Wednesday , January 23 2019
ಕೇಳ್ರಪ್ಪೋ ಕೇಳಿ
Home / News NOW / ಸಾರ್ವಜನಿಕವಾಗಿ ವ್ಯಕ್ತಿಗೆ ಗಲ್ಲು…! : ಕಂದನ ಅತ್ಯಾಚಾರ, ಕೊಲೆಗೆ ಈ ಶಿಕ್ಷೆ…!

ಸಾರ್ವಜನಿಕವಾಗಿ ವ್ಯಕ್ತಿಗೆ ಗಲ್ಲು…! : ಕಂದನ ಅತ್ಯಾಚಾರ, ಕೊಲೆಗೆ ಈ ಶಿಕ್ಷೆ…!

ತೆಹ್ರಾನ್​ : ಇರಾನ್​​ನಲ್ಲಿ ವ್ಯಕ್ತಿಯೊಬ್ಬನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ಏಳು ವರ್ಷದ ಕಂದನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಈತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು 42 ವರ್ಷದ ಇಸ್ಮಾಯಿಲ್​​​ ಜಾಫರ್ಜದಹ್ ಎಂದು ಗುರುತಿಸಲಾಗಿದೆ. ಇಲ್ಲಿನ ಆರ್ಡೆಬಿಲ್ ಪ್ರಾಂತ್ಯ.ಪಾರ್ಸಾಬಾದ್ನಲ್ಲಿ ಈ ಘಟನೆ ನಡೆದಿದೆ. ಇನ್ನೆಂದೂ ಇಂತಹ ಘಟನೆ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಈ ರೀತಿಯ ಶಿಕ್ಷೆ ವಿಧಿಸಲಾಗಿದೆ ಎಂದು ಆರ್ಡೆಬಿಲ್​​ ಪ್ರಾಸಿಕ್ಯೂಟರ್​​ ನಸೀರ್​ ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಏಳು ವರ್ಷದ ಬಾಲಕಿ ಇದೇ ವರ್ಷದ ಜೂನ್​ 19 ರಂದು ನಾಪತ್ತೆಯಾಗಿದ್ದಳು. ಬಳಿಕ ಈಕೆಯ ಶವ ಮನೆಯ ಪಕ್ಕದ ಕಸದ ತೊಟ್ಟಿಯಲ್ಲಿ ಸಿಕ್ಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇಸ್ಮಾಯಿಲ್​​​ ಜಾಫರ್ಜದಹ್ನನ್ನು ಬಂಧಿಸಿದ್ದರು. ಅಲ್ಲದೆ, ತನಿಖೆ ವೇಳೆ ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!