Monday , January 22 2018
Home / Film News / Coastalwood / ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​
Buy Bitcoin at CEX.IO

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ 22 ರಂದು ಚಿತ್ರ ಕರಾವಳಿಯಾದ್ಯಂತ ತೆರೆಗೆ ಬರಲಿದೆ. ಭೂತಾರಾಧನೆಗೆ ಸಂಬಂಧಿಸಿದಂತೆ ಪರತಿ ಮಂಗಣೆ ಪಾಡ್ದನ ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಕುದ್ರಾಡಿ ಗುತ್ತು ಚಂದ್ರಶೇಖರ ಮಾಡ ಈ ಚಿತ್ರ ನಿರ್ಮಿಸಿದ್ದಾರೆ. ಬಿ.ಕೆ. ಗಂಗಾಧರ ಕಿರೋಡಿಯನ್‌ ನಿರ್ದೇಶನ ಚಿತ್ರಕ್ಕಿದೆ. ಕನ್ನಡ ಮತ್ತು ತುಳು ಸಿನೆಮಾ ಲೋಕದಲ್ಲಿ ಗುರುತಿಸಿಕೊಂಡಿರುವ ವಿ. ಮನೋಹರ್‌ ಸಾಹಿತ್ಯ ಮತ್ತು ಸಂಗೀತ ನೀಡಿದ್ದು, ಕಿರುತೆರೆ ನಟಿ ರಜನಿ ಈ ಚಿತ್ರದ ಮೂಲಕ ಕೋಸ್ಟಲ್​ವುಡ್​ಗೆ ಕಾಲಿಟ್ಟಿದ್ದಾರೆ.

ಪ್ರದೀಪ್‌ ಚಂದ್ರ, ಮನೋಹರ್‌ ವಿಠಲ್‌, ರಮೇಶ್‌ ಭಟ್‌, ಮಂಡ್ಯ ರಮೇಶ್‌, ರಘುರಾಮ ಶೆಟ್ಟಿ, ರಮೇಶ್‌ ಕಲ್ಲಡ್ಕ, ಆರ್‌. ಎನ್‌. ಶೆಟ್ಟಿ, ಕಳವಾರ್‌, ಮೋಹನ್‌ ಬೋಳಾರ್‌, ಎನ್‌.ಎಸ್‌. ರೈ, ರಾಧಾಕೃಷ್ಣ ಕುಂಬ್ಳೆ, ತಾರಾನಾಥ ಉರ್ವ, ಸುರೇಶ್‌ ನಿಟ್ಟೆ, ಸುರೇಶ್‌ ದೇವಾಡಿಗ, ಜಯಶೀಲ ಮರೋಳಿ, ವೀಣಾ ಜಯಂತ್‌, ರತ್ನಾವತಿ ಜೆ. ಬೈಕಾಡಿ, ಪವಿತ್ರಾ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

 

CEX.IO Bitcoin Exchange

About sudina

Check Also

‘ರಂಗ್​ ರಂಗ್​​ದ ದಿಬ್ಬಣ’ ಚಿತ್ರದ ವಿತರಣಾ ಹಕ್ಕು ಪಡೆದ ತೂಗುದೀಪ ಪ್ರೊಡಕ್ಷನ್ಸ್​

ಮಂಗಳೂರು : ಸ್ಯಾಂಡಲ್​ವುಡ್​ನ ಪ್ರಮುಖ ವಿತರಣಾ ಸಂಸ್ಥೆ ತೂಗುದೀಪ ಪ್ರೊಡಕ್ಷನ್ಸ್​ ಈಗ ತುಳು ಚಿತ್ರವೊಂದರ ವಿತರಣಾ ಹಕ್ಕು ಪಡೆದಿದೆ. ರಂಗ್​ …

Leave a Reply

Your email address will not be published. Required fields are marked *

error: Content is protected !!