Wednesday , January 24 2018
Home / Film News / Kollywood / ಅಮೇರಿಕಾದ ಪ್ರತಿಷ್ಠಿತ ಸಿನಿಮೋತ್ವದಲ್ಲಿ ರಜನಿ ಬಾಷಾ ಪ್ರದರ್ಶನ
Buy Bitcoin at CEX.IO

ಅಮೇರಿಕಾದ ಪ್ರತಿಷ್ಠಿತ ಸಿನಿಮೋತ್ವದಲ್ಲಿ ರಜನಿ ಬಾಷಾ ಪ್ರದರ್ಶನ

ಚೆನ್ನೈ : ಸೂಪರ್​ಸ್ಟಾರ್ ರಜನಿಕಾಂತ್ ಅಭಿನಯದ ಬಾಷಾ ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಭಾರತೀಯ ಸಿನೆಮಾದಲ್ಲಿ ಇದೊಂದು ಟ್ರೆಂಡ್ ಸೆಟ್ಟರ್​ ಫಿಲಂ. ಸುರೇಶ್​ ಕೃಷ್ಣ ಈ ಚಿತ್ರದ ಡೈರೆಕ್ಟರ್​. ಈ ಚಿತ್ರ ತೆರೆ ಕಂಡು ಎರಡು ದಶಕಗಳೇ ಕಳೆದರೂ ಇದರ ಹವಾ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಇದಕ್ಕೆ ಅಮೇರಿಕಾದಲ್ಲಿ ನಡೆಯುವು ಚಿತ್ರೋತ್ಸವವೇ ಸಾಕ್ಷಿ…

ಅಮೇರಿಕಾದ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಒಂದಾದ ಫೆನ್ಟಾಸ್ಟಿಕ್​​ ಫಿಲಂ ಫೆಸ್ಟ್​ನಲ್ಲಿ ಬಾಷಾ ಕೂಡಾ ಪ್ರದರ್ಶನಗೊಳ್ಳುತ್ತಿದೆ. ಇನ್ನಷ್ಟು ಡಿಜಿಟಲೀಕರಣಗೊಂಡಿರುವ ಈ ಸಿನೆಮಾ ವಿಶ್ವದಾದ್ಯಂತ ಇರುವ ರಜನಿ ಅಭಿಮಾನಿಗಳಲ್ಲಿ ಎಲ್ಲರಲ್ಲೂ ಕಾತರ ಮೂಡಿಸಿದೆ. ಸೆಪ್ಟೆಂಬರ್ 24 ಮತ್ತು 26 ರಂದು ಈ ಕ್ಲಾಸಿಕ್ ಆಕ್ಷನ್ ಚಿತ್ರ ಇಲ್ಲಿ ಪ್ರದರ್ಶನಗೊಳ್ಳಲಿದೆ.

ಮುಂಬೈಯಲ್ಲಿ ಇರುವ ತಮಿಳು ಹುಡುಗ ಸ್ನೇಹಿತನ ಸಾವಿನ ಪ್ರತಿಕಾರಕ್ಕೆ ಹೇಗೆ ಡಾನ್ ಆಗುತ್ತಾರೆ. ಬಳಿಕ ಹೇಗೆ ಸಾಮಾನ್ಯ ಮನುಷ್ಯನಂತೆ ಬದುಕುತ್ತಾರೆ ಎಂಬುದನ್ನು ಕತೆ ಹೇಳುತ್ತದೆ. ರಜನಿ ಇಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿ ಸಿನಿ ಕೆರಿಯರ್​ನಲ್ಲಿ ಬಾಷಾ ಚಿತ್ರಕ್ಕೆ ಅದರದ್ದೇ ಆದ ಮಹತ್ವ ಇದೆ. ಹಲವು ಭಾಷೆಗಳಿಗೆ ಈ ಚಿತ್ರ ರಿಮೇಕ್ ಆಗಿದೆ. ಕನ್ನಡದಲ್ಲೂ ಕೋಟಿಗೊಬ್ಬ ಎಂಬ ಟೈಟಲ್​ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಈ ಸಿನೆಮಾ ಮಾಡಿದ್ದರು.

1995ರಲ ಜನವರಿ 12 ರಂದು ಈ ಚಿತ್ರ ರಿಲೀಸ್ ಆಗಿತ್ತು. ಮತ್ತು ಇನ್ನಷ್ಟು ಅತ್ಯಾಧುನಿಕ ತಾಂತ್ರಿಕ ಬದಲಾವಣೆಯೊಂದಿಗೆ ಇದೇ ವರ್ಷದ ಮಾರ್ಚ್​​ನಲ್ಲಿ ಬಾಷಾ ತೆರೆ ಕಂಡಿತ್ತು.

CEX.IO Bitcoin Exchange

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!