Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Kollywood / ಇದು ಕಾಳನ ಕುಟುಂಬ : ಲೀಕ್​ ಆಗಿದೆ ರಜನಿಕಾಂತ್ ಸಿನಿಮಾದ ಸ್ಟಿಲ್

ಇದು ಕಾಳನ ಕುಟುಂಬ : ಲೀಕ್​ ಆಗಿದೆ ರಜನಿಕಾಂತ್ ಸಿನಿಮಾದ ಸ್ಟಿಲ್

ಚೆನ್ನೈ : ಸೂಪರ್​ಸ್ಟಾರ್​ ರಜನಿಕಾಂತ್​ ಈಗ 2.0 ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದೊಂದು ಸೈನ್ಸ್ ಫಿಕ್ಷನ್​ ಫಿಲಂ. ಎಂದಿರನ್​ನ ಮುಂದುವರಿದ ಭಾಗ ಇದು. ಈ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಅಭಿನಯಿಸಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರ 2018ಕ್ಕೆ ರಿಲೀಸ್​ ಆಗಲಿದೆ. ಆದರೆ, ರಜನಿ ಅಭಿನಯದ ಇದೊಂದೇ ಚಿತ್ರ 2018ಕ್ಕೆ ತೆರೆಗೆ ಬರುತ್ತಿಲ್ಲ. 2.0 ಜೊತೆ ಕಾಳ ಎಂಬ ರಜನಿ ಚಿತ್ರವೂ ರಿಲೀಸ್​ ಆಗಲಿದೆ.

ಕಬಾಲಿ ಚಿತ್ರದ ನಿರ್ದೇಶಕ ಪಾ.ರಂಜಿತ್​ ನಿರ್ದೇಶನದ ಚಿತ್ರವೇ ಕಾಳ. ಇದು ಕೂಡಾ ಗ್ಯಾಂಗ್​ಸ್ಟರ್​ ಡ್ರಾಮಾ, ನಟ ಧನುಷ್​ ಈ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ. ತಿರುನವ್ವೇಲಿಯಿಂದ ಮುಂಬೈಗೆ ವಲಸೆ ಬಂದವರ ಪಾತ್ರವನ್ನು ರಜನಿ ಮಾಡುತ್ತಿದ್ದಾರೆ. ಸುಮಾರು 80ರ ದಶಕದ ಸನ್ನಿವೇಶವನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆ.

ಈ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಕುತೂಹಲಕ್ಕೆ ಸರಿಯಾಗಿ ಚಿತ್ರದ ಸ್ಟಿಲ್ ಒಂದು ಲೀಕ್ ಆಗಿದೆ. ಇದು ಕಾಳನ ಕುಟುಂಬದ ಚಿತ್ರ. ಈ ಫಿಲಂನಲ್ಲಿ ಬಾಲಿವುಡ್​ ನಟ ನಾನಾ ಪಾಟೇಕರ್​​​​​​​ ಕೂಡಾ ಅಭಿನಯಿಸುತ್ತಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!