Sunday , September 23 2018
ಕೇಳ್ರಪ್ಪೋ ಕೇಳಿ
Home / News NOW / ತಿರುಪತಿ ಲಡ್ಡುಗೆ ಕೊನೆಗೂ ಎಫ್​ಎಸ್​ಎಸ್​​ಎಐ ಕ್ಲಿಯರೆನ್ಸ್​, ಟಿಟಿಡಿಗೆ ಸಿಕ್ತು ಆಹಾರ ಭದ್ರತಾ ಪರವಾನಗಿ

ತಿರುಪತಿ ಲಡ್ಡುಗೆ ಕೊನೆಗೂ ಎಫ್​ಎಸ್​ಎಸ್​​ಎಐ ಕ್ಲಿಯರೆನ್ಸ್​, ಟಿಟಿಡಿಗೆ ಸಿಕ್ತು ಆಹಾರ ಭದ್ರತಾ ಪರವಾನಗಿ

ತಿರುಪತಿ : ವಿಶ್ವದ ಶ್ರೀಮಂತ ದೇವರಲ್ಲಿ ಒಬ್ಬನಾದ ತಿರುಪತಿ ತಿರುಮಲೇಶನ ಸನ್ನಿಧಿಯಲ್ಲಿ ಲಡ್ಡು ಪ್ರಸಾದಕ್ಕೆ ಬಲು ದೊಡ್ಡ ಮಹತ್ವ. ಲಡ್ಡು ತಿರುಪತಿಯ ಖ್ಯಾತಿಯೊಂದಿಗೆ ಬೆಸೆದುಕೊಂಡಿದೆ. ಈಗ ಈ ಲಡ್ಡುಗೆ ಆಹಾರ ಭದ್ರತಾ ಪರವಾನಿಗೆ ಸಿಕ್ಕಿದೆ. ಫುಡ್​ ಸೇಫ್ಟಿ ಆಂಡ್​ ಸ್ಟಾಂಡರ್ಡ್ಸ್​​​​ ಅಥಾರಿಟಿ ಆಫ್​ ಇಂಡಿಯಾ (ಎಫ್​ಎಸ್​ಎಸ್​ಎಐ) ಪ್ರಮಾಣ ಪತ್ರ ತಿರುಪತಿ ಲಡ್ಡು ಪ್ರಸಾದಕ್ಕೆ ಲಭಿಸಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಚೆನ್ನೈನ ಕೇಂದ್ರೀಯ ಪರವಾನಗಿ ಘಟಕವು ಈ ಲೈಸನ್ಸ್​ ನೀಡಿದೆ. ಈ ಪರವಾನಿಗಿ ಪ್ರಕಾರ ಟಿಟಿಡಿ ಪ್ರತಿನಿತ್ಯ 45 ಟಲ್​ ಲಡ್ಡು ತಯಾರಿಸಬಹುದಾಗಿದೆ. ಟಿಟಿಡಿ ಆಹಾರ ಸುರಕ್ಷತೆ, ಗುಣಮಟ್ಟ ನಿಯಮಗಳನ್ನು ಪಾಲಿಸದೆಯೇ ಲಡ್ಡು ತಯಾರಿಸುತ್ತಿದೆ ಎಂದು ಎಫ್​ಎಸ್​ಎಸ್​ಎಐಗೆ ಆರ್​ಟಿಐ ಕಾರ್ಯಕರ್ತ ಟಿ ನರಸಿಂಹಮೂರ್ತಿ 2016ರ ಡಿಸೆಂಬರ್​ನಲ್ಲಿ ದೂರು ನೀಡಿದ್ದರು. ಇವರು ಬೆಂಗಳೂರು ಮೂಲದವರಾಗಿದ್ದಾರೆ. ಆರಂಭದಲ್ಲಿ ಟಿಟಿಡಿ ಈ ಪರವಾನಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!