Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Kollywood / ಎನ್​ಟಿಆರ್​ ಚಿತ್ರ ಮಾಡುತ್ತಾರಂತೆ ರಾಮ್​ಗೋಪಾಲ್​ ವರ್ಮಾ : ವಿವಾದಿತ ಅಂಶಗಳನ್ನೇ ತೆರೆಗೆ ತರುತ್ತೇನೆ ಅಂತಿದ್ದಾರೆ ಆರ್​ಜಿವಿ

ಎನ್​ಟಿಆರ್​ ಚಿತ್ರ ಮಾಡುತ್ತಾರಂತೆ ರಾಮ್​ಗೋಪಾಲ್​ ವರ್ಮಾ : ವಿವಾದಿತ ಅಂಶಗಳನ್ನೇ ತೆರೆಗೆ ತರುತ್ತೇನೆ ಅಂತಿದ್ದಾರೆ ಆರ್​ಜಿವಿ

ಹೈದರಾಬಾದ್​ : ಕಾಂಟ್ರವರ್ಸಿಯಲ್​ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಮತ್ತೊಂದು ವಿವಾದಿತ ಸಬ್ಜೆಕ್ಟ್​ ಅನ್ನು ಹಿಡಿದುಕೊಂಡು ಚಿತ್ರ ಮಾಡಲು ಹೊರಟಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಾಲಿವುಡ್​ನ ಮೇರುನಟ ಎನ್​ಟಿಆರ್​​ ಜೀವನದ ವಿವಾದಿತ ಅಂಶಗಳನ್ನು ತೆರೆಗೆ ತರುವುದಾಗಿ ಆರ್​ವಿಜಿ ಅಬ್ಬರಿಸುತ್ತಿದ್ದಾರೆ. ಇದು ಈಗ ಟಾಲಿವುಡ್​ನಲ್ಲಿ ಸಖತ್​ ಸೌಂಡ್ ಮಾಡಲು ಆರಂಭಿಸಿದೆ…

ರಾಮ್​ ಗೋಪಾಲ್​ ವರ್ಮಾ. ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ. ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ ನಿರ್ದೇಶಕ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಬ್ರೇಕ್​ಗೆ ಹೆಣಗಾಡುತ್ತಿದ್ದಾರೆ. ಮಾಡಿದ ಕೆಲ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮೇಲೇಳುವುದಕ್ಕೇ ಕೇಳುತ್ತಿಲ್ಲ… ಆದರೆ, ವರ್ಮಾ ಯಾವತ್ತೂ ಸುದ್ದಿಯಲ್ಲಿ ಹಿಂದೆ ಬಿದ್ದಿಲ್ಲ. ಕೇರಫ್ ಕಾಂಟ್ರವರ್ಸಿ ಎಂಬುದು ರಾಮ್​ ಗೋಪಾಲ್ ವರ್ಮಾಗೆ ಇರುವ ಇನ್ನೊಂದು ಹೆಸರು. ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತವಾ? ಅಥವಾ ಇವರೇ ವಿವಾದಗಳನ್ನು ಹುಡುಕಿಕೊಂಡು ಹೋಗುತ್ತಾರಾ ಅದು ಗೊತ್ತಿಲ್ಲ. ಆದರೆ ಆರ್​​​ವಿಜಿ ಎಂದರೆ ವಿವಾದ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ಬೆಳೆದದ್ದಂತೂ ಸತ್ಯ…

ತನ್ನ ಯದ್ವತದ್ವಾ ಮಾತು, ಟ್ವೀಟ್​​​ ಮೂಲಕವೇ ಬೇಡ ಬೇಡ ಎಂದರೂ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವವರು ವರ್ಮಾ. ಸುಮ್ಮನೆ ಕುಳಿತುಕೊಳ್ಳಲು ಕಿರಿಕಿರಿ ಅನುಭವಿಸುವ ಈ ವ್ಯಕ್ತಿ ಏನಾದರೊಂದು ಕಿರಿಕ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸರಿಯಾಗಿ ಇವರು ಮಾಡಿದ ಯಾವೊಂದು ಚಿತ್ರವೂ ಬಾಕ್ಸ್​ ಆಫೀಸ್​ನಲ್ಲಿ ಎದ್ದು ನಿಲ್ಲಲ್ಲು ಕೇಳುತ್ತಿಲ್ಲ. ಹೀಗಾಗಿ, ದೊಡ್ಡ ಬ್ರೇಕ್​ಗಾಗಿ ಹಪಹಪಿಸುತ್ತಿರುವ ರಾಮ್​ಗೋಪಾಲ್​ ವರ್ಮಾ ಗೆಲುವಿಗಾಗಿ ಏನೇನೋ ಕಸರತ್ತುಗಳನ್ನು ಮಾಡುತ್ತಿದ್ದಾರೆ ಎಂಬುದು ಸತ್ಯ…


ರಾಮ್​ ಗೋಪಾಲ್​ ವರ್ಮಾರ ಸಿನೆಮಾಗಳೇ ಹಾಗೆ, ಬಿಡುಗಡೆ ಆದ ಮೇಲೆ ಸೌಂಡ್ ಮಾಡುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಬಿಡುಗಡೆಗೆ ಮುಂಚೆ ಮಾತ್ರ ಸಖತ್​​ ಸದ್ದು ಮಾಡುತ್ತವೆ. ಚಿತ್ರದ ಕತೆ ಸಿದ್ಧ ಮಾಡುವಾಗಲೇ ಇದು ದೊಡ್ಡ ಸುದ್ದಿಯಾಗುತ್ತದೆ. ಈಗ ಇದೇ ವಾತಾವರಣ ಮತ್ತೆ ನಿರ್ಮಾಣವಾಗಿದೆ. ರಾಮ್​ ಗೋಪಾಲ್​ ವರ್ಮಾ ಮತ್ತೊಂದು ಸಬ್ಜೆಕ್ಟ್​ ಅನ್ನು ಚಿತ್ರ ಮಾಡುತ್ತೇನೆ ಎಂದು ಕುಳಿತಿದ್ದಾರೆ. ಆದರೆ, ಇದು ಈಗ ವಿವಾದವಾಗುತ್ತಿದೆ… ರಾಮ್​ ಗೋಪಾಲ್ ವರ್ಮಾ ಈ ಬಾರಿ ಸಿನೆಮಾ ಮಾಡಲು ಹೊರಟಿರುವುದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ಸಿನೆಮಾ ಲೋಕದ ಮೇರು ನಟ ಎನ್​ ಟಿ ರಾಮರಾವ್​ ಬಗ್ಗೆ… ಎನ್​​​ಟಿಆರ್​ ಜೀವನದ ವಿವಾದಿತ ಅಂಶಗಳನ್ನು ನಾನು ತೆರೆಗೆ ತರುತ್ತೇನೆ ಎಂದು ವರ್ಮಾ ಈಗ ರಚ್ಚೆ ಹಿಡಿದು ಕುಳಿತಿದ್ದಾರೆ… ಅಲ್ಲದೆ, ಈ ಚಿತ್ರಕ್ಕೆ ಲಕ್ಷ್ಮೀಸ್​ ಎನ್​ಟಿಆರ್ ಎಂದೂ ಹೆಸರಿಡುವ ಪ್ಲ್ಯಾನ್​ ವರ್ಮಾಗಿದೆ. ಟ್ವಿಟರ್​ನಲ್ಲಿ ಎನ್​ಟಿಆರ್​ ಮತ್ತು ಲಕ್ಷ್ಮಿ ದಂಪತಿ ಜೊತೆಗಿರುವ ಫೋಟೋ ಹಾಕಿರುವ ವರ್ಮಾ, ತಾನು ಸುಳ್ಳಿನ ನೆರಳಿನಲ್ಲಿ ಮರೆಯಾಗಿರುವ ಸತ್ಯಗಳನ್ನು ಸಿನೆಮಾ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ…


ಆರ್​ವಿಜಿ ಎನ್​ಟಿಆರ್ ಅವರ ಜೀವನ ಕತೆ ಚಿತ್ರ ಮಾಡುತ್ತೇನೆ ಎಂದು ಹೇಳಿದ್ದಾಗ ಎಲ್ಲರಿಗೂ ಒಮ್ಮೆ ಅಚ್ಚರಿ ಆಗಿತ್ತು. ಆದರೆ, ಈಗ ಇದೇ ರಾಮ್​ ಗೋಪಾಲ್​ ತಾವು ತನ್ನದೇ ರೀತಿಯಲ್ಲಿ ಈ ಕತೆ ಹೇಳುತ್ತೇನೆ ಎಂದು ಹೊರಟ್ಟಿದ್ದಾರೆ. ರಾಮ್​ ಗೋಪಾಲ್​ ಈಗ ಎನ್​ಟಿಆರ್ ಪತ್ನಿ ಲಕ್ಷ್ಮೀ ಅವರ ನೆಲೆಯಲ್ಲಿ ಚಿತ್ರವನ್ನು ಕೊಂಡು ಹೋಗುತ್ತಾರಂತೆ… ಅಲ್ಲದೆ, ಈ ಚಿತ್ರದ ಮೂಲಕ ಅಡಗಿ ಹೋಗಿರುವ ನಗ್ನ ಸತ್ಯಗಳನ್ನು ಹೊರಗೆಳೆಯುತ್ತೇನೆ ಎಂದು ಅಬ್ಬರಿಸುತ್ತಿದ್ದಾರೆ ವರ್ಮಾ…


ಈ ಚಿತ್ರದ ಬಗ್ಗೆ ಆರ್​ವಿಜಿ ಹಲವು ಅಧ್ಯಯನ ಮಾಡಿದ್ದಾರೆ. ಒಂದಷ್ಟು ಜನರನ್ನು ಭೇಟಿಯಾಗಿದ್ದಾರೆ. ಹೀಗಾಗಿಯೇ, ಈ ಕತೆಯನ್ನು ಲಕ್ಷ್ಮೀ ಅವರ ಮುಖೇನ ಹೇಳುವುದಕ್ಕೆ ಹೊರಟಿದ್ದಾರೆ ವರ್ಮಾ. ಈ ಬಗ್ಗೆ ಇನ್ನಷ್ಟು ಸುಳಿವು ನೀಡಿರುವ ವರ್ಮಾ ಎನ್​ಟಿಆರ್​ ಅವರಿ ಬೆನ್ನಿಗೆ ಇರಿದವರು ಯಾರು? ಜೊತೆಗಿದ್ದೇ ರಾಮರಾವ್​​ ಹೊಟ್ಟೆಗೆ ಗುದ್ದಿದವರು ಯಾರು? ಕೊನೆಯ ದಿನಗಳಲ್ಲಿ ಅವರು ಎದುರಿಸಿದ ಸಂಕಷ್ಟಗಳೇನು ಎಂಬುದನ್ನು ತೆರೆಗೆ ತರುವುದಾಗಿ ಹೇಳಿಕೊಂಡಿದ್ದಾರೆ…


ರಾಮ್​ಗೋಪಾಲ್ ಈ ಪ್ರಯತ್ನ ಈಗ ಟಾಲಿವುಡ್​ನಲ್ಲಿ ಹೊಸ ಸಂಚಲನ ಮೂಡಿಸಿದೆ. ಕೆಲವರು ರಾಮ್​ ಗೋಪಾಲ್​ ವರ್ಮಾ ಈ ಚಿತ್ರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಇನ್ನು, ಎನ್​ಟಿಆರ್ ಪತ್ನಿ ಲಕ್ಷ್ಮೀ ಪಾರ್ವತಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು, ರಾಮ್​ಗೋಪಾಲ್​ ವರ್ಮಾ ಎನ್​ಟಿಆರ್​ ಚಿತ್ರ ಮಾಡುವುದಾದರೆ ಅದಕ್ಕೆ ನನ್ನ ಸ್ವಾಗತ. ಆದರೆ, ಈ ಚಿತ್ರದಲ್ಲಿ ನಿಜಾಂಶಗಳೇ ಇರಬೇಕು ಎಂದು ಹೇಳಿದ್ದಾರೆ…

ವರ್ಮಾ ಹಲವರ ಕತೆಗಳನ್ನು ತೆರೆಗೆ ತಂದವರು. ಈ ಹಿಂದೆ ಟಿಡಿಪಿ ನಾಯಕ ಪೆರಟಾಲ ರವಿ ಜೀವನ ಕತೆಯನ್ನು ರಕ್ತಚರಿತ್ರ ಎಂದು ತೆರೆಗೆ ಬಂದಿದ್ದರು ವರ್ಮಾ. ಹಲವು ನಾಯಕರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ, ಎನ್​ಟಿಆರ್ ಕತೆ ಹೇಳುತ್ತೇನೆ ಎಂದು ವರ್ಮಾ ಹೊರಟಿದ್ದಾರೆ. ಇದರ ಭವಿಷ್ಯ ಏನಾಗಲಿದೆಯೋ ಆ ಕಾಲವೇ ಉತ್ತರಿಲಿದೆ…

 

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!