿಗಳು ಮತ್ತು 4 ವಿದ್ಯಾರ್ಥಿನಿಯರ ಕೈಯಲ್ಲಿ ಬ್ಲೂವೇಲ್​ ಮಾದರಿಯ ಗೆರೆಗಳನ್ನು ಕಂಡ ಶಿಕ್ಷಕರು ಅವರನ್ನು ಪ್ರಶ್ನಿಸಿದ್ದರು. ಆಗ ಸೈಕಲ್​​ನಿಂದ ಬಿದ್ದಿದ್ದಾಗಿ ವಿದ್ಯಾರ್ಥಿಗಳು ಉತ್ತರ ಕೊಟ್ಟಿದ್ದರು. ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂಬುದು ಶಿಕ್ಷಕರಿಗೂ ಖಚಿತವಾಗಿತ್ತು. ಹೀಗಾಗಿ, ಡೆಡ್ಲಿ ಬ್ಲೂವೇಲ್​​ನ ಅನುಮಾನ ದಟ್ಟವಾಗಿತ್ತು. ಹೀಗಾಗಿ, ಶಿಕ್ಷಕರು ಈ ವಿದ್ಯಾರ್ಥಿಗಳನ್ನು ಮತ್ತಷ್ಟು ವಿಚಾರಣೆ ನಡೆಸಿದರು. ಆಗ ಸತ್ಯ ಹೊರಬಿದ್ದಿತ್ತು…

ಅಸಲಿಗೆ ಈ ಮಕ್ಕಳು ಬ್ಲೂವೇಲ್​​ ಗೇಮ್ ಆಡುತ್ತಿರಲಿಲ್ಲ. ಆದರೆ, ಸಹಪಾಠಿಗಳನ್ನು ಮತ್ತು ಸ್ನೇಹಿತರನ್ನು ಬೆದರಿಸುವ ನಿಟ್ಟಿನಲ್ಲಿ ತಮ್ಮ ಕೈಯಲ್ಲಿ ತಾವೇ ಬರೆ ಎಳೆದುಕೊಂಡಿದ್ದರಂತೆ. ಶಿಕ್ಷಕರ ಮುಂದೆ ವಿದ್ಯಾರ್ಥಿಗಳು ತಪ್ಪೊಪ್ಪಿಕೊಂಡಿದ್ದಾಗಿ ಪ್ರಖ್ಯಾತ ಆಂಗ್ಲ ದೈನಿಕ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

50 ದಿನಗಳ ಡೆಡ್ಲಿ ಚಾಲೆಂಜ್ ಈ ಆಟ. ಮಕ್ಕಳೇ ಹೆಚ್ಚು ಈ ಆಟದ ದಾಸರಾಗುತ್ತಿದ್ದಾರೆ. ಈ ಆಟದ ಕೊನೆಯ ಚಾಲೆಂಜ್​ ಆತ್ಮಹತ್ಯೆ ಮಾಡಿಕೊಳ್ಳುವುದಾಗಿದೆ…!

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!