Saturday , January 19 2019
ಕೇಳ್ರಪ್ಪೋ ಕೇಳಿ
Home / Sandalwood / ಕನ್ನಡಕ್ಕೆ ವಿಕ್ರಂ ವೇದ… : ಮೂರು ಭಾಷೆಯ ರಿಮೇಕ್​​ನಲ್ಲಿ ಇರಲಿದ್ದಾರಾ ಕಿಚ್ಚ…?

ಕನ್ನಡಕ್ಕೆ ವಿಕ್ರಂ ವೇದ… : ಮೂರು ಭಾಷೆಯ ರಿಮೇಕ್​​ನಲ್ಲಿ ಇರಲಿದ್ದಾರಾ ಕಿಚ್ಚ…?

ಬೆಂಗಳೂರು : ಕಾಲಿವುಡ್​​ನ ಸೂಪರ್​ಹಿಟ್​ ಚಿತ್ರ ವಿಕ್ರಂ ವೇದ ಈಗ ಕನ್ನಡ ಸೇರಿದಂತೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿದೆ. ಈ ಬಗ್ಗೆ ಮಾತುಕತೆ  ನಡೆಯುತ್ತಿದೆ. ಮಾಧವನ್ ಮತ್ತು ವಿಜಯ್​ ಸೇತುಪತಿ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಖತ್​ ಹೆಸರು ಮಾಡಿತ್ತು. ವಿಮರ್ಶಕರಿಂದಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮಾಧವನ್​ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರೆ, ವಿಜಯ್ ಸೇತುಪತಿ ಗ್ಯಾಂಗ್​ಸ್ಟರ್ ಪಾತ್ರ ಮಾಡಿದ್ದರು. ಕನ್ನಡತಿ ಶೃದ್ಧಾ ಶ್ರೀನಾಥ್​ ಅವರು ಕೂಡಾ ಮಾಧವನ್ ಪತ್ನಿಯ ಪಾತ್ರ ನಿರ್ವಹಿಸಿದ್ದರು.

ಈ ಚಿತ್ರ ಈಗ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗೆ ರಿಮೇಕ್​ ಆಗಲಿದೆ.ನಿರ್ಮಾಪಕ ಸಿ.ಮನೋಹರ್​ ಈ ಚಿತ್ರದ ರಿಮೇಕ್​ ರೈಟ್ಸ್​ ಖರೀದಿಸಲು ಮೂಲ ನಿರ್ಮಾಪಕರನ್ನು ಸಂಪರ್ಕಿಸಿದ್ದಾರೆ. ಮನೋಹರ್​​​ ತಲೆಯಲ್ಲಿ ಕಿಚ್ಚ ಸುದೀಪ್​​ ಅವರು ಈ ಪಾತ್ರವನ್ನು ನಿರ್ವಹಿಸಬೇಕು ಎಂಬ ಯೋಚನೆ ಇದೆ. ಆದರೆ, ಇನ್ನೊಂದು ಕಡೆ, ಚಿತ್ರದ ಮೂಲ ನಿರ್ಮಾಪಕರೇ ಈ ಚಿತ್ರವನ್ನು ಬೇರೆ ಭಾಷೆಗೆ ರಿಮೇಕ್ ಮಾಡಲು ನಿರ್ಧರಿಸಿದ್ದಾರಂತೆ. ಹೀಗಾಗಿ, ಈ ಸಂಗತಿ ಇನ್ನೂ ಮಾತುಕತೆ ಹಂತದಲ್ಲಿದೆ. ಯಾರೇ ರಿಮೇಕ್ ಮಾಡಿದರೂ ವಿಕ್ರಮ್​ ವೇದ ಸ್ಯಾಂಡಲ್​ವುಡ್​ಗೆ ಬರುವುದು ಮಾತ್ರ ನಿಶ್ಚಿತವಾಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!