Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / Bollywood / ಕುಡಿತ ಬಿಟ್ಟ ಕಪಿಲ್.. ; ಬೆಂಗಳೂರಿನ ಆಯುರ್ವೇದಿಕ್ ಕೇಂದ್ರದಿಂದ ಒಂದು ತಿಂಗಳು ಮೊದಲೇ ತೆರಳಿದ ಶರ್ಮಾ…!

ಕುಡಿತ ಬಿಟ್ಟ ಕಪಿಲ್.. ; ಬೆಂಗಳೂರಿನ ಆಯುರ್ವೇದಿಕ್ ಕೇಂದ್ರದಿಂದ ಒಂದು ತಿಂಗಳು ಮೊದಲೇ ತೆರಳಿದ ಶರ್ಮಾ…!

ಬೆಂಗಳೂರು : ಕಾಮಿಡಿಯನ್, ಕಿರುತೆರೆ ನಿರೂಪಕ ಕಪಿಲ್ ಶರ್ಮಾ ಬೆಂಗಳೂರಿನ ಆಯುರ್ವೇದಿಕ್ ಕೇಂದ್ರಕ್ಕೆ ಕುಡಿತ ಬಿಡುವ ಸಲುವಾಗಿ ಸೇರಿದ್ದರು. ಆದರೆ, ಮೂಲಗಳ ಪ್ರಕಾರ ಕಪಿಲ್ ಒಂದು ತಿಂಗಳು ಮುಂಚಿತವಾಗಿಯೇ ಕಪಿಲ್ ಈ ಕೇಂದ್ರ ತೊರೆದಿದ್ದಾರಂತೆ. ಅಂದರೆ, ಇಲ್ಲಿಗೆ ಸೇರಿದ ಹನ್ನೆರಡೇ ದಿನದಲ್ಲಿ ಕಪಿಲ್ ಕುಡಿತದ ಚಟ ಬಿಟ್ಟಿದ್ದು ಕೇಂದ್ರದಿಂದ 28 ದಿನ ಮುಂಚಿತವಾಗಿಯೇ ಮರಳಿದ್ದಾರೆ ಎಂದು ಪ್ರಖ್ಯಾತ ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ನಿಗದಿಯಂತೆ ಕಪಿಲ್ ಈ ಆಯುರ್ವೇದಿಕ್ ಕೇಂದ್ರದಲ್ಲಿ 40 ದಿನಗಳು ಇರಬೇಕಿತ್ತು. ಇನ್ನೊಂದು ಮೂಲದ ಪ್ರಕಾರ, ತಮ್ಮ ವರ್ಕ್ ಕಮೀಟ್‍ಮೆಂಟ್‍ಗಳನ್ನು ಪೂರೈಸುವ ಸಲುವಾಗಿ ಇವರು 28 ದಿನ ಮುಂಚಿತವಾಗಿಯೇ ಈ ಕೇಂದ್ರ ತೊರೆದಿದ್ದಾರಂತೆ. ತಮ್ಮ ಫಿರಂಗಿ ಚಿತ್ರದ ಕೆಲಸ ಮತ್ತು ಪ್ರಚಾರ ಕಾರ್ಯದಲ್ಲಿ ಕಪಿಲ್ ತೊಡಗಿಕೊಳ್ಳಬೇಕಾಗಿರುವುದರಿಂದ ಬಹುಬೇಗ ಇಲ್ಲಿಂದ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!