ಮುಂಬೈ : ಹಿಂದಿ ಚಿತ್ರರಂಗದ ಹಿರಿಯ ನಟ ಶಕೀಲಾ ವಿಧಿವಶರಾಗಿದ್ದಾರೆ. ಬುಧವಾರ ರಾತ್ರಿ ಇವರು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು, ತೀವ್ರ ಹೃದಯಾಘಾತದಿಂದ ಶಾಖಿಯಾ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 50 ಮತ್ತು 60ರ ದಶಕದಲ್ಲಿ ಶಕೀಲಾ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದರು. ಹಲವು ಚಿತ್ರಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
