Monday , October 22 2018
ಕೇಳ್ರಪ್ಪೋ ಕೇಳಿ
Home / News NOW / SUDINA EXCLUSIVE : ಕೋತಿಯನ್ನು ನುಂಗಿದ ಹೆಬ್ಬಾವು…! : ಇಲ್ಲಿದೆ ವೀಡಿಯೋ

SUDINA EXCLUSIVE : ಕೋತಿಯನ್ನು ನುಂಗಿದ ಹೆಬ್ಬಾವು…! : ಇಲ್ಲಿದೆ ವೀಡಿಯೋ

ಕಾರ್ಕಳ : ಭಾರೀ ಗಾತ್ರದ ಹೆಬ್ಬಾವೊಂದು ಕೋತಿಯನ್ನು ನುಂಗಿದೆ. ಭರ್ಜರಿ ಆಹಾರವನ್ನು ತಿಂದು ಮೈ ಭಾರವಾಗಿ ಹೆಬ್ಬಾವು ಚಲಿಸಲಾರದೇ ಒಂದೇ ಸ್ಥಳದಲ್ಲಿ ನರಳಾಡುತ್ತಿತ್ತು. ಈ ದೃಶ್ಯ  ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮಾಳ ಗ್ರಾಮದಲ್ಲಿ ಕಂಡು ಬಂದಿದೆ.

ನಿಟ್ಟೆ ಇಂಜಿನಿಯರಿಂಗ್​ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರಂಜನ್​ ಚಿಪಳೂಣಕರ್​ ಅವರ ಅಡಿಕೆ ತೋಟದಲ್ಲಿ ಇವತ್ತು ಬೆಳಗ್ಗೆ ಕಾರ್ಮಿಕರಿಗೆ ಅಚಾನಕ್ಕಾಗಿ ಹೆಬ್ಬಾವು ಕಂಡಿದೆ. ಅಷ್ಟರಲ್ಲೇ ಕೋತಿಗಳು ಕಿರುಚಾಡತೊಡಗಿವೆ. ಏನು ಅಂತ ನೋಡಿದಾಗ ಸುಮಾರು 14 ಅಡಿ ಉದ್ದದ ಹೆಬ್ಬಾವು ದೊಡ್ಡ ಕೋತಿಯೊಂದನ್ನು ಬಿಗಿದಪ್ಪಿಕೊಂಡಿತ್ತು. ಕಾರ್ಮಿಕರು ಕೋತಿಯನ್ನು ಬಿಡಿಸಲು ಮುಂದಾದರೂ ಸಾಧ್ಯವಾಗಲಿಲ್ಲ. ಆ ಮೇಲೆ ನಿಧಾನವಾಗಿ ಬಾಯ್ತೆರೆದ ಹೆಬ್ಬಾವು ಇಡೀ ಕೋತಿಯನ್ನು ನುಂಗಿಹಾಕಿತು. ಇದನ್ನು ಭಯಭೀತರಾಗಿಯೇ ನೋಡಿದ ಗ್ರಾಮದ ಜನ ಆಶ್ಚರ್ಯಚಕಿತರಾದರು.

ದೊಡ್ಡ ಗಾತ್ರದ ಪ್ರಾಣಿಗಳನ್ನು ನುಂಗಿದಾಗ ಹೆಬ್ಬಾವುಗಳು ಹೆಚ್ಚು ಹೊತ್ತು ಆ ಸ್ಥಳದಲ್ಲೇ ಇರುತ್ತವೆ. ಪಕ್ಕದಲ್ಲೇ ಪಶ್ಚಿಮಘಟ್ಟದ ದಟ್ಟ ಅರಣ್ಯವಿದೆ. ಅಲ್ಲಿಂದಲೇ ಹೆಬ್ಬಾವು ಅಡಿಕೆ ತೋಟಕ್ಕೆ ಬಂದಿರಬಹುದು. ಇಷ್ಟು ದೊಡ್ಡ ಹೆಬ್ಬಾವು ಗ್ರಾಮದಲ್ಲಿ ಕಾಣಸಿಕ್ಕಿರುವುದು ಇದೇ ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳಿದ್ದಾರೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!