Thursday , December 14 2017
Home / Interval / ‘ವಿವೇಕ್ ಒಬೇರಾಯ್​​ಗೆ ಫಿಲ್ಮ್​ನಲ್ಲಿ ಛಾನ್ಸ್​ ತಪ್ಪಲು ಸಲ್ಮಾನ್​ ಕಾರಣ…!‘ : ಇದು ಐಶ್ವರ್ಯ ಲವ್​ಸ್ಟೋರಿ ಎಫೆಕ್ಟ್​…!

‘ವಿವೇಕ್ ಒಬೇರಾಯ್​​ಗೆ ಫಿಲ್ಮ್​ನಲ್ಲಿ ಛಾನ್ಸ್​ ತಪ್ಪಲು ಸಲ್ಮಾನ್​ ಕಾರಣ…!‘ : ಇದು ಐಶ್ವರ್ಯ ಲವ್​ಸ್ಟೋರಿ ಎಫೆಕ್ಟ್​…!

ಮುಂಬೈ : ಬಾಲಿವುಡ್​ನಲ್ಲಿ ವಿವೇಕ್ ಒಬೇರಾಯ್​ ಒಳ್ಳೆಯ ನಟ. ವಿವೇಕ್ ಪ್ರತಿಭಾವಂತ. ಹಲವು ಸೂಪರ್​ ಹಿಟ್​ ಚಿತ್ರಗಳನ್ನು ಕೊಟ್ಟವರು. ಆದರೂ ವಿವೇಕ್​ಗೆ ಅವಕಾಶಗಳು ಸಿಗುತ್ತಿಲ್ಲ. ಕಾರಣ, ಸಲ್ಮಾನ್ ಖಾನ್​ ಜೊತೆಗಿನ ಜಗಳ…! ಇದು ಐಶ್ವರ್ಯ ವಿವೇಕ್​ ಲವ್​ ಸ್ಟೋರಿ ಸೈಡ್​ ಎಫೆಕ್ಟ್​ ಕೂಡಾ ಹೌದು…!

ಮುಂಬೈ ಮಿರರ್​ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ವಿವೇಕ್ ಅವರೇ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಜೊತೆಗಿನ ಜಗಳದಿಂದ ವಿವೇಕ್​ ತನ್ನ ವೃತ್ತಿ ಜೀವನದಲ್ಲಿ ಬಹುದೊಡ್ಡ ಬೆಲೆ ತೆತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿವೇಕ್​. ‘ಇದು ನನ್ನ ವಿರುದ್ಧ ಜಾರಿಯಾಗಿದ್ದ ಫತ್ವಾದಂತಿತ್ತು’ ಎಂದು ಹೇಳಿಕೊಂಡಿದ್ದಾರೆ.

ಲವ್​ ಸ್ಟೋರಿ ಕಾರಣ…! : ಅದು ವಿವೇಕ್ ಮತ್ತು ಐಶ್ವರ್ಯ ರೈ (ಈಗ ಐಶ್ವರ್ಯ ಬಚ್ಚನ್​) ನಡುವಣ ಪ್ರೇಮಕತೆ ಜೋರಾಗಿದ್ದ ಸಮಯ. ಸಲ್ಮಾನ್ ಖಾನ್​ರಿಂದ ದೂರವಾಗಿದ್ದ ಐಶ್ವರ್ಯ ವಿವೇಕ್ ಪ್ರೀತಿಯ ತೆಕ್ಕೆಗೆ ಬಿದ್ದಿದ್ದರು. ಈ ಸಿಟ್ಟು ಸಲ್ಮಾನ್​ ಮೇಲೆ ಇತ್ತು. ಸಲ್ಲೂ ವಿವೇಕ್ ಮೇಲೆ ಕುದಿಯುತ್ತಿದ್ದರು. ಇದೇ ಸಿಟ್ಟಿನಲ್ಲಿ ಸಲ್ಮಾನ್ ವಿವೇಕ್​ಗೆ ಜೀವ ಬೆದರಿಕೆಯೂ ಒಡ್ಡಿದ್ದರು. ಈ ಜೀವ ಬೆದರಿಕೆಯ ವಿಷಯವನ್ನು ವಿವೇಕ್​​​ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ಇದು ದೊಡ್ಡ ಮಟ್ಟಕ್ಕೇ ಸುದ್ದಿಯಾಗಿತ್ತು.

ಆದರೆ, ಈ ಸುದ್ದಿಗೋಷ್ಠಿಯ ಬಳಿಕ ವಿವೇಕ್​ ಸಿನಿಜೀವನವೂ ಸಂಕಷ್ಟಕ್ಕೆ ಗುರಿಯಾಯ್ತು. ಹಲವು ಸೂಪರ್ ಹಿಟ್​ ಚಿತ್ರಗಳನ್ನು ಕೊಟ್ಟರೂ ವಿವೇಕ್​ಗೆ ಅವಕಾಶ ಸಿಗಲೇ ಇಲ್ಲ. ‘ನಾನು ಹಲವು ಹಿಟ್ ಸಿನೆಮಾಗಳನ್ನು ಕೊಟ್ಟಿದ್ದೆ. ಶೂಟೌಟ್​ ಆಟ್​​ ಲೋಖಂಡ್ವಾಲಾ ದೊಡ್ಡ  ಹಿಟ್ ಆಯ್ತು. ಆದರೂ ಇದಾದ ಒಂದು ವರ್ಷ ನಾನು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿದ್ದೆ‘ ಎನ್ನುತ್ತಾರೆ ವಿವೇಕ್​.

ರಾಮ್​ಗೋಪಾಲ್​ ವರ್ಮಾ ನಿರ್ದೇಶನದ ಕಂಪೆನಿ(2002)ಯಲ್ಲಿ ವಿವೇಕ್​ ಒಳ್ಳೆಯ ಹೆಸರು ಸಂಪಾದಿಸಿದ್ದರು. ಇದೇ ವರ್ಷ ತೆರೆಕಂಡ ರೋಡ್​, ಸಾತಿಯಾ ಚಿತ್ರದಲ್ಲೂ ಇವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಈ ಸಂದರ್ಭದಲ್ಲಿ ವೃತ್ತಿ ಮತ್ತು ವೈಯಕ್ತಿಕ ಬದುಕು ಸುಂದರವಾಗಿಯೇ ಇತ್ತು. ಈ ನಡುವೆ ವಿವೇಕ್ ಐಶ್ವರ್ಯ ಜೊತೆಗೆ ಪ್ರೀತಿಗೆ ಬಿದ್ದರು. 2004ರ ವರೆಗೆ ಈ ಜೋಡಿ ಪ್ರೇಮಲೋಕದಲ್ಲಿ ವಿಹರಿಸಿತ್ತು. (read also : ಒಂದೇ ಪಾರ್ಟಿಯಲ್ಲಿ ಐಶ್ವರ್ಯ ಮಾಜಿ ಪ್ರೇಮಿಗಳಾದ ಸಲ್ಮಾನ್​, ವಿವೇಕ್​ : ಮುಂದೇನಾಯ್ತು…?)ಆದರೆ, 2003ರಲ್ಲಿ ಸುದ್ದಿಗೋಷ್ಠಿಯಲ್ಲಿ ವಿವೇಕ್ ಸಲ್ಮಾನ್ ವಿರುದ್ಧ ಮಾಡಿದ್ದ ಆರೋಪದಿಂದ ಸಂಕಷ್ಟ ಶುರುವಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ವಿರುದ್ಧ ಆರೋಪ ಮಾಡಿದ ವಿವೇಕ್, ಖಾನ್ ನನಗೆ 41 ಸಲ ಕರೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿದ್ದರು.

ಇದಾದ ಬಳಿಕ ಕೆಲವೊಂದು ಚಿತ್ರಗಳಲ್ಲಿ ವಿವೇಕ್ ಕೆಲಸ ಮಾಡಿದ್ದರೂ ನಂತರ ಅವಕಾಶಗಳು ಕಡಿಮೆಯಾಗುತ್ತಾ ಬಂದಿತ್ತು.‘ಈ ಬಗ್ಗೆ ಪತ್ರಿಕೆಯೊಂದು ಬರೆದಿತ್ತು. ನನ್ನನ್ನು ಇಂಡಸ್ಟ್ರಿಯಲ್ಲಿ ಸಲ್ಮಾನ್ ಬ್ಲ್ಯಾಕ್ ಲಿಸ್ಟ್​ಗೆ ಹಾಕಿದ್ದರು. ಹೀಗಾಗಿ, ನನಗೆ ಅವಕಾಶ ನೀಡದಂತೆ ಅವರೇ ನಿರ್ಮಾಪಕರಿಗೆ ಹೇಳುತ್ತಿದ್ದರು ಎಂಬುದನ್ನು ಸುಲಭವಾಗಿ ಊಹಿಸಬಹುದು.ನನಗೆ ಮಾತ್ರ ಅಲ್ಲ. ರಣಬೀರ್ ಕಪೂರ್ ಮತ್ತು ಜಾನ್ ಅಬ್ರಹಾಂ ಮೇಲೂ ಸಲ್ಮಾನ್​ಗೆ ಕೋಪ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಇಬ್ಬರಿಗೆ ಕೆಲಸ ಸಿಗುತ್ತಿದೆ’ ಎಂದು ವಿವೇಕ್ ಹೇಳಿಕೊಂಡಿದ್ದಾರೆ.

About sudina

Check Also

ಪ್ರಿಯಾಂಕಾ ಚೋಪ್ರಾರಿಗೆ ಟ್ರಾಫಿಕ್ ಸಿಗ್ನಲ್‍ನಲ್ಲಿ `ಮುಜ್‍ಸೇ ಶಾದಿ ಕರೋಗಿ’ ಎಂದ ಪೋರರು…!

ಅದು 2004ರ ಸಮಯ. ನಿರ್ದೇಶಕ ಡೇವಿಡ್ ಧವನ್ ಒಂದು ಸಿನೆಮಾ ತೆಗೆದರು. ಆ ಸಿನೆಮಾದ ಟೈಟಲ್ `ಮುಜ್‍ಸೇ ಶಾದಿ ಕರೋಗಿ’. …

Leave a Reply

Your email address will not be published. Required fields are marked *

error: Content is protected !!