Saturday , February 16 2019
ಕೇಳ್ರಪ್ಪೋ ಕೇಳಿ
Home / Mumbai Mail / ಎಚ್​ಐವಿ ಪೀಡಿತ ತಾಯಿಯ ರಕ್ತವನ್ನು ಗರ್ಭಿಣಿ ಪತ್ನಿಗೆ ಇಂಜೆಕ್ಟ್ ಮಾಡಿದ ಪಾಪಿ ಪತಿ…!

ಎಚ್​ಐವಿ ಪೀಡಿತ ತಾಯಿಯ ರಕ್ತವನ್ನು ಗರ್ಭಿಣಿ ಪತ್ನಿಗೆ ಇಂಜೆಕ್ಟ್ ಮಾಡಿದ ಪಾಪಿ ಪತಿ…!

ಮುಂಬೈ : ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯೊಬ್ಬ ಪತ್ನಿಗೆ ಸಿರೀಂಜ್​ನಲ್ಲಿ ಚುಚ್ಚಿದ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಅಚ್ಚರಿಯ ವಿಷಯವೊಂದು ಗೊತ್ತಾಗಿದೆ. ಪಾಪಿ ಪತಿಯು ಎಚ್​ಐವಿ ಪೀಡಿತ ತನ್ನ ತಾಯಿಯ ರಕ್ತವನ್ನು ಸಿರೀಂಜ್ ಮೂಲಕ ಪತ್ನಿಯ ದೇಹಕ್ಕೆ ಇಂಜೆಕ್ಟ್ ಮಾಡಿದ್ದ ಎಂಬ ಅಂಶ ಬಯಲಾಗಿದೆ. ಅಲ್ಲದೆ, ಈತನಿಗೆ ಸಹಾಯ ಮಾಡಿದ ಆರೋಪದಲ್ಲಿ ಈತನ ಸಹೋದರಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ, ಈ ಘಟನೆ ಬಳಿಕ ಈಕೆಗೆ ಗರ್ಭಪಾತವಾಗಿದೆ ಎಂದು ಗೊತ್ತಾಗಿದೆ.

ಈ ಘಟನೆ ಬಳಿಕ ಬಾಂದ್ರಾ ಕುರ್ಲ ಕಾಂಪ್ಲೆಕ್ಟ್ ಪೊಲೀಸರು ಆರೋಪಿ ಅಭಿಮನ್ಯು ಕಾಂಬ್ಳೆಯನ್ನು ಬಂಧಿಸಿದ್ದರು. ಸೆಪ್ಟೆಂಬರ್​ 6 ರಂದು ಈ ಘಟನೆ ನಡೆದಿತ್ತು. ಪತ್ನಿಯೊಂದಿಗೆ ಜಗಳ ಮಾಡಿದ್ದ ಈತ ಈ ಕೃತ್ಯವೆಸಗಿದ್ದ.

ಏನಿದು ಘಟನೆ…? : 2013ರಲ್ಲಿ ಅಭಿಮನ್ಯು ಮತ್ತು ಈ ಮಹಿಳೆಯ ಮದುವೆ ನಡೆದಿತ್ತು. ಇದಾದ ಬಳಿಕ ಕಾಂಬ್ಳೆ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. 2016ರಲ್ಲಿ ಈ ಮಹಿಳೆ ಈತನ ವಿರುದ್ಧ ತಿಲಕ್​ ನಗರ ಪೊಲೀಸ್ ಠಾಣೆಯಲ್ಲಿ ದೈಹಿಕ ಹಿಂಸೆಯ ದೂರು ನೀಡಿದ್ದರು. ಈ ಪ್ರಕರಣ ದಾಖಲಿಸಿದ ಮೇಲೂ ಪರಿಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ ಈ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ವಿಚ್ಚೇದನ ಅರ್ಜಿಯ ವಿಚಾರಣೆಗೆ ಒಂದು ದಿನ ದಂಪತಿ ನ್ಯಾಯಾಲಯಕ್ಕೆ ಬಂದಿದ್ದರು. ಈ ಸಂದರ್ಭದಲ್ಲೂ ಇವರಿಬ್ಬರು ಜಗಳ ಮಾಡಿಕೊಂಡಿದ್ದರು. ಈ ನಡುವೆ, ಶೌಚಾಲಯಕ್ಕೆ ಹೋಗುತ್ತೇನೆಂದು ಈ ಮಹಿಳೆ ಅಲ್ಲಿಂದ ತೆರಳಿದರು. ಆಗ ಹಿಂದಿನಿಂದ ಬಂದಿದ್ದ ಅಭಿಮನ್ಯು ಮಹಿಳೆಗೆ ಎಳೆದು ಸಿರೀಂಜ್ ಮೂಲಕ ಚುಚ್ಚಿದ್ದ. ಇದಾದ ಬಳಿಕ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವಿಚಾರಣೆ ವೇಳೆ, ಸಿರೀಂಜ್​ನಲ್ಲಿದ್ದ ರಕ್ತ ಯಾರದ್ದು ಎಂದು ಪೊಲೀಸರು ಈತನ ಬಳಿ ಕೇಳಿದ್ದರು. ಆಗ ಆತ ಸತ್ಯ ಬಾಯ್ಬಿಟ್ಟಿದ್ದ. ಎಚ್​ಐವಿ ಪೀಡಿತ ತಾಯಿಯ ರಕ್ತ ಇದು ಎಂದು ಈತ ಹೇಳಿದ್ದ. ತಾಯಿಯ ದೇಹದಿಂದ ರಕ್ತ ತೆಗೆಯಲು ಈತನ ತಂಗಿ ಸಹಾಯ ಮಾಡಿದ್ದಳು. ನವಿ ಮುಂಬೈ ಆಸ್ಪತ್ರೆಯಲ್ಲಿ ಈಕೆ ಈ ಹಿಂದೆ ನರ್ಸ್​ ಆಗಿ ಕೆಲಸ ಮಾಡಿದ್ದಳು. ಹೀಗಾಗಿ, ಅಣ್ಣನಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಈಕೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಆರೋಪಿ ಅಭಿಮನ್ಯವನ್ನು ಬಂಧಿಸಿದ್ದು, ಸದ್ಯ ಆತ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ, ಇನ್ನು, ಸಿರೀಂಜ್​ನಲ್ಲಿದ್ದ ರಕ್ತವನ್ನು ಪರೀಕ್ಷೆಗೆ ಕಳಿಸಲಾಗಿದ್ದು, ತನಿಖೆ ನಡೆಯುತ್ತಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!