Monday , February 18 2019
ಕೇಳ್ರಪ್ಪೋ ಕೇಳಿ
Home / Earth / 100 ವರ್ಷ ಪ್ರಾಯದ ದೈತ್ಯ ಮೊಸಳೆಯನ್ನು ಗುಂಡಿಟ್ಟು ಕೊಂದ ಪಾಪಿಗಳು

100 ವರ್ಷ ಪ್ರಾಯದ ದೈತ್ಯ ಮೊಸಳೆಯನ್ನು ಗುಂಡಿಟ್ಟು ಕೊಂದ ಪಾಪಿಗಳು

ಸಿಡ್ನಿ : ಕೇಂದ್ರ ಕ್ವೀನ್​​ಲ್ಯಾಂಡ್​ನ ಫಿಟ್ಜ್ರಾಜ್ ನದಿಯಲ್ಲಿದ್ದ ದೈತ್ಯ ಮೊಸಳೆಯನ್ನು ದುಷ್ಕಮಿಗಳು ಗುಂಡಿಟ್ಟು ಕೊಂದಿದ್ದಾರೆ. ಹೀಗಾಗಿ, ಪೊಲೀಸರು ಈ ದುಷ್ಕರ್ಮಿಗಳ ಬೇಟೆ ಶುರು ಮಾಡಿದ್ದಾರೆ. ಅಲ್ಲದೆ, ಈ ಮೊಸಳೆಯನ್ನು ಕೊಂದಿದ್ದರಿಂದ ಇನ್ನೊಂದಷ್ಟು ದಿನ ಈ ನದಿಯಲ್ಲಿರುವ ಬೇರೆ ಮೊಸಳೆಗಳು ಇನ್ನಷ್ಟು ಆಕ್ರಮಣಕಾರಿಯಾಗಿರಲಿವೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಸುಮಾರು 5.2 ಮೀಟರ್​ ಉದ್ದ ಇರುವ ಈ ಗಂಡು ಮೊಸಳೆಯ ತಲೆಗೆ ಒಂದೇ ಒಂದು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಕೃತ್ಯಕ್ಕೆ ಎಲ್ಲೆಲ್ಲೂ ಖಂಡನೆ ವ್ಯಕ್ತವಾಗಿದೆ. ಈ ಮೊಸಳೆಗೆ ಸುಮಾರು 80ರಿಂದ 100 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು, ಈ ನದಿಯಲ್ಲಿರುವ ಇತರ ಗಂಡು ಮೊಸಳೆಗಳು ಈಗ ಇನ್ನಷ್ಟು ಆಕ್ರಮಣಕಾರಿಯಾಗಲಿವೆ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಇಷ್ಟರ ವರೆಗೆ ಈ ನದಿಯಲ್ಲಿರುವ ಈ ದೈತ್ಯ ಮೊಸಳೆಯೇ ನಾಯಕನಂತಿತ್ತು. ಈಗ ಈ ಸ್ಥಾನಕ್ಕಾಗಿ ಇತರ ಮೊಸಳೆಗಳ ಹೋರಾಟ ನಡೆಯುವುದು ಸಾಮಾನ್ಯ. ಹೀಗಾಗಿ, ಉಳಿದ ಗಂಡು ಮೊಸಳೆಗಳಲ್ಲಿ ಇನ್ನು ಹೆಚ್ಚೆಚ್ಚು ಆಕ್ರಮಣಕಾರಿ ಪ್ರವೃತ್ತಿ ಬೆಳೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

About sudina

Check Also

ಮಾವುತ ಬಾರದ ನೋವು… ನೋವಲ್ಲೇ ಪ್ರಾಣ ತ್ಯಜಿಸಿದ ಆನೆ ಮರಿ…!

ಶಿವಮೊಗ್ಗ : ಇದು ಮೂಕ ಜೀವವೊಂದರ ಮನಕಲಕುವ ಸುದ್ದಿ… ನೋವಲ್ಲಿ ಪ್ರಾಣ ತ್ಯಜಿಸಿದ ಅಮಾಯಕ ಮರಿಯ ನೋವು…! ಇದು ನಡೆದದ್ದು …

Leave a Reply

Your email address will not be published. Required fields are marked *

error: Content is protected !!