Saturday , February 16 2019
ಕೇಳ್ರಪ್ಪೋ ಕೇಳಿ
Home / Sandalwood / ಇಲ್ಲ, ಅದೆಲ್ಲಾ ಸುಳ್ಳು… : ರಮ್ಯಾ

ಇಲ್ಲ, ಅದೆಲ್ಲಾ ಸುಳ್ಳು… : ರಮ್ಯಾ

ಬೆಂಗಳೂರು : ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಈಗ ಫುಲ್​ ಟೈಮ್ ಪಾಲಿಟೀಷಿಯನ್​. ಚಿತ್ರರಂಗದಿಂದ ದೂರ ಆಗಿರುವ ರಮ್ಯಾ ಈಗ ಕಾಂಗ್ರೆಸ್ ಪಕ್ಷದ ನಾಯಕಿ. ಇಂತಹ ರಮ್ಯಾ ಮತ್ತೆ ಸ್ಯಾಂಡಲ್​ವುಡ್​ಗೆ ಬರುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿತ್ತು. ‘ಮಹೇಂದರ್​ ಮನಸ್ಸಿನಲ್ಲಿ ಮುಮ್ತಾಜ್​‘ ಚಿತ್ರದ ಮೂಲಕ ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ರೀಎಂಟ್ರಿ ಪಡೆಯುತ್ತಿದ್ದಾರೆ ಎಂಬುದು ಬಹಳ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಆದರೆ, ಈ ಸುದ್ದಿಯನ್ನು ರಮ್ಯಾ ಅಲ್ಲಗಳೆದಿದ್ದಾರೆ. ಇವೆಲ್ಲಾ ಸುಳ್ಳು. ನಾನು ಯಾವುದೇ ಚಿತ್ರದಲ್ಲಿ ಅಭಿನಯಿಸುವುದಿಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.


ಮಹೇಂದರ್​ ಮನಸ್ಸಿನಲ್ಲಿ ಮುಮ್ತಾಜ್​ ಚಿತ್ರವನ್ನು ಎಸ್​.ಮಹೇಂದರ್​ ನಿರ್ದೇಶನ ಮಾಡುತ್ತಿದ್ದು, ನಟ ನಿರ್ದೇಶಕ ನಾಗಶೇಖರ್ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಇದು ಧರ್ಮಸಾಮರಸ್ಯರ ಸಂದೇಶ ಸಾರುವ ಚಿತ್ರವಂತೆ… ಆದರೆ, ರಮ್ಯಾ ಈ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕೇಳಿದ ಕೂಡಲೇ ಅವರ ಅಭಿಮಾನಿಗಳು ಪುಳಕಗೊಂಡಿದ್ದರು. ಆದರೆ, ಈ ಅಭಿಮಾನಿಗಳಿಗೆ ಈಗ ನಿರಾಸೆ ಆಗಿದ್ದಂತೂ ಸತ್ಯ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!