Sunday , February 17 2019
ಕೇಳ್ರಪ್ಪೋ ಕೇಳಿ
Home / Gulf News / ಮರುಭೂಮಿಯಲ್ಲಿ ಸಿಕ್ಕಿತ್ತು ಶವ…! : ಹತ್ಯೆಗೆಂದೇ ವಿಸಿಟಿಂಗ್ ವೀಸಾದಲ್ಲಿ ಬಂದಿದ್ದರು ಹಂತಕರು…! : ಕೊಲೆಯ ಹಿಂದಿದ್ದಳು ಹೆಣ್ಣು…!

ಮರುಭೂಮಿಯಲ್ಲಿ ಸಿಕ್ಕಿತ್ತು ಶವ…! : ಹತ್ಯೆಗೆಂದೇ ವಿಸಿಟಿಂಗ್ ವೀಸಾದಲ್ಲಿ ಬಂದಿದ್ದರು ಹಂತಕರು…! : ಕೊಲೆಯ ಹಿಂದಿದ್ದಳು ಹೆಣ್ಣು…!

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ

ದುಬೈ : ಮರುಭೂಮಿಯಲ್ಲಿ ಮೊನ್ನೆಯೊಂದು ಶವ ಸಿಕ್ಕಿತ್ತು. ಕೊಲೆ ಮಾಡಿ ಶವವನ್ನು ಮರಳಲ್ಲಿ ಹೂತಿದ್ದರು ದುಷ್ಕರ್ಮಿಗಳು. ಈ ಕೊಲೆ ಪ್ರಕರಣ ದುಬೈ ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಯಾವೊಂದು ಸುಳಿವೂ ಸಿಗದಂತೆ ಕೆಲಸ ಮುಗಿಸಿದ್ದರು ಹಂತಕರು… ಆದರೂ ಜಾಣ ಪೊಲೀಸರು ಬಿಡಬೇಕಾಲ್ವ..? ಕೊನೆಗೂ ಬಯಲಾಯ್ತು ಈ ಮರ್ಡರ್​ ಮಿಸ್ಟರಿ…

ಕೊಲೆಯಾದವರು ಯಾರು…? : ಚೀನಾದ ಪ್ರವಾಸಿಯೊಬ್ಬರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆದರೆ, ಸಾವು ಅಲ್ಲೇ ಇವರನ್ನು ಕಾಯುತ್ತಿತ್ತು. ಯಾಕೆಂದರೆ, 47 ವರ್ಷದ ಮಹಿಳೆ, ಆಕೆಯ ಮಗ ಮತ್ತಿಬ್ಬರು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಈ ಪ್ರವಾಸಿಗ ಬರುವುದನ್ನೇ ಕಾಯುತ್ತಾ ಕುಳಿತಿದ್ದರು. ಚೀನಾದ ಈ ಪ್ರವಾಸಿಗ ಏರ್​ ಪೋರ್ಟ್​ಗೆ ಹೊರಗೆ ಬರುತ್ತಿದ್ದಂತೆಯೇ ತಾವಿದ್ದ ಕಾರಿಗೆ ಈತನನ್ನು ಎಳೆದು ಹಾಕಿ ಈ ನಾಲ್ವರು ಅಲ್ಲಿಂದ ತಕ್ಷಣ ಕಾಲ್ಕಿತ್ತಿದ್ದರು.

ಎರಡು ದಿನ ಕಾರಿನಲ್ಲೇ ಇತ್ತು ಶವ…! : ಹೀಗೆ ಕಾರಿನಲ್ಲಿ ವ್ಯಕ್ತಿಯನ್ನು ಅಪಹರಿಸಿಕೊಂಡು ಹೋದ ದುಷ್ಕರ್ಮಿಗಳು ಈತನಿಗೆ ಚೆನ್ನಾಗಿ ಥಳಿಸಿದ್ದರು. ಈ ಥಳಿತಕ್ಕೆ ಆತ ಸಾವನ್ನಪ್ಪಿದ್ದ. ಇದಾದ ಬಳಿಕ ಈತನ ಹೆಣ ಎರಡು ದಿನ ಈ ಕಾರಿನಲ್ಲೇ ಇತ್ತು…! ಬಳಿಕ ಪಕ್ಕದ ಎಮರೈಟ್ಸ್​ನ ಮರುಭೂಮಿಯಲ್ಲಿ ಈ ಹೆಣವನ್ನು ಹೂತ ಈ ನಾಲ್ವರು ಅಲ್ಲಿಂದ ಎಸ್ಕೇಪ್ ಆಗಿದ್ದರು.

ಮಗು ಬಂದು ದೂರು ಕೊಟ್ಟಾಗಲೇ ಗೊತ್ತಾಗಿದ್ದು…! : ಈ ಹತ್ಯೆಯ ವಿಚಾರ ಪೊಲೀಸರಿಗೆ ತಿಳಿದದ್ದು ಮಗ ಬಂದು ದೂರು ಕೊಟ್ಟಾಗಲೇ…! ಆಗಸ್ಟ್​ನಲ್ಲಿ ಯುಎಇಗೆ ಬಂದ ಆ ವ್ಯಕ್ತಿಯ ಮಗ ಪೊಲೀಸರಿಗೆ ತನ್ನ ತಂದೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದ. ಅಲ್ಲದೆ, 55 ವರ್ಷದ ತಂದೆ ಯಾವುದೇ ಸಂಪರ್ಕಕ್ಕೆ ಸಿಗದೇ ಇರುವುದರಿಂದ ನಮ್ಮ ಕುಟುಂಬ ಆತಂಕದಲ್ಲಿದೆ ಎಂದು ನೊಂದು ಹೇಳಿದ್ದ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಏರ್​ಪೋರ್ಟ್​ನಿಂದ ಮಾಹಿತಿ ಪಡೆದರು. ಏರ್​ಪೋರ್ಟ್​ ಅಧಿಕಾರಿಗಳು ಕೂಡಾ ಈ ವ್ಯಕ್ತಿ ದೇಶ ಪ್ರವೇಶಿಸಿದ್ದಾಗಿ ಮಾಹಿತಿ ನೀಡಿದ್ದರು. ತಕ್ಷಣ ನಾಪತ್ತೆಯಾದ ಈ ವ್ಯಕ್ತಿಯ ಪತ್ತೆಗೆ ಪೊಲೀಸ್ ತಂಡವೂ ರಚನೆ ಆಯ್ತು. ನಾಪತ್ತೆಯಾದ ವ್ಯಕ್ತಿ ದೇಶ ಪ್ರವೇಶಿಸಿದ ಬಳಿಕ ಯಾರನ್ನೂ ಸಂಪರ್ಕಿಸಿಲ್ಲ ಎಂಬ ವಿಷಯ ತನಿಖೆ ವೇಳೆ ಗೊತ್ತಾಯ್ತು. ಬಳಿಕ ಈತ ಈ ಹಿಂದೆ ಇಲ್ಲಿ ಯಾರೊಂದಿಗಾದರೂ ಜಗಳ ಮಾಡಿಕೊಂಡಿದ್ದನಾ ಎಂಬ ಮತ್ತೆ ಪೊಲೀಸರ ಚಿತ್ತ ಹರಿಯಿತು. ಆಗ ಬಯಲಾಯ್ತು ಒಂದು ರಹಸ್ಯ…

ಆಕೆಯೊಂದಿಗೆ ಸಂಬಂಧ…! : ಚೀನಾದ ಮಹಿಳೆಯೊಂದಿಗೆ ಈ ವ್ಯಕ್ತಿಗೆ ಸಂಬಂಧ ಇತ್ತು. ಈತ ಯುಎಇಗೆ ಬರುವುದಕ್ಕೆ ಮುಂಚೆ ಈಕೆ ತನ್ನ ಮಗ ಮತ್ತು ಇತರ ಇಬ್ಬರೊಂದಿಗೆ ಇಲ್ಲಿಗೆ ಬಂದಿದ್ದಳು. ಈ ವಿಷಯ ತನಿಖೆ ವೇಳೆ ಪತ್ತೆಯಾಗಿತ್ತು. ಅಲ್ಲದೆ, ಮಹಿಳೆಗೂ ಕೊಲೆಯಾದ ವ್ಯಕ್ತಿಗೂ ಹಣಕಾಸಿನ ವಿಚಾರದಲ್ಲಿ ವೈಷಮ್ಯ ಇತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಶಂಕಿತರ ವಿರುದ್ಧ ಅಂತಾರಾಷ್ಟ್ರೀಯ ವಾರೆಂಟ್​ ಜಾರಿ ಮಾಡಿದ್ಡದರು.

ನಾಲ್ವರು ಅರೆಸ್ಟ್​ : ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಬಂಧನವಾಗಿದೆ. ಚೀನಾದ ಮಹಿಳೆ, ಆಕೆಯ ಮಗ ಮತ್ತು ಇನ್ನಿಬ್ಬರು ಪೊಲೀಸರಿಗೆ ಸಿಕ್ಕಿದ್ದಾರೆ. ವಿಚಾರಣೆ ವೇಳೆ ಇವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ವಿಸಿಟಿಂಗ್ ವೀಸಾದಲ್ಲಿ ಇವರು ಇಲ್ಲಿಗೆ ಬಂದಿದ್ದರು. ಈ ಹಂತಕರು ನೀಡಿದ ಮಾಹಿತಿಯ ಆಧಾರದಲ್ಲೇ ಪೊಲೀಸರು ಕೊಲೆಯಾದ ವ್ಯಕ್ತಿಯ ಶವವನ್ನು ಹೊರತೆಗೆದಿದ್ದಾರೆ…!

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!