ಹೈದರಾಬಾದ್ : ಬಾಹುಬಲಿ 2 ರಿಲೀಸ್ ಆಗಿ ಐದು ತಿಂಗಳು ಕಳೆದರೂ ಅದರ ಹವಾ ಮಾತ್ರ ಕಡಿಮೆ ಆಗಿಲ್ಲ. ಈಗ ಈ ಚಿತ್ರದ ಕ್ಲೈಮ್ಯಾಕ್ಸ್ನ ಫೋಟೋ ಒಂದು ಲೀಕ್ ಆಗಿದೆ. ಸ್ವತಃ ಪ್ರಭಾಸ್ ಅವರೇ ಟ್ವಿಟರ್ನಲ್ಲಿ ಈ ಫೋಟೋ ಹಾಕಿಕೊಂಡಿದ್ದಾರೆ. ಈ ಫೋಟೋದಲ್ಲಿ ನಿರ್ದೇಶಕ ರಾಜಮೌಳಿ, ಪ್ರಭಾಸ್ ಮತ್ತು ರಾಣಾರನ್ನು ಕಾಣಬಹುದು. ಇಲ್ಲಿ ನಾವು ಸೂಕ್ಷ್ಮವಾಗಿ ನೋಡಿದರೆ ನಿರ್ದೇಶಕ ರಾಜಮೌಳಿ ಅವರು ಪ್ರತೀ ಕ್ಯಾರೆಕ್ಟರ್ ಅನ್ನು ಎಷ್ಟು ಫೀಲ್ ಮಾಡಿ ಅಭಿನಯಿಸುತ್ತಿದ್ದರು ಎಂದು ಗೊತ್ತಾಗುತ್ತದೆ.
#Baahubali2 Climax shoot !!!#Prabhas @ssrajamouli @RanaDaggubati #BaahubaliMemories pic.twitter.com/b6YGBehf0A
— Prabhas (@PrabhasManeesh) September 19, 2017
ರಾಣಾ ನಿರ್ವಹಿಸಿದ್ದ ಬಲ್ಲಾಳದೇವ ಕ್ಯಾರೆಕ್ಟರ್ ಅನ್ನು ರಾಜಮೌಳಿ ಅಭಿನಯಿಸಿ ತೋರಿಸುತ್ತಿದ್ದರು. ಇದು ರಾಣಾಗೂ ಸಹಕಾರಿಯಾಗಿತ್ತು. ಬಹುಶಃ ರಾಣಾ ಬಾಹುಬಲಿ ಚಿತ್ರ ಸರಣಿಯಲ್ಲಿ ದೊಡ್ಡ ಹೆಸರು ಮಾಡುವುದಕ್ಕೆ ಇದು ಕೂಡಾ ಕಾರಣವಾಗಿರಬಹುದು…